ಚಾಮರಾಜನಗರ:- ಗ್ಯಾರಂಟಿ ಯೋಜನೆಗಳನ್ನ ಸಮರ್ಪಕವಾಗಿ ಜನತೆಗೆ ತಲುಪಿಸಲು ಮತ್ತು ಕುಂದು ಕೊರತೆ ನಿವಾರಸಲು ಗ್ರಾ ಪಂ ಮಟ್ಟದಲ್ಲೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದೆಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಲ್ಲೂರು ಸೋಮೇಶ್ವರ ತಿಳಿಸಿದರು,
ಬುಧವಾರ ಚಾಮರಾಜನಗರ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಮಾಸಿಕ ಸಭೆಯು ಚಾಮರಾಜನಗರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ಸೋಮೇಶ್ವರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗಳು ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ರೀತಿಯಲ್ಲಿ ಸೇವೆ ನೀಡುತ್ತಿಲ್ಲ ಹಾಗೂ ಕೆಲವು ಬಸ್ ಗಳಲ್ಲಿ ಮಹಿಳೆಯರಿಗೆ ಚಾಲಕ ನಿರ್ವಾಕರು ಅಗೌರವದಿಂದ ನಡೆದುಕೊಳ್ಳುತ್ತಾರೆ ಕೆಲವಡೆ ಬಸ್ ನಿಲುಗಡೆ ಮಾಡದೆ ಮಹಿಳಾ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯರಾದ ಮಾದಪುರ ಕುಮಾರ್ ರವರು ಸಭೆಯ ಗಮನಕ್ಕೆ ತಂದರು,ಈ ಸಂಧರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಸಭೆಗೆ ಹಾಜರಾಗದೆ ಇದ್ದುದರ ಬಗ್ಗೆ ಸದಸ್ಯರು ಬೇಸರ ವ್ಯಕ್ತಪಡಿಸಿದರು,ಯಡ ಬೆಟ್ಟದ ಸಿಮ್ಸ್ ಕಾಲೇಜಿನಲ್ಲಿ ಈಗ ವಿವಿಧ ಕೋರ್ಸ್ ಗಳು ಪ್ರಾರಂಭವಾಗಿದ್ದು ಸಂಜೆ ವೇಳೆ ವಿದ್ಯಾರ್ಥಿಗಳು ಬಸ್ ಗಾಗಿ ಪರದಾಡಬೇಕಾಗಿದೆ ಆದ್ದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿನಿಯರಿಗೆ ಅನುಕೂಲಮಾಡಿ ಕೊಡಬೇಕೆಂದು ಮರಿಯಾಲ ಕುಮಾರ್ ಸಭೆಯಲ್ಲಿ ಆಗ್ರಹಿಸಿದರು ಈ ಬಗ್ಗೆ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದು ಬಸ್ ವ್ಯವಸ್ಥೆ ಕಲ್ಪಿಸಲಾಗುವುದೆಂದು ಅಧ್ಯಕ್ಷರಾದ ಸೋಮೇಶ್ವರ್ ಸಭೆಯಲ್ಲಿದ್ದ ಸದಸ್ಯರಿಗೆ ಭರವಸೆ ನೀಡಿದರು,

ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಟವಾಗುತ್ತಿರುವ ಬಗ್ಗೆ ಇಂದಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು ಇದಕ್ಕೆ ಅಧ್ಯಕ್ಷರು ಆಹಾರ ಇಲಾಖೆಯ ನಿರೀಕ್ಷರಾದ ಚಿಕ್ಕಣ್ಣರವರಿಗೆ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆ ಕರೆದು ಪಡಿತರ ಅಕ್ಕಿ ಮಾರಾಟ ಮಾಡಿದವರಿಗೆ ಒಂದೇರಡು ತಿಂಗಳು ಪಡಿತರ ವಿತರಿಸದಂತೆ ಎಚ್ಚರಿಕೆ ನೀಡುವಂತಹ ಪ್ರಕಟಣೆಗಳನ್ನು ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಣೆ ಹೊರಡಿಸಿ ಪ್ರಚಾರ ಮಾಡಬೇಕೆಂದು ಆ ಮೂಲಕ ಪಡಿತರದಾರರಿಗೆ ಜಾಗೃತಿ ಮೂಡಿಸಬೇಕೆಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು,
ಜುಲೈ 2025 ರ ಅಂತ್ಯಕ್ಕೆ ಗೃಹ ಜ್ಯೋತಿಯ ಫಲಾನುಭವಿಗಳು ಶೇ99,ಜುಲೈ ಅಂತ್ಯಕ್ಕೆ ಶಕ್ತಿಯೋಜನೆಯ ಮಹಿಳಾ ಪ್ರಯಾಣಿಕರ ಸಂಖ್ಯೆ ೪೧೨೬೧೩೯ ಇದರಿಂದ ನಿಗಮಕ್ಕೆ ಬಂದ ಆದಾಯ ಶೇ 63.59 , ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಮೇ ತಿಂಗಳವರೆಗೆ ಫಲಾನುಭವಿಗಳ ಖಾತೆ ಹಣ ಜಮಾವಣೆಯಾಗಿ ಉಳಿದಂತೆ ಜೂನ್ ಜುಲೈ ಮಾಹೆಯ ಹಣವು ತಾಂತ್ರಿಕ ಕಾರಣಗಳಿಂದ ಫಲಾನುಭವಿಗಳ ಖಾತೆಗೆ ಬಂದಿಲ್ಲ ಕೆಲವು ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿದ ಬಳಿಕ ಗೌರಿ ಗಣೇಶ ಹಬ್ಬದ ವೇಳೆಗೆ ಬಾಕಿ ಗೃಹಲಕ್ಷಿ ಹಣ ಬರಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮುಂದಿನ ಸೆಪ್ಟೆಂಬರ್ 3 ರ ಬುಧವಾರ ಹರದನಹಳ್ಳಿ ಹೋಬಳಿ ಕೇಂದ್ರದಲ್ಲಿ 9 ಗ್ರಾ ಪಂ ಗಳ ಫಲಾನುಭವಿಗಳ ಸಂವಾದ ಸಭೆ ನಡೆಸಲಾಗುವುದೆಂದು ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿರಿಧರ್ ರವರು ಸಭೆಯಲ್ಲಿ ಹಾಜರಿದ್ದ ಸದಸ್ಯರ ಗಮನಕ್ಕೆ ತಂದರು.
ಸಭೆಯಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರಾದ ಚಿನ್ನಸ್ವಾಮಿ,ಆರ್ ರಾಜು, ಸು ಕುಮಾರ್ ಮಂಜುಳ ಮಲ್ಲಿಕಾರ್ಜುನ್ ಎಂ.ಕುಮಾರ್ ಸಿದ್ದಿಕ್ ರಮೇಶ್,ರಂಗಸ್ವಾಮಿ ಸಿಬ್ಬಂದಿಗಳಾದ ರವಿಕುಮಾರ್ ಇತರರು ಹಾಜರಿದ್ದರು,
-ಶ್ರೀ ಸಾಯಿ ಎಸ್ ಮಂಜು
