ಕೆ.ಆರ್.ಪೇಟೆ: ತಾಲ್ಲೂಕಿನ ಹೊಸಹೊಳಲು ಗ್ರಾಮದ ತಾಯಂದಿರು ಓಂಶಕ್ತಿ ದರ್ಶನಕ್ಕೆ ಹೋಗುತ್ತಿದ್ದು ಅವರಿಗೆ ಬಸ್ಸಿನ ವೆಚ್ಚವನ್ನು ನೀಡಿದ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಹೊಸಹೊಳಲು ನಂಜುಂಡಸ್ವಾಮಿ ಅವರು 4ದಿನಗಳ ಓಂಶಕ್ತಿ ಯಾತ್ರೆಯು ಸುಖಕರವಾಗಿರಲಿ ಎಂದು ಶುಭಹಾರೈಸಿದರು.
ಬಳಿಕ ಮಾತನಾಡಿದ ನಂಜುಂಡಸ್ವಾಮಿ ಅವರು ದೇವರನ್ನು ನಿರ್ಮಲ ಮನಸ್ಸಿನಿಂದ ಭಕ್ತಿಯಿಂದ ಪೂಜಿಸಿ ದೇವರ ಹೆಸರಿನಲ್ಲಿ ಬಡವರಿಗೆ ದಾನ ಧರ್ಮ ಮಾಡಿದರೆ ಬಡವರ ಸೇವೆಯಲ್ಲಿ ದೇವರನ್ನು ಕಾಣಬಹುದು.

ಕಣ್ಣಿಗೆ ಜಾಣುವ ದೇವರುಗಳಾದ ತಂದೆತಾಯಿಗಳನ್ನು ಯಾರೂ ಸಹ ಕಡೆಗಣಿಸಬಾರದು. ಕಡೆಗಣಿಸಿದರೆ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ತಂದೆ ತಾಯಿಗಳನ್ನು ಚನ್ನಾಗಿ ನೋಡಿಕೊಂಡರೆ ಮಾತ್ರ ದೇವರ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ ಇಲ್ಲದಿದ್ದರೆ ದೇವರೂ ಕೂಡ ತಮ್ಮನ್ನು ಕ್ಷಮಿಸುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಓಂಶಕ್ತಿ ವ್ರತದಾರಿಗಳು ದೇವರ ಬಗ್ಗೆ ಎಷ್ಟು ಹೊಂದಿರುವ ಕಾಳಜಿಯನ್ನು ತಂದೆ ತಾಯಿಗಳ ಬಗ್ಗೆಯೂ ಹೊಂದಬೇಕು. ತಂದೆತಾಯಿಗಳು ಇರುವ ತನಕ ಅವರನ್ನು ಚನ್ನಾಗಿ ನೋಡಿಕೊಳ್ಳುವ ಮೂಲಕ ದೇವರ ಪ್ರೀತಿಗೆ ಪಾತ್ರರಾಗಬೇಕು ಎಂದು ನಂಜುಂಡಸ್ವಾಮಿ ಮನವಿ ಮಾಡಿದರು.

ಈ ವೇಳೆ ಓಂಶಕ್ತಿ ವ್ರತದಾರಿಗಳು ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಹಾಗೂ ಹೊಸಹೊಳಕು ಓಂಶಕ್ತಿ ಸೇವಾ ಸಮಿತಿಯ ವ್ರತದಾರಿಗಳು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
