ಚನ್ನರಾಯಪಟ್ಟಣ: ನವೋದಯ ವಿದ್ಯಾ ಸಂಸ್ಥೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80ರಷ್ಟು ಫಲಿತಾಂಶ ದಾಖಲಿಸಿದ್ದು, ಇದು ಸಂಸ್ಥೆಗೆ ಸಂತಸದ ವಿಚಾರವಾಗಿದೆ ಎಂದು ನವೋದಯ ವಿದ್ಯಾ ಸಂಘದ ಅಧ್ಯಕ್ಷ ಮುರಾಜಿ ಮಂಜಣ್ಣ ತಿಳಿಸಿದ್ದಾರೆ.
ಪಟ್ಟಣದ ನವೋದಯ ವಿದ್ಯಾ ಸಂಸ್ಥೆಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದುಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಸಾಧನೆಗೆ ಶ್ರಮಿಸಿದ ಶಿಕ್ಷಕರಿಗೆ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಇದೇ ವೇಳೆ, ನವೋದಯ ಶಾಲೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ ಅವರು, ಸಂಸ್ಥೆಯ ಏಳಿಗೆಗಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸುತ್ತಿರುವ ಬೋಧಕೇತರ ಸಿಬ್ಬಂದಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಡಾ. ಶೇಷಶಯನ, ಅಧ್ಯಕ್ಷ ಸಿ.ಜೆ. ಮಂಜುನಾಥ್, ಉಪಾಧ್ಯಕ್ಷ ಪ್ರಮೋದ್, ಕಾರ್ಯದರ್ಶಿ ಶರತ್ ಕೆ.ಪಿ., ಸಹ ಕಾರ್ಯದರ್ಶಿ ಮರುವನಹಳ್ಳಿ ಸಂತೋಷ್, ಖಜಾಂಚಿ ಜಲೇಂದ್ರ, ನಿರ್ದೇಶಕರಾದ ರಂಗೇಗೌಡ, ಕೆ.ಆರ್. ಶಿವಕುಮಾರ್, ಕಾಳೇನಹಳ್ಳಿ ಆನಂದ ಕುಮಾರ್, ರಾಘವೇಂದ್ರ, ಕುಮಾರಸ್ವಾಮಿ, ಗನ್ನಿಗಿರೀಶ್, ಆದರ್ಶ, ಪ್ರಾಂಶುಪಾಲ ಎ.ಟಿ. ಸಂಜಯ್ ಕುಮಾರ್, ದೊಡ್ಡಕುಂಚೇವು ನವೋದಯ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಸುಮಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ ಕೆ
