ಯುವಕರ ಭಾವನಾತ್ಮಕ ಬದುಕಿಗೆ ಮಾರ್ಗದರ್ಶನ ನೀಡಲು ದೆಹಲಿ ವಿಶ್ವವಿದ್ಯಾಲಯದಲ್ಲಿ ಹೊಸ ಶೈಕ್ಷಣಿಕ ಕೋರ್ಸ್

ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವದಿಂದಾಗಿ ಪ್ರೀತಿ ಮತ್ತು ಸಂಬಂಧಗಳ ಸ್ವರೂಪವೇ ಬದಲಾಗುತ್ತಿರುವ ಜಗತ್ತಿನಲ್ಲಿ, ದೆಹಲಿ ವಿಶ್ವವಿದ್ಯಾಲಯ ‘ನೆಗೋಷಿಯೇಟಿಂಗ್ ಇಂಟಿಮೇಟ್ ರಿಲೇಶನ್‌ಶಿಪ್ಸ್’ ಎಂಬ ಹೊಸ ಕೋರ್ಸ್‌ ಅನ್ನು ಪರಿಚಯಿಸಿದೆ. ಈ ಕೋರ್ಸ್ ಯುವಜನತೆಗೆ ಭಾವನಾತ್ಮಕವಾಗಿ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಲಿದೆ.