ಯದುಕುಲದ ಚಾಮರಾಜ ಒಡೆಯರು ನಗರದ ಜನನ ಮಂಟಪದಲ್ಲಿ ಜನಿಸಿದ್ದರು. ಇದರ ಸ್ಮರಣಾರ್ಥ ಇವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಶ್ರೀಚಾಮರಾಜೇಶ್ವರ ದೇಗುಲ ನಿರ್ಮಾಣ ಮಾಡಿದರು. ನವರತ್ನಗಳ ರಾಜ ಎಂದು ಬಿರುದನ್ನು ಪಡೆದುಕೊಂಡಿದ್ದ ಮುಮ್ಮಡಿಕೃಷ್ಣರಾಜ ಒಡೆಯರ ಜನ್ಮನಕ್ಷತ್ರದಂತೆ ಆಚಂದ್ರಾರ್ಕ ಸೇವೆ ನಡೆಯಲಿ ಎಂಬ ಉದ್ದೇಶದಿಂದ ಆಷಾಢಮಾಸದಲ್ಲಿ ಬರುವ ಹುಣ್ಣಿಮೆಯನ್ನು ಒಳಗೊಂಡ ಪೂರ್ವಾಷಾಢ ನಕ್ಷತ್ರದಲ್ಲಿ ಶ್ರೀಚಾಮರಾಜೇಶ್ವರಸ್ವಾಮಿ ಬ್ರಹ್ಮ ರಥೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
Copy and paste this URL into your WordPress site to embed
Copy and paste this code into your site to embed