ನವದೆಹಲಿ: ಮಾಜಿ ಸೈನಿಕರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೇಂದ್ರ ಸೈನಿಕ್ ಬೋರ್ಡ್ ಮೂಲಕ ಜಾರಿಗೆರುವ ವಿವಿಧ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಹಣಕಾಸು ಸಹಾಯವನ್ನು 100 ಶೇಕಡಾ ಹೆಚ್ಚಳ ಮಾಡುವುದಕ್ಕೆ ಅನುಮೋದನೆ ನೀಡಿದ್ದಾರೆ.
ಈ ಪರಿಷ್ಕೃತ ದರಗಳು 2025ರ ನವೆಂಬರ್ 1ರಿಂದ ಜಾರಿಗೆ ಬರಲಿವೆ. ಈ ನಿಧಿಯನ್ನು ರಕ್ಷಣಾ ಸಚಿವ ಮಾಜಿ ಸೈನಿಕ ಕಲ್ಯಾಣ ನಿಧಿ (Raksha Mantri Ex-Servicemen Welfare Fund) ಮೂಲಕ ಒದಗಿಸಲಾಗುತ್ತದೆ. ಈ ನಿಧಿ Armed Forces Flag Day Fundನ ಉಪವಿಭಾಗವಾಗಿದ್ದು, ಮಾಜಿ ಸೈನಿಕರ ಹಾಗೂ ಅವರ ಕುಟುಂಬಗಳ ಹಿತಾಸಕ್ತಿಗೆ ಬಳಸಲಾಗುತ್ತದೆ.
ಈ ನಿರ್ಧಾರವು ಮಾಜಿ ಸೈನಿಕರ ಕಲ್ಯಾಣ ಹಾಗೂ ಅವರ ಕುಟುಂಬದ ಭದ್ರತೆಗೆ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆ ತಿಳಿಸಿದೆ.

[…] ಇದನ್ನು ಓದು: ನವದೆಹಲಿ : ಮಾಜಿ ಸೈನಿಕರು ಹಾಗೂ ಅವರ ಕುಟುಂಬ… […]
[…] ನವದೆಹಲಿ : ಮಾಜಿ ಸೈನಿಕರು ಹಾಗೂ ಅವರ ಕುಟುಂಬ… […]
[…] ಇದನ್ನು ಓದಿ: ನವದೆಹಲಿ : ಮಾಜಿ ಸೈನಿಕರು ಹಾಗೂ ಅವರ ಕುಟುಂಬ… […]