ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಪಾವತಿ ವ್ಯವಸ್ಥೆ ನಿರ್ವಾಹಕರ (Payment System Operators – PSOs)ಿಗಾಗಿ ಸ್ಥಾಪಿಸಲಾದ Self-Regulated PSO Association (SRPA) ಅನ್ನು ಅಧಿಕೃತವಾಗಿ ಸ್ವಯಂ-ನಿಯಂತ್ರಕ ಸಂಸ್ಥೆ ಎಂದು ಗುರುತಿಸಿದೆ. ಈ ಮೂಲಕ SRPA ಇದೀಗ RBI ಮತ್ತು ದೇಶದ ವಿವಿಧ ಡಿಜಿಟಲ್ ಪಾವತಿ ಸಂಸ್ಥೆಗಳ ನಡುವೆ ಸಂಪರ್ಕದ ಮುಖ್ಯ ವೇದಿಕೆ ಆಗಿ ಕಾರ್ಯನಿರ್ವಹಿಸಲಿದೆ.
ರೇಜರ್ಪೇ (Razorpay), ಫೋನ್ಪೇ (PhonePe), ಬಿಲ್ಡೆಸ್ಕ್ (BillDesk) ಸೇರಿದಂತೆ ದೇಶದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆಗಳು SRPA ಯ ಪ್ರಮುಖ ಸದಸ್ಯರಾಗಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದು: ಎಸ್ಐಬಿ ಹರ್ ಅಕೌಂಟ್ “ ಮಹಿಳೆಯರಿಗಾಗಿ ವಿಶೇಷ ಖಾತೆ ಯೋಜನೆ ಆರಂಭಿಸಿದ ಸೌತ್ ಇಂಡಿಯನ್ ಬ್ಯಾಂಕ್
SRPA ಯ ಪ್ರಮುಖ ಜವಾಬ್ದಾರಿಗಳು:
• ಉದ್ಯಮದ ಮಾನದಂಡಗಳು ಮತ್ತು ಅನುಸರಣೆ ನೀತಿಗಳನ್ನು ರೂಪಿಸುವುದು
• ಪಾವತಿ ವ್ಯವಸ್ಥೆ ನಿರ್ವಾಹಕರ ನಡುವೆ ಉದ್ಭವಿಸುವ ವಿವಾದಗಳಿಗೆ ಪರಿಹಾರ ಕಾರ್ಯವಿಧಾನಗಳನ್ನು ಒದಗಿಸುವುದು
• ಎಲ್ಲಾ ಸದಸ್ಯ ಸಂಸ್ಥೆಗಳಲ್ಲಿ ನೈತಿಕ ನಡವಳಿಕೆಯನ್ನು ಖಚಿತಪಡಿಸುವುದು
• ನಾವೀನ್ಯತೆ ಮತ್ತು ಸುರಕ್ಷತೆಯ ನಡುವಿನ ಸಮತೋಲನ ಕಾಯ್ದುಕೊಳ್ಳಲು RBI ಯ ನಿಯಂತ್ರಕ ಮೇಲ್ವಿಚಾರಣೆಗೆ ಸಹಕರಿಸುವುದು
RBI ಯ ಈ ನಿರ್ಧಾರದಿಂದ ಭಾರತದ ಡಿಜಿಟಲ್ ಪಾವತಿ ಪರಿಸರವು ಇನ್ನಷ್ಟು ಸುಸಂಘಟಿತ, ಸುರಕ್ಷಿತ ಮತ್ತು ಪಾರದರ್ಶಕವಾಗುವುದಾಗಿ ಉದ್ಯಮ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
