ನವದೆಹಲಿ: ಕೇಂದ್ರ ಸಚಿವ ಸಂಪುಟವು ಪ್ರಧಾನಮಂತ್ರಿ ಸ್ವನಿಧಿ (PM SVANidhi) ಯೋಜನೆಯನ್ನು ಪುನರ್ರಚಿಸಿ 2030 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. 2020ರಲ್ಲಿ ಕೋವಿಡ್ ಸಮಯದಲ್ಲಿ ಪರಿಚಯಿಸಲಾದ ಈ ಯೋಜನೆ ದೇಶದ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು, ಸಣ್ಣ ಮಟ್ಟದ ಸಾಲ ಸೌಲಭ್ಯ ಒದಗಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.
ಇದರಿಂದಾಗಿ ಬೀದಿ ವ್ಯಾಪಾರಿಗಳಿಗೆ ದೀರ್ಘಾವಧಿಯ ಆರ್ಥಿಕ ಭದ್ರತೆ ಒದಗಿಸುವುದರೊಂದಿಗೆ, ಡಿಜಿಟಲ್ ವಹಿವಾಟು ಪ್ರೋತ್ಸಾಹ, ಕ್ರೆಡಿಟ್ ಸ್ಕೋರ್ ಸುಧಾರಣೆ ಹಾಗೂ ಜೀವನೋಪಾಯದಲ್ಲಿ ಸ್ಥಿರತೆ ತರಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯೋಜನೆ ವಿಸ್ತರಣೆ ಮೂಲಕ ದೇಶದ ಲಕ್ಷಾಂತರ ಬೀದಿ ವ್ಯಾಪಾರಿಗಳು ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.
