ನವದೆಹಲಿ- ರಾಜ್ ಕುಮಾರ್ ಅರೋರಾ ರಕ್ಷಣಾ ಲೆಕ್ಕಪರಿಶೋಧಕರ ಮಹಾನಿಯಂತ್ರಕರಾಗಿ ಅಧಿಕಾರ ಸ್ವೀಕಾರ

ಶ್ರೀ ರಾಜ್ ಕುಮಾರ್ ಅರೋರಾ ಅವರು ರಕ್ಷಣಾ ಲೆಕ್ಕಪರಿಶೋಧಕರ ಮಹಾನಿಯಂತ್ರಕರಾಗಿ ಅಧಿಕಾರ ಸ್ವೀಕರಿಸಿದರು. 1990ರ ಐಡಿಎಎಸ್ ಬ್ಯಾಚ್‌ನ ಅಧಿಕಾರಿ ಅವರು ಹಣಕಾಸು ನೀತಿ, ಲೆಕ್ಕಪರಿಶೋಧನೆ, ಬಜೆಟ್, ಖರೀದಿ ಮತ್ತು ಸಿಬ್ಬಂದಿ ನಿರ್ವಹಣೆಯಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ.