ಬೆಂಗಳೂರು: ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ಸಂಚಾರ ಪೊಲೀಸರ ಎಡವಟ್ಟಿನಿಂದಾಗಿ ಮಗು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ನಗರದಲ್ಲಿ ಹೊಸ ಮರ್ಗಸೂಚಿಯನ್ನು ಹೊರಡಿಸಲಾಗಿದೆ
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಎಲ್ಲಾ ಹಿರಿಯ ಅಧಿಕಾರಿಗಳಿಗೆ ಹಾಗೂ ಇನ್ಸ್ಪೆಕ್ಟರ್ ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.
ನಗರ ಸಂಚಾರ ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿಗಳು:
- ಸಿಬ್ಬಂದಿ ರಿಪ್ಲೇಕ್ಸ್ ಜಾಕೆಟ್ ಕಡ್ಡಾಯವಾಗಿ ಧರಿಸಬೇಕು
- ನಾಕಾ ಬಂದಿ ಸ್ಥಳದಲ್ಲಿರುವ ಬ್ಯಾರಿಕೆಡ್ಗಳ ಮೇಲೆ ರಿಪ್ಲೇಕ್ಸ್ ಲೈಟ್ಸ್ ಬಳಸಬೇಕು
- ಜಿಗ್ ಜಾಗ್ ಬ್ಯಾರಿಕೇಡ್ ಹಾಕಿಕೊಳ್ಳಬೇಕು
- ಜನರೊಂದಿಗೆ ಸೌಮ್ಯವಾಗಿ ನಡೆದುಕೊಳ್ಳಬೇಕು
- ಮಕ್ಕಳೊಂದಿಗೆ ಬರುವವರನ್ನು ಪಕ್ಕದಲ್ಲಿ ನಿಲ್ಲಿಸಿ ಬಗೆಹರಿಸಿಕೊಳ್ಳಬೇಕು
- ಅವಘಡಗಳಾದರೆ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳದಲ್ಲಿರುವ ಸಿಬ್ಬಂದಿಗಳೇ ಜವಾಬ್ದಾರರಾಗುತ್ತಾರೆ
