ಕೆ.ಆರ್.ಪೇಟೆ,ಫೆ.24: ಬೇಲೂರು-ಹಳೆಬೀಡು ಮಾದರಿಯಲ್ಲಿ ಹೊಯ್ಸಳರ ಶಿಲ್ಪಕಲೆಯನ್ನು ಹೊಂದಿರುವ ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಶ್ರೀಲಕ್ಷ್ಮೀ ನಾರಾಯಣಸ್ವಾಮಿಯವರ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಶಾಸಕ ಹೆಚ್.ಟಿ.ಮಂಜು ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಾಡಿನ ವಿವಿಧ ಭಾಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ಲಕ್ಷ್ಮೀ ನಾರಾಯಣಸ್ವಾಮಿಗೆ ಉಘೇ..ಉಘೇ..ಶ್ರೀನಿವಾಸ ಗೋವಿಂದ ಗೋವಿಂದ.. ಉಘೇ.. ಉಘೇ.. ವೆಂಕಟರಮಣಸ್ವಾಮಿಗೆ ಉಘೇ.. ಉಘೇ… ಜಯಘೋಷಗಳನ್ನು ಕೂಗುತ್ತಾ ರಥವನ್ನು ಎಳೆದು ಹಣ್ಣುಜವನ ಅರ್ಪಿಸಿ ಕೃತಾರ್ಥರಾದರು.
ತಾಲ್ಲೂಕು ತಹಸೀಲ್ದಾರ್ ಲೋಕೇಶ್, ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್ ಹಾಗೂ ದೇವಾಲಯದ ಧರ್ಮದರ್ಶಿಗಳಾದ ರಾಮಚಂದ್ರು, ಡಾ.ಶ್ರೀನಿವಾಸಶೆಟ್ಟಿ, ನಂದಕುಮಾರ್, ಹೆಚ್.ಆರ್.ಲೋಕೇಶ್, ಸೋಮಶೇಖರ್, ಮಾಸ್ಟರ್ ಶಿವಣ್ಣ, ಉದ್ಯಮಿ ನಂಜುಂಡಸ್ವಾಮಿ, ರಾಮೇಗೌಡ, ಅರವಟ್ಟಿಗೆ ಸೇವಾರ್ಥದಾರರಾದ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ಶಾಸಕರೊಂದಿಗೆ ಕೈಜೋಡಿಸಿ ರಥೋತ್ಸವದ ರಂಗನ್ನು ಹೆಚ್ಚಿಸಿದರು. ಶಾಸಕ ಹೆಚ್.ಟಿ.ಮಂಜು ಮಾತನಾಡಿ ಹಬ್ಬ ಹರಿದಿನಗಳು ಜಾತ್ರೆ-ರಥೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ ರಥೋತ್ಸವದ ಸಂಭ್ರಮದಲ್ಲಿ ಎಲ್ಲಾ ಜಾತಿ ವರ್ಗಗಳ ಜನರು ಒಂದಾಗಿ ಭಗವಂತನ ನಾಮ ಸ್ಮರಣೆ ಮಾಡಿದಾಗ ಸಾಮಾಜಿಕ ಅಸಮಾನತೆ ದೂರಾಗಿ ಪರಸ್ಪರ ಪ್ರೀತಿ ವಿಶ್ವಾಸ ಸ್ನೇಹ ಸೌಹಾರ್ದತೆ ಮೂಡಲಿದೆ ಇಂದಿನ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ , ಶ್ರೀರಥದ ಕಳಸಕ್ಕೆ ಹಣ್ಣು ಜವನವನ್ನು ಸಮರ್ಪಿಸಿ ಧನ್ಯತಾ ಭಾವನೆಯನ್ನು ಮೆರೆದಿದ್ದಾರೆ ಎಂದು ಶಾಸಕರು ಹೇಳಿದರು. ಹೊಸಹೊಳಲು ಗ್ರಾಮದಲ್ಲಿ ಎಲ್ಲಾ ವರ್ಗದ ಜನತೆ ವಾಸಿಸುತ್ತಿದ್ದು ಪರಸ್ಪರ ಸೌಹಾರ್ಧತೆಯಿಂದ ರಥೋಥ್ಸವ ಮತ್ತು ಹಬ್ಬಗಳನ್ನು ಆಚರಿಸುತ್ತಿದ್ದು ಹೊಸಹೊಳಲು ತಾಲ್ಲೂಕಿನ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರ ಸ್ಥಾನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೂದನೂರು ಉತ್ಸವದ ಮಾದರಿಯಲ್ಲಿ ಹೊಸಹೊಳಲು ಉತ್ಸವ
ಮಂಡ್ಯ ಸಮೀಪದ ಬೂದನೂರಿನಲ್ಲಿ ಹೊಯ್ಸಳರ ಕಾಲದ ದೇವಾಲಯ ಇರುವ ಕಾರಣ ಪ್ರತಿವರ್ಷವೂ ಸರ್ಕಾರ ಹಾಗೂ ಜಿಲ್ಲಾಡಳಿತವು ಬೂದನೂರು ಉತ್ಸವವನ್ನು ಮಾಡುತ್ತಿದೆ. ಅದೇ ಮಾದರಿಯಲ್ಲಿ ಹೊಸಹೊಳಲು ಗ್ರಾಮದಲ್ಲಿರುವ ಬೇಲೂರು-ಹಳೆಬೀಡು ಮಾದರಿಯಲ್ಲಿ ಅದ್ಬುತ ಶಿಲ್ಪಕಲೆಯನ್ನು ಹೊಂದಿರುವ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಇದೆ ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ನಮ್ಮ ಹೊಸಹೊಳಲು ಗ್ರಾಮದಲ್ಲಿಯೂ ಪ್ರತಿವರ್ಷ ಹೊಳಹೊಳಲು ಹೊಯ್ಸಳ ಉತ್ಸವ ನಡೆಸಲು ಸರ್ಕಾರಿ ಆದೇಶ ಮಾಡಿಸಲು ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಹೆಚ್.ಟಿ.ಮಂಜುಸಂದರ್ಭದಲ್ಲಿ ತಿಳಿಸಿದರು.
ರಥೋತ್ಸವದ ಸಂದರ್ಭದಲ್ಲಿ ಕುರುಹಿನಶೆಟ್ಟಿ ಸಮಾಜದ ಬಂಧುಗಳು ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಮಜ್ಜಗೆ ಹಾಗು ಪಾನಕ ಹಾಗೂ ಪ್ರಸಾದವನ್ನು ವಿತರಣೆ ಮಾಡಿದರು. ಸೇರಿದಂತೆ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
