ಹಾಸನ: ದೂರ ಸಂಪರ್ಕ ನೌಕರರ ರಾಷ್ಟ್ರೀಯ ಒಕ್ಕೂಟ ಎನ್ಎಫ್ಟಿಇ-ಬಿಎಸ್ಎನ್ಎಲ್ ಹಾಸನ ವತಿಯಿಂದ 8ನೇ ಜಿಲ್ಲಾ ಸಮ್ಮೇಳನವು ಬುಧವಾರ ಯಶಸ್ವಿಯಾಗಿ ನಡೆಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ಕಾಂ. ಧರಣೇಶ್ ಹೆಚ್.ಕೆ., ಹಾಸನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸತೀಶ್ ಆನಂದ್, ಉಪ ಮಹಾ ಪ್ರಬಂಧಕರು ಹಾಗೂ ಕಾಂ. ಶ್ರೀ ಹಿರಿಯಣ್ಣ, ವಲಯ ಕಾರ್ಯದರ್ಶಿ, ಎನ್ಎಫ್ಟಿಇ, ಬಿಎಸ್ಎನ್ಎಲ್ ಬೆಂಗಳೂರು ಭಾಗವಹಿಸಿ, ಇಲಾಖೆಯ ಬೆಳವಣಿಗೆ, ನೌಕರರ ಹಿತಾಸಕ್ತಿ ಹಾಗೂ ಸಂಘಟನೆಯ ಪಾತ್ರ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಕಾಂ. ಧರಣೇಶ್ ಹೆಚ್.ಕೆ. ಅವರನ್ನು ಎನ್ಎಫ್ಟಿಇ-ಬಿಎಸ್ಎನ್ಎಲ್ ಹಾಸನ ಜಿಲ್ಲಾ ಅಧ್ಯಕ್ಷರಾಗಿ,
ಕಾಂ. ಎಂ.ಕೆ. ಫೈರೋಜ್ ಪಾಷ ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ,
ಕಾಂ. ಸಿದ್ದೇಗೌಡ ಅವರನ್ನು ಜಿಲ್ಲಾ ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆಗೆ ಸಭೆಯಲ್ಲಿ ಹರ್ಷ ವ್ಯಕ್ತವಾಗಿದ್ದು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಲಾಯಿತು.
