ಬೆಂಗಳೂರು: 2011ರಲ್ಲಿ ‘ಕಾಡಿನ ಸಂತ – ತೇಜಸ್ವಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಧನಂಜಯ ಜೀವಾಳ ಅವರು ಈಗ ಹೊಸದೊಂದು ಸಾಹಿತ್ಯಿಕ ಪ್ರಯೋಗದೊಂದಿಗೆ ‘ನಿಮಿತ್ತ’ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ತಮ್ಮ ಹಿರಿಯ ಸ್ನೇಹಿತ ಹಾಗೂ ಪ್ರಖ್ಯಾತ ಚಿಂತಕ-ಲೇಖಕ ಶ್ರೀ ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಕಳೆದ ಬದುಕಿನ ಅನುಭವಗಳನ್ನು ಜೀವಾಳ ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಲಿಖಿತಮಾಧ್ಯಮ, ಛಾಯಾಗ್ರಹಣ, ಜೀವವೈವಿಧ್ಯ, ಚಾರಣ, ನಾಟಕ, ಕ್ರೀಡೆ, ಸಂವಹನ, ಸಂಘಟನ, ಕೃಷಿ ಹಾಗೂ ಸಮುದಾಯ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಧನಂಜಯ ಜೀವಾಳರ ಈ ಕೃತಿ ವಿಭಿನ್ನ ಭಾಷಾ ಪ್ರಯೋಗ, ಹೃದಯ ಸ್ಪರ್ಶಿ ವಿಷಯ ಮತ್ತು ವೈವಿಧ್ಯಮಯ ವೃತ್ತಾಂತಗಳ ಮೂಲಕ ಓದುಗರ ಮನಸ್ಸನ್ನು ಆವರಿಸುತ್ತಿದೆ.
ವೈಶಿಷ್ಟ್ಯಗಳು:
‘ನಿಮಿತ್ತ’ ಕೃತಿಯಲ್ಲಿ ಜೀವಾಳ ಅವರು ತೇಜಸ್ವಿಯವರನ್ನು ಚಿತ್ರಿಸುವ ಪ್ರಯತ್ನದಲ್ಲಿ ಸುತ್ತಲಿನ ಸಮಾಜದ ಹೊಸ ಅಂಶಗಳನ್ನು ಬಹಿರಂಗಪಡಿಸುತ್ತಾರೆ. ಈ ಕೃತಿಯ ವೈಶಿಷ್ಟ್ಯವೆಂದರೆ ಓದುಗರಲ್ಲಿ “ಏನಾಗಿರಬಹುದಿತ್ತು?” ಎಂಬ ಆಳವಾದ ಚಿಂತನೆಗೆ ಸ್ಥಳ ಒದಗಿಸುತ್ತದೆ. ಜೀವಾಳರ ‘ಗ್ರಾಮಾಯಣ 1’ ಮತ್ತು ‘ಗ್ರಾಮಾಯಣ 2’ ಕೃತಿಗಳು ಮಲೆನಾಡಿನ ಬದುಕನ್ನು ವಿಶಿಷ್ಟವಾಗಿ ಚಿತ್ರಿಸಿರುವ ಪರಿಣಾಮಕಾರಿಯಾದ ಸಾಹಿತ್ಯ ಕೃತಿಗಳಾಗಿವೆ.
ಹೊಸ ಬರಹಗಾರ್ತಿಯ ಆಸಕ್ತಿ:
ಇದನ್ನೇ ತಮ್ಮ ಮೊದಲ ಅನುವಾದದ ಯತ್ನವನ್ನಾಗಿ ಆಯ್ದುಕೊಂಡಿರುವ ಯುವ ಲೇಖಕಿ ಮಿಂಚು ಅವರ ಈ ಪಯಣ ಅತ್ಯಂತ ಸೂಕ್ತವಾದದ್ದು ಎನ್ನಬಹುದು.
ಈ ಕೃತಿಯ ಇನ್ನೊಂದು ವಿಶೇಷ ಅಂಶವೆಂದರೆ – ಮೂಲ ಲೇಖಕರೇ ಈ ಪುಸ್ತಕವನ್ನು ಕನ್ನಡ, ಸಂಸ್ಕೃತಿ ಹಾಗೂ ಪರಂಪರೆಗೆ ಗೌರವ ತೋರುವ ಅನ್ಯಭಾಷಿಕರಿಗಾಗಿ ಸಮರ್ಪಿಸಿದ್ದಾರೆ ಎಂಬುದು.
ಈಗ ಆಂಗ್ಲ ಭಾಷೆಯಲ್ಲೂ ಲಭ್ಯ :- ಪುಸ್ತಕವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ನ್ನು ಒತ್ತಿ…
