ವಿಧಾನ ಪರಿಷತ್‌ಗೆ ನಾಮನಿರ್ದೇಶನ: ಹೈಕಮಾಂಡ್ ನಿರ್ಧಾರಕ್ಕೆ ಸಿದ್ದರಾಮಯ್ಯ ಮೇಲುಗೈ, ಡಿ.ಕೆ. ಶಿವಕುಮಾರ್‌ಗೆ ಮುಖಭಂಗ

ನಾಮ ನಿರ್ದೇಶಿತ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಹೈಕಮಾಂಡ್‌ ಸರ್ವಾನುಮತದಿಂದ ನಾಲ್ವರನ್ನು ಆಯ್ಕೆ ಮಾಡಿದೆ. ಡಿ.ಕೆ. ಶಿವಕುಮಾರ್‌ ಅವರು ಶಿಫಾರಸು ಮಾಡಿದ ಯಾರನ್ನೂ ಆಯ್ಕೆ ಮಾಡದೇ ಇರುವುದು ಪಕ್ಷದೊಳಗೆ ಅವರು ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಇದು ಸಹಜವಾಗಿ ಪಕ್ಷದೊಳಗೆ ಡಿಕೆಶಿ ಬಣದ ಅಸಮಾಧಾನಕ್ಕೆ ಕಾರಣವಾಗಿದೆ.