ಬೆಂಗಳೂರು, ಜುಲೈ 23: ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ದನಕರು, ಕುರಿ, ಮೇಕೆ ಮುಂತಾದ ಸಾಕು ಪ್ರಾಣಿಗಳನ್ನು ಮೇಯಲು ಬಿಡುವಿಕೆಯನ್ನು ನಿಷೇಧಿಸಲು ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಅರಣ್ಯ, ಪರಿಸರ ಮತ್ತು ವನ್ಯಜೀವಿ ಸಚಿವ ಈಶ್ವರ ಬಿ ಖಂಡ್ರೆ ಅವರು ಸೂಚನೆ ನೀಡಿದ್ದಾರೆ.
ಅವರ ಹೇಳಿಕೆಯಲ್ಲಿ, ಜಾನುವಾರುಗಳು ಅರಣ್ಯದಲ್ಲಿ ಮೇಯುವುದರಿಂದ ಮೊಳಕೆ ಒಡೆದ ಹೊಸ ಸಸಿಗಳು ನಾಶವಾಗುತ್ತಿದ್ದು, ಅರಣ್ಯದ ನವೀಕರಣಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ, ಸಾಕು ಪ್ರಾಣಿಗಳಿಂದ ಸಸ್ಯಹಾರಿ ವನ್ಯಜೀವಿಗಳಿಗೆ ಮೇವು ಕೊರತೆ ಉಂಟಾಗುತ್ತಿರುವುದರ ಜೊತೆಗೆ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕೂಡ ಹೆಚ್ಚುತ್ತಿದೆ.
ಇದನ್ನು ಓದಿ: 2024–25ರಲ್ಲಿ ತಲಾ ಆದಾಯದಲ್ಲಿ ರಾಷ್ಟ್ರದಲ್ಲಿಯೇ ಮೊದಲ ಸ್ಥಾನ ಪಡೆದ ಕರ್ನಾಟಕ….!!! ಕರ್ನಾಟಕದ ಆರ್ಥಿಕ ಸಾಧನೆ ಗೆದ್ದಿದೆಯೆ ??
ಹೂಗ್ಯಂ ವಲಯದಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ಸಾವು ಇತ್ತೀಚಿನ ಉದಾಹರಣೆಯಾಗಿದೆ. ಆಹಾರಕ್ಕಾಗಿ ಕಾಡಿಗೆ ಬಂದ ಜಾನುವಾರುಗಳನ್ನು ಕೊಂದ ವನ್ಯಜೀವಿಗಳಿಗೆ ವಿಷ ಹಾಕಿ ಪ್ರತಿ ಕಾರ್ಯವಾಗುತ್ತಿದೆ. ಇದರಿಂದ ವನ್ಯಜೀವಿಗಳ ಜನಸಂಖ್ಯೆ ಕುಗ್ಗುತ್ತಿದೆ.
ತಮಿಳುನಾಡಿನಲ್ಲಿ ಮದ್ರಾಸ್ ಹೈಕೋರ್ಟ್ ಈ ಸಂಬಂಧ ತೀರ್ಪು ನೀಡಿದ ಬಳಿಕ ಕೆಲವರು ಕರ್ನಾಟಕ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಲು ತರುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಕಾನೂನುಬದ್ಧ ಕ್ರಮ ಕೈಗೊಂಡು ಅಭಯಾರಣ್ಯ ಹಾಗೂ ಅರಣ್ಯಗಳಲ್ಲಿ ಈ ಮಾದರಿಯ ಕ್ರಿಯೆಗಳನ್ನು ನಿಷೇಧಿಸಬೇಕು ಎಂದು ಖಂಡ್ರೆ ಅವರು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದ್ದಾರೆ.

[…] ಇದನ್ನು ಓದಿ: ಅರಣ್ಯ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳು ಮೇ… […]