ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಈಗ ಮರಣ ನೋಂದಣಿಯ ಸೌಲಭ್ಯ ಲಭ್ಯವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದ ಮಾಹಿತಿಯಂತೆ, ಜನರು ತಮ್ಮ ಗ್ರಾಮ ಪಂಚಾಯ್ತಿಯಲ್ಲೇ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ನೋಂದಣಿ ಮಾಡಿಸಬಹುದು.
ಈ ಹೊಸ ವ್ಯವಸ್ಥೆಯಡಿ, ಮೊದಲ ಪ್ರಮಾಣ ಪತ್ರವನ್ನು ಉಚಿತವಾಗಿ ಪಡೆಯಬಹುದಾಗಿದೆ ಎಂದು ಇಲಾಖೆ ತಿಳಿಸಿದೆ. ಇದರಿಂದ ಗ್ರಾಮೀಣ ಪ್ರದೇಶದ ನಾಗರಿಕರು ತಹಶೀಲ್ದಾರ ಕಚೇರಿ ಅಥವಾ ತಾಲೂಕು ಕೇಂದ್ರಗಳಿಗೆ ತೆರಳದೆ, ತಮ್ಮ ಗ್ರಾಮದಲ್ಲಿಯೇ ಅಗತ್ಯ ದಾಖಲೆಗಳನ್ನು ಪಡೆಯುವಂತಾಗಿದೆ.
ನಿಮಗಿದು ತಿಳಿದಿರಲಿ:
ಜನನ, ಮರಣ ಅಥವಾ ನಿರ್ಜೀವ ಜನನದ ನೋಂದಣಿಯನ್ನು ಗ್ರಾಮ ಪಂಚಾಯಿತಿಯಲ್ಲೇ ಮಾಡಿಸಿ, ಮೊದಲ ಪ್ರಮಾಣ ಪತ್ರವನ್ನು ಉಚಿತವಾಗಿ ಪಡೆಯಬಹುದು. ಈ ಕ್ರಮದ ಮೂಲಕ ಪ್ರತಿಯೊಂದು ಜನನ ಮತ್ತು ಮರಣವನ್ನು ದಾಖಲು ಮಾಡುವುದರಿಂದ ನಿಖರ ಅಂಕಿಅಂಶ ಸಂಗ್ರಹ ಸಾಧ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.
ನೋಂದಣಿಗೆ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಡಿತರ ಚೀಟಿ
- ವಾಹನ ಚಾಲನಾ ಪರವಾನಗಿ
- ಚುನಾವಣಾ ಗುರುತಿನ ಚೀಟಿ
- ಪಾಸ್ಪೋರ್ಟ್
- ಜನನ ಪ್ರಮಾಣ ಪತ್ರ
- SSLC / PUC ಅಂಕಪಟ್ಟಿ
ವಿದ್ಯಾರ್ಥಿ ಗುರುತಿನ ಚೀಟಿ
