
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಒಡೆದ ಮನಸ್ಸು…!
ಸಾಮಾನ್ಯವಾಗಿ ಜ್ಞಾನದ ಕಡೆಗೆ ವಾಲಿದ ಯಾವುದೇ ವ್ಯಕ್ತಿಗೆ ಮೊದಲು ಕಾಡುವ ಸಂದೇಹ ಅಥವಾ ಪ್ರಶ್ನೆಯೆಂದರೆ ‘ಚಿತ್ತ’ ಎಂದರೆ ಏನು? ಜ್ಞಾನ ಅರಿಯುವ ವ್ಯಕ್ತಿಗೆ ಈ ಪ್ರಶ್ನೆಯು ಅವನ ಆತ್ಮವನ್ನು ಕಲಕಬಹುದು. ಈ ಸಂದೇಹಕ್ಕೆ ವೈಜ್ಞಾನಿಕ ಸಿದ್ಧಾಂತ ಅಥವಾ ಆಧ್ಯಾತ್ಮಗಳಲ್ಲಿ ವಿವರಣೆಯ ಹೊರತು ನಿಕೃಷ್ಟವಾದ ಉತ್ತರ ಸಿಗಲಾರದು. ನಾನೊಬ್ಬ ಮನೋವೈದ್ಯನಾದ್ದರಿಂದ ಈ ಪ್ರಶ್ನೆಗೆ ನನ್ನ ನಿರೂಪಣೆ ಯೋಗ್ಯವೆನಿಸುವುದೇ ಎಂಬುದನ್ನು ಒರೆ ಹಚ್ಚಿ ನೋಡೋಣ.
‘Mind is a multi dimensional projected image in time and space of an awake normal brain which houses cognitive functions, works on a ever vibrating electrical activity. Not static, always dynamic, no boundary, a ever expanding image. Relative or real which developed on continuous interaction with existing matter.’
ಚಿತ್ತವೆಂಬುದು ಬಹು ವಿಸ್ತೀರ್ಣಗೊಂಡ ಸಮಯ ಮತ್ತು ಅಂತರ ಸ್ಥಳದಲ್ಲಿ ಮುಂಚಾಚಿ ಸೃಷ್ಟಿಗೊಳ್ಳುವ ಬಿಂಬವಾಗಿರುತ್ತದೆ. ಈ ಸೃಷ್ಟಿಗೊಳ್ಳುವ ಚಿತ್ರಣವು ಪ್ರಜ್ಞೆಯುಳ್ಳ, ಸರಿಯಾಗಿರುವ ಚಿತ್ತದಿಂದ ಹೊರ ಬಂದಿರಬೇಕು. ಚೌಕಟ್ಟು ಇಲ್ಲಿ ನಿರಾಧಾರ. ಹೀಗೆ ಹೊರ ಬಂದ ನಿರಂತರ ಚಿತ್ರಣವು ಅರಿವುಳ್ಳ ಸಾಮಾನ್ಯ ಕೆಲಸಗಳನ್ನು ಹೊಂದಿ ಸದಾ ಸಂಚಲನಾ ಪ್ರವೃತ್ತಿಯನ್ನು ಪಡೆದಿರುತ್ತದೆ. ಇವುಗಳಲ್ಲಿ ಸತ್ಯದರ್ಶನ ಮತ್ತು ಸತ್ಯ ಸಂಬಂಧ ಸೂಚಕ ದರ್ಶನಗಳನ್ನು ಕಾಣಬಹುದು. ಇದರ ಪ್ರಕ್ರಿಯೆ ಮತ್ತು ಪ್ರವೃತ್ತಿ ಜೀವ, ನಿರ್ಜೀವ ಪರಸ್ಪರ ಮಿಲನದಿಂದ ಆಗುವ ಚಿತ್ರದರ್ಶನಗಳಿಂದ ಕೂಡಿರುತ್ತದೆ. ಸಿನಿಮಾ ಮಂದಿರಗಳಲ್ಲಿ ಚಿತ್ರ ಮತ್ತು ಧ್ವನಿಗೆ ವಿದ್ಯುತ್ ಹೇಗೆ ಮುಖ್ಯವೋ ಹಾಗೆಯೇ ಸ್ವಯಂ ವಿದ್ಯುತ್ ಪ್ರವಾಹ ಕಂಪನಗಳು ಅಗತ್ಯವಾಗಿ ಇರಲೇಬೇಕಾಗುತ್ತದೆ.
Ho! Mind is so complicated!
ಹೋ! ಚಿತ್ರವೆನ್ನುವುದು ಇಷ್ಟೊಂದು ಜಟಿಲವೇ?
ಹೌದು, ವಿಸ್ಮಯ ಮತ್ತು ನಿಗೂಢ. ಇದರಲ್ಲಿ ಒಳ ಹೊಕ್ಕ ಮಾನವ ಗೊಂದಲ ಮತ್ತು ಜಿಜ್ಞಾಸೆಗಳಲ್ಲಿ ಸಿಕ್ಕಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಇದರಿಂದ ಹೊರ ಬಂದವರಿಗೆ ಜ್ಞಾನ ಸಂಪಾದನೆ ಖಂಡಿತ.

ಈ ಅಂಕಣದ ಮೂಲ ವಿಷಯವೇ ಅರೆ ಜ್ಞಾನ. ಮನೋ ವಿಜ್ಞಾನ ಭಾಷೆಯಲ್ಲಿ ಇದನ್ನು ಬುದ್ಧಿ ವಿಕಲತೆ ಅಥವಾ ವಿಕಲ್ಪ (Schizo phrenia) ಎಂದು ಕರೆಯಲ್ಪಟ್ಟಿದೆ. ಸಾಮಾನ್ಯ ಭಾಷೆಯಲ್ಲಿ Split mind ಎಂದೂ ಕರೆಯಬಹುದು ((Schizophrenia ಎಂದರೆ Schizo-ಒಡೆದ phrenia-ಮೆದುಳು = ಒಡೆದ ಚಿತ್ತ ಅಥವಾ ಒಡೆದ ಮನಸ್ಸು) ಮಾನವನ ಮೆದುಳಿಗೆ ಅನೇಕ ಕೆಲಸಗಳಿದ್ದರೂ, ಮುಖ್ಯವಾದವುಗಳೆಂದರೆ, ೧) ಯೋಚನೆ ೨) ಇಚ್ಛೆ ೩) ಭಾವನೆ ಮತ್ತು ೪) ಕ್ರಿಯೆ.
ಮಾನವನು ಸಾಮಾನ್ಯನೆಂದು ಕರೆಸಿಕೊಳ್ಳಲು ಅವನ ಯೋಚನೆಗೆ ತಕ್ಕ ಇಚ್ಛೆ. ಇಚ್ಛೆಗೆ ಸ್ಪಂದಿಸುವ ಭಾವನೆ. ಭಾವನೆಗಳಿಗೆ ತಕ್ಕ ಕೆಲಸಗಳಿದ್ದರೆ ಅವು ಸರಿಯಾಗಿರುವುವು ((Normal) ಎಂದು ಹೇಳಬಹುದು.
ನಾನು ನಿಮ್ಹಾನ್ಸ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮನೋ ವೈದ್ಯಕೀಯ ಪ್ರೊಫೆಸರ್ ಹೇಳುತ್ತಿದ್ದರು… ‘ನೀವು ಯಾರನ್ನೇ ಕರೆತನ್ನಿ. ಅವರಲ್ಲಿನ ಮನೋವಿಕಲತೆಯನ್ನು ಸಾಬಿತುಪಡಿಸುವೆನು’ ಎಂದು. ಇದನ್ನು ಕೇಳಿ ನಮಗೆ ದಿಗಿಲು, ಆಶ್ಚರ್ಯ ಮತ್ತು ನಗು ಒಟ್ಟಿಗೇ ಬರುತ್ತಿತ್ತು. ಕಾರಣ, ನಮ್ಮನ್ನೇ ಈ ಮನೋವ್ಯಾಧಿಗೆ ಗುರಿಪಡಿಸುವರೆಂದು. ಅದರ ಗೂಢಾರ್ಥ ನನಗೆ ಇತ್ತೀಚೆಗಷ್ಟೇ ಅರ್ಥವಾಯಿತು. ಹಾಗಾಗಿ ಅವರ ಹೇಳಿಕೆ ನನ್ನ ಮನದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು.
ಅವರು ಹೇಳಿದ ‘ಒಡಕು’ ಇಂದು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿವೆ. ಗಮನ ಮತ್ತು ಏಕಾಗ್ರತೆಯನ್ನೊಳಗೊಂಡ ವ್ಯಕ್ತಿಗೆ ಒಡಕನ್ನು ಅರಿಯಲು ಸಾಹಸ ಮಾಡಬೇಕಿಲ್ಲ. ಜನಪ್ರತಿನಿಧಿಗಳ ವಾಗ್ದಾನಗಳು ಮಂಡನೆಯಾಗುವುದಿಲ್ಲ. ಸ್ನೇಹ ಮತ್ತು ಸಂಬಂಧದಲ್ಲಿ ದ್ರೋಹತನವಿದೆ. ವ್ಯಾಪಾರಿಯಲ್ಲಿ ಲೋಭಿತನವಿದೆ. ವಿದ್ಯಾರ್ಥಿ ಮತ್ತು ಗುರುಗಳ ಸಂಬಂಧ ಹಳಸಿದೆ. ಜ್ಞಾನ ದೇಗುಲಗಳು ವ್ಯಾಪಾರೀಕರಣ ಮಾಡುತ್ತಿವೆ. ಹೀಗೆ ಇಂತಹವುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವುಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಒಡಕನ್ನು ಕಾಣಬಹುದಲ್ಲವೇ? ಚಿತ್ರದ ನಾಲ್ಕೂ ಕೆಲಸಗಳು ಸರಿಸಮಾನವಾಗಿ ಹೊಂದಾಣಿಕೆಯಿಂದ ಹೊರ ಬಂದಲ್ಲಿ ಆ ವ್ಯಕ್ತಿಯು ಸಾಮಾನ್ಯನು ಅಥವಾ ಸರಿಯಾಗಿರುವನೆಂದು ಹೇಳಬಹುದು.
ಮೌನ ಮುನಿಗಳ ‘
‘world is mega house, which house mad people, who requires urgent treatment, do not throw them in to a mental asylum but convert this big house into a psychological nursing home.’
‘ಪ್ರಪಂಚವೆಂಬುದು ಹುಚ್ಚರ ಮನೆ. ಇಲ್ಲಿರುವವರೆಲ್ಲ ಹುಚ್ಚರು. ಇವರನ್ನೆಲ್ಲ ತುರ್ತು ಚಿಕಿತ್ಸೆಗೆ ಒಳಪಡಿಸಬೇಕು. ಹುಚ್ಚರ ಆಸ್ಪತ್ರೆಯಲ್ಲಲ್ಲ, ಇಡೀ ವಿಶ್ವವನ್ನೇ ಮನೋ ಪರಿವರ್ತನಾ ಕೇಂದ್ರವನ್ನಾಗಿ ಮಾರ್ಪಡಿಸಿ ಮನವನ್ನು ಹಗುರಗೊಳಿಸಬೇಕು’ ಎಂದರು. ಈ ಮುನಿಗಳ ಅಂತರಾಳದ ದಿವ್ಯ ದೂರದೃಷ್ಟಿಯು ಪರಿವರ್ತನಾ ಮನೋ ಮಂಥನದ ಮಾತಲ್ಲವೇ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ