
ಒಮಿನಿ- ಸ್ಕಾರ್ಪಿಯೋ ಮುಖಾಮುಖಿಯಾಗಿ ಅಪಘಾತ ಸಂಭವಿಸಿದ್ದು, ಇಬ್ಬರಿಗೆ ಮುಖ ಮತ್ತು ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿರುವ ಘಟನೆ ಇಂದು ಮಡಿಕೇರಿ ಜಿಲ್ಲೆಯ ಸುಂಟಿಕೊಪ್ಪ ಸಮೀಪ ನಡೆದಿದೆ.
ಕುಶಾಲನಗರದಿಂದ ಮಡಿಕೇರಿ ಮಾರ್ಗವಾಗಿ ಚಲಿಸುತ್ತಿದ್ದ ಒಮಿನಿ ಕಾರಿಗೆ, ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಆಗಮಿಸುತ್ತಿದ್ದ, ಸ್ಕಾರ್ಪಿಯೋ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಒಮಿನಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಒಮಿನಿ ಕಾರು ಸಂಪೂರ್ಣ ಚಕಂ ಆಗಿದೆ, ಒಮಿನಿಯಲ್ಲಿದ್ದ ಇಬ್ಬರಿಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು ರಕ್ತಸ್ತಾವವಾಗಿದೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಈ ಸಂಬಂಧ ಮಡಿಕೇರಿ ರಸ್ತೆ ಹೆದ್ದಾರಿ ಗಸ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿದ್ದಾರೆ.
ಗಾಯಗಳು ಕುಶಾಲನಗರ ನಿವಾಸಿಗಳೆಂದು ತಿಳಿದು ಬಂದಿದ್ದು, ಸುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ವಾರಂತ್ಯವಾದ್ದರಿಂದ ಮಡಿಕೇರಿ ಕುಶಾಲನಗರ ವಾಹನ ದಟ್ಟನೆ ಹೆಚ್ಚಾಗೆ ಇದ್ದು, ರಸ್ತೆ ಅಪಘಾತ ಪರಿಣಾಮ ಕಿಲೋಮೀಟರ್ ಗಳ ವರೆಗೂ ವಾಹನ ದಟ್ಟನೆ ಕಂಡು ಬಂದಿದ್ದು, ಪ್ರವಾಸಿಗರು ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.