ಮುಳ್ಳಯ್ಯನಗಿರಿಗೆ ದಿನಕ್ಕೆ 1200 ವಾಹನಗಳಿಗೆ ಮಾತ್ರ ಪ್ರವೇಶ – ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ದಿನಕ್ಕೆ 1200 ವಾಹನಗಳಿಗೆ ಮಾತ್ರ ಪ್ರವೇಶ ನೀಡಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದ್ದು, ಗಿರಿಮಾರ್ಗದ ಸಂಚಾರ ನಿಯಂತ್ರಿಸಲು ಎರಡು ಸ್ಲಾಟ್ ವ್ಯವಸ್ಥೆ ಜಾರಿಗೆ ಬರುತ್ತಿದೆ. ಭೂಕುಸಿತ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದು, ಪ್ರವಾಸಿಗರಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ, ಪಾರ್ಕಿಂಗ್, ಶೌಚಾಲಯ ನವೀಕರಣ, ಫುಡ್‌ಕೋರ್ಟ್ ವ್ಯವಸ್ಥೆಗಳೂ ಮಾಡಲಾಗುತ್ತಿವೆ.