
ಹಾಸನ :ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸೂತಕದ ಛಾಯೆ ಆವರಿಸಿದೆ ಮೈಕ್ರೋ ಫೈನಾನ್ಸ್ ಹಾವಳಿಂದ ರಾಜ್ಯದ ಜನರು ಸಾಲದ ಸುಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಮೈಕ್ರೋ ಫೈನಾನ್ಸ್ ನಿಂದ ಸುಮಾರು 25ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಕಾಂಗ್ರೆಸ್ ಸರ್ಕಾರದಲ್ಲಿ ಸರಿಸುಮಾರು 2500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದರೆ ರಾಜ್ಯದಲ್ಲಿ ಕೊಲೆ ಸುಲಿಗೆ ದರೋಡೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಸಿದ್ದರಾಮಯ್ಯನ ಸರ್ಕಾರ ಬಂದ ಬಳಿಕ ಮನೆಯಲ್ಲಿ ಅಡಗಿ ಕುಳಿತಿದ್ದರು ರೌಡಿಗಳು ಹೊರಬಂದು ಅಟ್ಟಹಾಸ ಮರೆಯುತ್ತಿದ್ದಾರೆ. ಪರೋಕ್ಷವಾಗಿ ರೌಡಿಗಳಿಗೆ ಉದ್ಯೋಗ ಭಾಗ್ಯವನ್ನು ಕೊಟ್ಟಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಫೈನಾನ್ಸ್ ಕಿರುಕುಳ ನೀಡುತ್ತಿರುವ ಹಿನ್ನಡೆಯಲ್ಲಿ ರಾಜ್ಯ ಸರ್ಕಾರಕ್ಕೆ ಟೀಕೆಯ ಮೂಲಕ ಉತ್ತರಿಸಿದರು.
ಬೀದರ್ ಮಂಗಳೂರು ಹಾಸನ ನಾನ ಭಾಗಗಳಲ್ಲಿ ಕೊಲೆ ಸುಲಿಗೆ ದರೋಡೆಗಳು ಹೆಚ್ಚಾಗುತ್ತಿದೆ ಇವೆಲ್ಲವನ್ನೂ ನೋಡಿಕೊಂಡು ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಯಾಕಂದ್ರೆ ಪೊಲೀಸರ ಮೇಲೆ ಜನರಿಗೆ ಭಯವಿಲ್ಲ. ಕೆಲವು ಪೊಲೀಸರು ಟ್ರಾನ್ ವರ್ ಧಂದೆ ಮೂಲಕ ಬಂದಿರುವುದರಿಂದ ನಮಗ್ಯಾಕೆ ಇಂದು ಸುಮ್ಮನಾಗಿ ಹುಟ್ಟಿದ್ದಾರೆ ಎಂದು ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಸಿದ್ದರಾಮಯ್ಯ ನವಂಬರ್ ಅಂತ್ಯದ ವೇಳೆಗೆ ಅಧಿಕಾರಿದಿಂದ ಕೆಳಗೆ ಇಳಿಯಬಹುದು ತದನಂತರ ಡಿಕೆಶಿ ಅಥವಾ ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರ ಗೊತ್ತಿಲ್ಲ ಆದರೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಕೇರಳ ರಾಜ್ಯದ ರೀತಿ ನಮ್ಮ ರಾಜ್ಯವು ಕೂಡ ಪಾಪರ್ ಚೀಟಿ ತೆಗೆದುಕೊಳ್ಳುವ ಸಮಯ ಹತ್ತಿರವಾಗುತ್ತಿದೆ. ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರ ದಿವಾಳಿಯತ್ತ ಸಾಗಿರುವುದೇ ಸ್ಪಷ್ಟ ಕಾರಣ. ನಮ್ಮ ಸರ್ಕಾರದಲ್ಲಿ ನಿಗಮಗಳಿಗೆ ಸರಿಸುಮಾರು 2000 ಕೋಟಿ ಅಷ್ಟು ಹಣ ನೀಡಿದ್ದು, ಕಾಂಗ್ರೆಸ್ ಸರ್ಕಾರ ಕೇವಲ 600 ಕೋಟಿ ಮಾತ್ರ ಸಾಲ ನೀಡಿದೆ.
ಮೈಕ್ರೋ ಫೈನಾನ್ಸ್ ಗಳಲ್ಲಿ ಅತಿ ಹೆಚ್ಚು ಸಾಲ ಪಡೆಯುತ್ತಿರುವುದು ಹಿಂದುಳಿದ ಹಾಗು ದಲಿತ ಸಮುದಾಯದವರು. ಹೀಗಾಗಿ ಹೆಚ್ಚು ಬಡ್ಡಿ ಕಟ್ಟಲಾಗದೆ ಅವರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಅಭಿವೃದ್ಧಿ ನಿಗಮಗಳಿಗೆ ಕಾನೂನು ಬದ್ಧವಾಗಿ ಹಣ ಬಿಡುಗಡೆ ಮಾಡಿದರೆ ನಿಗಮಗಳು ತಮ್ಮ ತಮ್ಮ ಸಮಾಜಕ್ಕೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ಸಹಾಯದ ಜೊತೆಗೆ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸಾಲ ಸೌಲಭ್ಯ ನೀಡುತ್ತದೆ ಹೀಗಾಗಿ ಕೂಡಲೇ ಸರ್ಕಾರ ಕನಿಷ್ಠ 5000 ಕೋಟಿಯನ್ನ ಆದರೂ ಶೀಘ್ರ ಬಿಡುಗಡೆ ಮಾಡಿ ಫೈನಾನ್ಸ್ ಹಾವಳಿಯನ್ನು ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇನ್ನು ರಾಜ್ಯದ ರಾಜಕೀಯದಲ್ಲಿ ಬಿಜೆಪಿ ಒಳಗಿನ ಬಣ ಜಗಳ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿ, ನಾನು ಪಾರ್ಟಿಯ ಶಿಸ್ತಿನ ಸಿಪಾಯಿ. ಮನೆಯೊಳಗೆ ಏನು ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ, ಹೊರಗೆ ಏನು ಮಾತನಾಡಬೇಕು, ಅದನ್ನು ಮಾತನಾಡಿದ್ದೇನೆ. ಇತಿಹಾಸದಲ್ಲಿ ನಾನು ಪಾರ್ಟಿ ವಿಚಾರಗಳನ್ನು ಹೊರಗಡೆ ಮಾತನಾಡಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಂದಾಗ ಕರ್ನಾಟಕದ ಸ್ಥಿತಿ-ಗತಿಗಳನ್ನು ವಿವರಿಸಿದ್ದೇನೆ. ನಾನು ಕೂಡ ದೆಹಲಿ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ. ಮುಂದಿನ ಹದಿನೈದು-ಇಪ್ಪತ್ತು ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನ ಹೊರಬೀಳಲಿದೆ. ಬಿಜೆಪಿ ಬಿಟ್ಟು ಹೋದವರ ಉದ್ಧಾರವಾಗಿಲ್ಲ ಎಂಬುದನ್ನು ಉಲ್ಲೇಖಿಸಿ, ಬಿಜೆಪಿ ನನ್ನ ಶಕ್ತಿ, ಆಮೇಲೆ ಅಶೋಕ್. ಆಚೆ ಹೋದರೆ ನನ್ನ ಶಕ್ತಿ ಜೀರೋ ಎಂದು ಅವರು ಭಾವೋದ್ರೇಕದಿಂದ ಹೇಳಿದರು.