ಕೆ.ಆರ್.ಪೇಟೆ,ಫೆ.12: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ಹೊಸ ಕಾರ್ಮಿಕ ಸಂಹಿತೆಗಳು ಹಾಗೂ ವಿದ್ಯುತ್ ಇಲಾಖೆಯ ಖಾಸಗೀಕರಣ ಪ್ರಸ್ತಾವನೆ ವಿರೋಧಿಸಿ ತಾಲ್ಲೂಕು ಕೆಪಿಟಿಸಿಎಲ್ ನೌಕರರ ಯೂನಿಯನ್ ಪದಾಧಿಕಾರಿಗಳು ಹಾಗೂ ಚೆಸ್ಕಾಂ ಯೂನಿಯನ್ ಸದಸ್ಯರು ಅಖಿಲ ಭಾರತ ಕಾರ್ಮಿಕರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹೋರಾಟಕ್ಕೆ ಬೆಂಬಲ ಸೂಚಿಸಿ ಕಪ್ಪು ಧರಿಸಿ ಕೆ.ಆರ್.ಪೇಟೆ ಪಟ್ಟಣದ ಚೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯ ಕೆ.ಮಧುಸೂದನ್, ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಸಿ.ಶಿವಶಂಕರ್ಮೂರ್ತಿ, ಕಾರ್ಯದರ್ಶಿ ಪಿ.ಅನಿಲ್, ಉಪಾಧ್ಯಕ್ಷ ಆರ್.ಹರ್ಷಿತ್, ಸಹ ಕಾರ್ಯದರ್ಶಿ ಹೆಚ್.ಎಲ್.ಅರುಣ್, ಖಜಾಂಚಿ ಪರಮೇಶ್ ಮತ್ತಿತರರ ನೇತೃತ್ವದಲ್ಲಿ ಚೆಸ್ಕಾಂ ಕಚೇರಿಯ ಆವರಣದಲ್ಲಿ ಸಭೆ ಸೇರಿದ ನೌಕರರು ಕೇಂದ್ರ ಸರ್ಕಾರವು ರೈತನ ಮಿತ್ರನಂತೆ ಕೆಲಸ ಮಾಡುತ್ತಿರುವ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ಪ್ರಸ್ತಾವನೆಯನ್ನು ಮಾಡಿದ್ದು ಇದು ರೈತ ವಿರೋಧಿ ನೀತಿಯಾಗಿದೆ ಹಾಗಾಗಿ ಯಾವುದೇ ಕಾರಣಕ್ಕೂ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಬಾರದು. ಒಂದು ವೇಳೆ ಖಾಸಗೀಕರಣ ಮಾಡಿದರೆ ಮೊದಲು ರೈತರ ನೆಮ್ಮದಿ ಹಾಳಾಗುತ್ತದೆ ನಂತರ ಬಡವರಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿರುವ ವಿದ್ಯುತ್ ಪೂರೈಕೆ ಬಂದ್ ಆಗುತ್ತದೆ ಆಗ ಬಡವರು ಸೀಮೆ ಎಣ್ಣೆ ದೀಪಕ್ಕೆ ಮತ್ತೆ ಮೊರೆ ಹೋಗಬೇಕಾಗುತ್ತದೆ ಆದ್ದರಿಂದ ಕೇಂದ್ರ ಸರ್ಕಾರವು ವಿದ್ಯುತ್ ಇಲಾಖೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಳ್ಳಬೇಕು. ವಿದ್ಯುತ್ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಲು ಸೂಕ್ತ ಯೋಜನೆಗಳನ್ನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅದೇ ರೀತಿ ಹಲವು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಕಾರ್ಮಿಕರಿಗೆ ಹೆಚ್ಚು ಅನುಕೂಲಕರವಾಗುವ ಕಾಯ್ದೆಗಳನ್ನು ಜಾರಿಗೆ ತರಬೇಕು. ಯಾವುದೇ ಸರ್ಕಾರಿ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಇದರಿಂದ ನೇರವಾಗಿ ಬಡವರಿಗೆ ತೊಂದರೆ ಉಂಟಾಗುತ್ತದೆ. ಹಾಗೂ ರೈತರಿಗೆ ಉಂಟಾಗುತ್ತದೆ. ಕೂಲಿ ಕಾರ್ಮಿಕರಿಗೆ ಉಂಟಾಗುತ್ತದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆಪಿಟಿಸಿಎಲ್ ನೌಕರರ ಯೂನಿಯನ್ ಅಧ್ಯಕ್ಷ ಶಿವಶಂಕರಮೂರ್ತಿ, ಹಾಗೂ ಕೇಂದ್ರ ಸಮಿತಿ ಸದಸ್ಯ ಮಧುಸೂಧನ್ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ಪ್ರಸ್ತಾಪಿತ ಕಾಯ್ದೆಗಳ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಶಂಕರ್, ಪ್ರದೀಪ್, ಸಹಾಯಕ ಇಂಜಿನಿಯರ್ ರವರಾದ ಸತೀಶ್, ನಂದನ್, ಶುಭಾಂಕ್, ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯ ಕೆ.ಮಧುಸೂದನ್, ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಸಿ.ಶಿವಶಂಕರ್ಮೂರ್ತಿ, ಕಾರ್ಯದರ್ಶಿ ಪಿ.ಅನಿಲ್, ಉಪಾಧ್ಯಕ್ಷ ಆರ್.ಹರ್ಷಿತ್, ಸಹ ಕಾರ್ಯದರ್ಶಿ ಹೆಚ್.ಎಲ್.ಅರುಣ್, ಖಜಾಂಚಿ ಪರಮೇಶ್, ನಿರ್ದೇಶಕರಾದ ಎಂ.ಡಿ.ಕಿರಣ್ ಕುಮಾರ್, ಕೆ.ಕೆ.ಮಹೇಶ್, ಡಿ.ಎಂ.ಹರೀಶ್, ಟಿ.ಸ್ವಾಮೀಗೌಡ, ರಮ್ಯ, ಹೆಚ್.ಬಿ.ಲಕ್ಷ್ಮೀ, ತಾಲ್ಲೂಕು ಸಮಿತಿ ಪ್ರತಿನಿಧಿಗಳಾದ ಎ.ಬಿ.ಗಿರೀಶ್, ಟಿ.ಆರ್ ಸಂತೋಷ್, ಬಿ.ಆರ್.ಪುಟ್ಟಪ್ಪ, ಅನಂತಕುಮಾರ್, ದ್ರುವಕುಮಾರ್, ರಾಜು, ಸ್ವಾಮೀಗೌಡ, ವೆಂಕಟೇಶ್, ಗೋವಿಂದಯ್ಯ, ಕಾಂತರಾಜು, ಎಸ್.ಎಲ್.ಮಂಜುನಾಥ್, ಕಿರಿಯ ಇಂಜಿನಿಯರ್ ರವರಾದ ಸುನಿಲ್ ಕುಮಾರ್, ಶ್ರೀಕಾಂತ್, ಫಾಜಿಲ್, ಅಹಮದ್, ಹರೀಶ್ ಕುಮಾರ್, ಭಾಸ್ಕರ್, ಅಶೋಕ್, ಟಿ.ಜಿ.ತಿಮ್ಮಪ್ಪ, ಯೂನಿಯನ್ ಮಹಿಳಾ ಸದಸ್ಯರಾದ ಪ್ರೇಮಮ್ಮ, ರಾಜಾಸುಲೋಚನಾ, ರುಕ್ಮಿಣಿ, ಮಂಜುಳಮ್ಮ, ಪವಿತ್ರ, ವರಲಕ್ಷ್ಮೀ, ಸವಿತ, ಕೊಣ್ಣೂರು ರಾಜೇಗೌಡ, ರಾಜೇಶ್, ನಿಂಗೇಗೌಡ, ಕೆ.ಹೆಚ್.ರಮೇಶ್, ಎಸ್.ಪಿ.ವೆಂಕಟೇಶ್, ಕಾಂತರಾಜು, ಗಜೇಂದ್ರ, ಎ.ಜೆ.ನಾಗರಾಜು, ಲಕ್ಕೇಗೌಡ, ಸ್ವಾಮಿ, ಪುನೀತ್, ಯೋಗೇಶ್, ಮೋಹನ್ ಕುಮಾರ್, ಮಲ್ಲಿಕಾರ್ಜುನ್, ಕೆ.ಎನ್.ಮಂಜುನಾಥ್, ಮಂಜುನಾಥಸ್ವಾಮಿ, ಮಲ್ಲಿಕಾರ್ಜುನ್ ಸೇರಿದಂತೆ ಎರಡು ವಿಭಾಗಗಳ ಎಲ್ಲಾ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ:12.ಕೆ.ಆರ್.ಪಿ-01: ಕೆ.ಆರ್.ಪೇಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ಹೊಸ ಕಾರ್ಮಿಕ ಸಂಹಿತೆಗಳು ಹಾಗೂ ವಿದ್ಯುತ್ ಇಲಾಖೆಯ ಖಾಸಗೀಕರಣ ಪ್ರಸ್ತಾವನೆ ವಿರೋಧಿಸಿ ತಾಲ್ಲೂಕು ಕೆಪಿಟಿಸಿಎಲ್ ನೌಕರರ ಯೂನಿಯನ್ ಪದಾಧಿಕಾರಿಗಳು ಹಾಗೂ ಚೆಸ್ಕಾಂ ಯೂನಿಯನ್ ಸದಸ್ಯರು ಅಖಿಲ ಭಾರತ ಕಾರ್ಮಿಕರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹೋರಾಟಕ್ಕೆ ಬೆಂಬಲ ಸೂಚಿಸಿ ಕಪ್ಪು ಧರಿಸಿ ಕೆ.ಆರ್.ಪೇಟೆ ಪಟ್ಟಣದ ಚೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ವರದಿ : ಶ್ರೀನಿವಾಸ್ ಆರ್
