ಭೋರ್ಗರೆಯುತ ಹರಿಯುತಿಹಳು
ತಾಯಿ ಗಂಗೆ..
ಒಡಲಾಳದ ಹೃದಯದಲ್ಲಿ ನೀರವ ಮೌನವ ನುಂಗುತ್ತಾ..!!
ಅರ್ಭಟಿಸುತ್ತಾ ದುಮ್ಮಿಕ್ಕುತಿಹಳು ಮಾತೆ..
ಜುಳು ಜುಳು ಸಂಗೀತವ ಮೀಟುತ್ತಾ..
ಕಾನನದ ಮಡಿಲಿಗೆ ಕಚಗುಳಿ ಇಡುತ್ತಾ..!!
ಲಾಲಿಸುತ್ತಾ..
ತಂಪೆರೆಯುತಿಹಳು ಧಾತೆ..
ತಿಳಿಮುಗಿಲ ಆಕಾಶದಲಿ ಪ್ರೀತಿಯ ಸೂಸುತ್ತಾ..
ಹಾಲ್ಗೆನ್ನೆಯ ಬಿಳುಪಿಗೆ ಚೆಂದಾನ ಬೆಸೆಯುತ್ತಾ..!!
ಹಸಿರ ಸೀರೆಯ ಉಟ್ಟು
ಉಸಿರ ತೋರಣವ ತೊಟ್ಟು
ಪಕ್ಷಿಗಳ ಚಿಲಿಪಿಲಿ ಪಿಸುಮಾತಿಗೆ ತಲೆಬಾಗುತಿಹವು ಮರಗಿಡಗಳು
ತಮ್ಮಿಷ್ಟಕ್ಕೇ ನಾಚುತ್ತಾ..!!
ಸೃಷ್ಟಿಯೇ ಸೃಷ್ಟಿಸಿದ
ತುಂಬು ಗರ್ಭಿಣಿ ಇವಳು..
ಅಂದಾವ ತುಂಬಿರುವ
ಚೆಂದಾವ ಹೊಂದಿರುವ
ಮೈ ನೆರೆದ ಕನ್ಯೆ ಇವಳು..
ಧರೆಗಿಳಿದ ಮೈಮಾಟದ
ಸುಂದರಿ ಇವಳು..
ಜೀವ ಸಂಕುಲದ
ಖನಿಜ ಇವಳು..!!
ಏನೆಂದು ತಿದ್ದಿ ತೀಡಿದನೋ ವಿಶ್ವಕರ್ಮನು
ಹೊಗಳಲಾಗದ ಸೌಂದರ್ಯವ
ಪ್ರಕೃತಿ ಮಡಿಲಲ್ಲಿ ಅಡಗಿಸಿ.!!!!
-ಇಂತಿ ನಿಮ್ಮವ ಅಪರಿಚಿತ ಮೌನಿ
