ಬೆಂಗಳೂರು, ಡಿಸೆಂಬರ್ 22, 2025:* ಮಾರುತಿ ಸುಜುಕಿ ಅರೆನಾ ಪ್ರಾಯೋಜಕತ್ವದ, ಕ್ರಂಚಿರೋಲ್ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ಬೆಂಗಳೂರಿನ ವೈಟ್ಫೀಲ್ಡ್ ನ ಕೆಟಿಪಿಓದಲ್ಲಿ ನಡೆದ ಬೆಂಗಳೂರು ಕಾಮಿಕ್ ಕಾನ್ ಅದ್ದೂರಿಯಾಗಿ ಸಮಾರೋಪಗೊಂಡಿದೆ. ಈ ಆವೃತ್ತಿಯಲ್ಲಿ 50,000ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ವರ್ಷದ ಕಾಮಿಕ್ ಕಾನ್ ಭಾರತದ ಅತ್ಯಂತ ಜನಪ್ರಿಯ ಪಾಪ್ ಕಲ್ಚರ್ ಕೇಂದ್ರಗಳಲ್ಲಿ ಒಂದಾಗಿರುವ ಬೆಂಗಳೂರಿನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿತು.
ವೇದಿಕೆಯಲ್ಲಿ ಕ್ರಿಯೇಟರ್ ಗಳ ನೇತೃತ್ವದಲ್ಲಿ ಹಲವಾರು ಪ್ಯಾನೆಲ್ ಚರ್ಚೆಗಳು, ಸಂವಾದಾತ್ಮಕ ಗೋಷ್ಠಿಗಳು, ಆಕರ್ಷಕ ಆಟಗಳು, ಅನಿಮೆ ಕ್ವಿಜ್ಗಳು ಮತ್ತು ಕಥೆ ಹೇಳುವಿ ಹಾಗೂ ಇಲ್ಲಸ್ಟ್ರೇಷನ್ ಪ್ರಕ್ರಿಯೆಯ ಕುರಿತು ಆಳವಾದ ಮಾತುಕತೆಗಳು ನಡೆದವು.
ಈ ವರ್ಷ 500ಕ್ಕೂ ಹೆಚ್ಚು ಕಾಸ್ಪ್ಲೇಯರ್ಗಳು ಭಾಗವಹಿಸಿದ್ದರು. ಅವರು ಅದ್ಭುತ ಪಾತ್ರಗಳ ವೇಷಭೂಷಣ ಧರಿಸಿ ಕಾರ್ಯಕ್ರಮವನ್ನು ರಂಗೇರಿಸಿದರು. ಬಾರ್ಡರ್ಲ್ಯಾಂಡ್ಸ್ 4ರ ಎಕ್ಸೋ ಸೈನಿಕ ರಾಫಾ ಪಾತ್ರದ ವೇಷ ಧರಿಸಿದ್ದ ಭಾರತೀಯ ಕಾಸ್ಪ್ಲೇ ಚಾಂಪ
