ಹಿರಿಯ ನಟ ಕ.ಸುಚೇಂದ್ರ ಪ್ರಸಾದ ಚಿತ್ರಕಥೆ-ಸಂಭಾಷಣೆ ಜತೆಗೆ ನಿರ್ದೇಶನ* ಮಾಡಿರುವ ’ಪದ್ಮಗಂಧಿ’ ಚಿತ್ರದ ಕನ್ನಡ, ಸಂಸ್ಕ್ರತ ಮತ್ತು ಹಿಂದಿ ಭಾಷೆಯ ಟ್ರೇಲರ್ ಹಾಗೂ ಹಾಡುಗಳ ಅನಾವರಣ ಕಾರ್ಯಕ್ರಮವು ಕಿಕ್ಕಿರದ ಎಸ್ಆರ್ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ಮಾಜಿ ಎಂಎಲ್ಸಿ, ಅಂಕಣಕಾರ್ತಿ, ಸಂಸ್ಕ್ರತ ಭೂಮಿಕೆಯಲ್ಲಿ ನಾನಾ ದಿಕ್ಕಿನಲ್ಲಿ ಅಧ್ಯಯನ ನಡೆಸಿರುವ ನಿವೃತ ಪ್ರೊಫೆಸರ್ ಎಸ್.ಆರ್.ಲೀಲಾ ರಚಸಿ, ನಿರ್ಮಾಣ ಮಾಡಿರುವುದು ಹೊಸ ಅನುಭವ.
ಶಂಕರ್ಶಾನ್ಭೋಗ್ ಸೇರಿದಂತೆ ಹಲವು ಗಾಯಕರುಗಳು ಗೀತೆಯ ಸಾಲು ಹಾಡುವುದರ ಮೂಲಕ, ಹಾಗೂ ಕೋಟೆ ರಾಮಚಂದ್ರಭಟ್ ಸಂಸ್ಕ್ರತ ಭಾಷೆಯ ಟ್ರೇಲರ್ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿದ್ಯಾರ್ಥಿಯಾಗಿ ಕು.ಮಹಾಪದ್ಮ, ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್ ಇವರೊಂದಿಗೆ ರಿಯಲ್ದಲ್ಲಿ ಹೆಸರು ಮಾಡಿರುವ ಶತಾವಧಾನಿ ಡಾ.ಆರ್.ಗಣೇಶ್, ಡಾ.ಗೌರಿ ಸುಬ್ರಹ್ಮಣ್ಯ (ಧರ್ಮಾಧಿಕಾರಿಗಳು, ಮುಕ್ತಿನಾಗ ದೇವಸ್ಥಾನ), ಡಾ.ಪ್ರೇಮಾ, ಡಾ.ಹೇಮಂತ್ಕುಮಾರ್, ಆಚಾರ್ಯ ಮೃತ್ಯುಂಜಯಶಾಸ್ತ್ರಿ, ಜಿ.ಎಲ್.ಭಟ್(ಶಿಲ್ಪಜ್ಞ), ಮೃತ್ಯುಂಜಯಶಾಸ್ತ್ರಿ, ಪಂಡಿತ ಪ್ರಸನ್ನವೈದ್ಯ, ಡಾ.ದೀಪಕ್ಪರಮಶಿವನ್, ಹೇಮಂತಕುಮಾರ.ಜಿ ಬಣ್ಣ ಹಚ್ಚಿರುವುದು ಚಿತ್ರಕ್ಕೆ ಹಿರಿಮೆ ತಂದುಕೊಟ್ಟಿದೆ. ಡಾ.ದೀಪಕ್ ಪರಮಶಿವನ್ ಸಂಗೀತ, ಮನುಯಪ್ಲಾರ್-ನಾಗರಾಜ್ ಅದ್ವಾನಿ-ಗಿರಿಧರ್ದಿವಾನ್ ಛಾಯಾಗ್ರಹಣ, ಎನ್.ನಾಗೇಶ್ ನಾರಾಯಣಪ್ಪ ಸಂಕಲನವಿದೆ.
ಈ ಸಂದರ್ಭದಲ್ಲಿ ಕ.ಸುಚೇಂದ್ರಪ್ರಸಾದ ಸಿನಿಮಾ ಹುಟ್ಟಿದ ಬಗ್ಗೆ ಅನುಭವಗಳನ್ನು ಹಂಚಿಕೊಂಡು ಮಾಧ್ಯಮದವರ ಇತ್ಯಾಹ್ಮಕ ಸ್ಪಂದನೆ ಸಿಗಬೇಕಿದೆ. ತಾವುಗಳು ನಮ್ಮ ಮನವಿಯನ್ನು ಒಪ್ಪಿಕೊಳ್ಳಬೇಕೆಂದು ಕೋರಿದರು.
-ಶ್ರೀ ಸಾಯಿ ಎಸ್ ಮಂಜು
