ಹೊಳೆನರಸೀಪುರ, ನ. 6: ಹೊಳೆನರಸೀಪುರ ತಾಲೂಕು ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನೀರಿನ ಟ್ಯಾಂಕ್ ಮೇಲೆ ಪೇಂಟ್ ಮಾಡುವಾಗ ಪೇಂಟರ್ ಆಕಾಶ್ (31) ಬಿದ್ದು ಮೃತಪಟ್ಟಿರುವ ದುರ್ಘಟನೆ ನಿನ್ನೆ ಸಂಜೆ ಸಂಭವಿಸಿದೆ.
ಮೃತ ಆಕಾಶ್ ಅವರು ಹೊಳೆನರಸೀಪುರ ಪಟ್ಟಣದ ಅಂಬೇಡ್ಕರ್ ನಗರ ನಿವಾಸಿಯಾಗಿದ್ದು, ಪರಿಶಿಷ್ಟ ಜನಾಂಗಕ್ಕೆ ಸೇರಿದವರು. ವೃತ್ತಿಯಿಂದ ಪೇಂಟರ್ ಆಗಿರುವ ಈತನು ನವೆಂಬರ್ 5ರಂದು ಸಂಜೆ ಸುಮಾರು 6.00 ಗಂಟೆ ಸುಮಾರಿಗೆ ಮಾಕವಳ್ಳಿ ಗ್ರಾಮ ಪಂಚಾಯಿತಿ 10 ವರ್ಷಗಳ ಹಿಂದೆ ನಿರ್ಮಿಸಿದ್ದ ನೀರಿನ ಟ್ಯಾಂಕ್ ಮೇಲೆ ಹೊಸದಾಗಿ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾಗ, ಟ್ಯಾಂಕ್ ಮೇಲಿನ ಕಬ್ಬಿಣದ ರಾಡ್ ಮುರಿದು ಆಕಾಶ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸದರಿ ಟ್ಯಾಂಕ್ಗೆ ಪೇಂಟ್ ಮಾಡುವ ಕಂಟ್ರಾಕ್ಟ್ ಬೆಳಗಾವಿ ಮೂಲದ ರತ್ನಂ ಎಂಬವರ ಹೆಸರಲ್ಲಿ ಇದ್ದು, ಅವರ ಮೇಲ್ವಿಚಾರಣೆಯಲ್ಲೇ ಈ ಕೆಲಸ ನಡೆಯುತ್ತಿದ್ದುದಾಗಿ ತಿಳಿದು ಬಂದಿದೆ.

ಘಟನೆಯ ಕುರಿತು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

[…] […]