ಇಸ್ಲಾಮಾಬಾದ್: ಭಾರತವು ಉಗ್ರರ ವಿರುದ್ಧ ಹಮ್ಮಿಕೊಂಡಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಶನಿವಾರ “ಬುನ್ಯಾನ್ ಅಲ್ ಮರ್ಸೂಸ್” ಎಂಬ ಹೆಸರಿನಲ್ಲಿ ತಾವು ಸಹ ವಾಯುಸೈನ್ಯದ ಕಾರ್ಯಾಚರಣೆಯನ್ನು ಆರಂಭಿಸಿರುವುದಾಗಿ ಘೋಷಿಸಿದೆ.
ಪಾಕಿಸ್ತಾನದ ಹೇಳಿಕೆಯಂತೆ, ಈ ಕಾರ್ಯಾಚರಣೆ ಭಾರತ ನಡೆಸುತ್ತಿರುವ ವಾಯು ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಕೈಗೊಳ್ಳಲಾಗಿದೆ. “ಬುನ್ಯಾನ್ ಅಲ್ ಮರ್ಸೂಸ್” ಎಂಬ ಅರೆಬಿಕ್ ಪದವು “Wall of Lead” ಅಥವಾ “ಮಾರ್ಗದರ್ಶನದ ಗೋಡೆ” ಎಂಬ ಅರ್ಥವನ್ನು ಹೊಂದಿದ್ದು, ಇದು ಕುರಾನ್ನಿಂದ ಪಡೆಯಲಾದ ಶಬ್ದವಾಗಿದೆ. ಇದರ ಹಿನ್ನೆಲೆ, ಯುದ್ಧದಲ್ಲಿ ಭಾಗವಹಿಸುವವರನ್ನು ಅಲ್ಲಾಹನು ಗೌರವಿಸುತ್ತಾನೆ ಮತ್ತು ರಕ್ಷಿಸುತ್ತಾನೆ ಎಂಬ ಆತ್ಮವಿಶ್ವಾಸ ತುಂಬುವ ಧರ್ಮೋಕ್ತಿಯ ಮೇಲೆ ಆಧಾರಿತವಾಗಿದೆ.
ಆರ್ಥಿಕ ಸಂಕಷ್ಟ ಹಾಗೂ ಯೋಧರ ಆತ್ಮವಿಶ್ವಾಸ ಕುಂದಿರುವಂತಹ ಸ್ಥಿತಿಯಲ್ಲಿ ಪಾಕಿಸ್ತಾನ, ಧರ್ಮಾತ್ಮಕ ಶಬ್ದಗಳನ್ನು ಬಳಸಿಕೊಂಡು ಸೈನಿಕರನ್ನು ಪ್ರೇರೇಪಿಸಲು ಯತ್ನಿಸುತ್ತಿರುವುದು ಕಾಣಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದೇವರ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸುವ ಮೂಲಕ, ಧರ್ಮಭಾವನೆಗೆ ಆಸರೆ ನೀಡುತ್ತಿರುವ ಪಾಕಿಸ್ತಾನ, ಉಗ್ರತನವನ್ನು ಮೌನವವಾಗಿ ಬೆಂಬಲಿಸುತ್ತಿದೆಯೇ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.
