ಕರಾಚಿ: ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಸಮುದಾಯಗಳನ್ನು ಉಲ್ಲೇಖಿಸಿ ಮಾತನಾಡುವಾಗ ಬಾಲಿವುಡ್ ದಿಗ್ಗಜ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಬಲೂಚಿಸ್ತಾನ್ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದು ಪಾಕಿಸ್ತಾನದ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್ನಲ್ಲಿ ಜಾಯ್ ಫೋರಮ್ 2025 ಕಾರ್ಯಕ್ರಮದಲ್ಲಿ ಶಾರುಖ್ ಖಾನ್ , ಆಮಿರ್ ಖಾನ್ ಸೇರಿದಂತೆ ಇತರ ಬಾಲಿವುಡ್ ಸೂಪರ್ಸ್ಟಾರ್ಗಳೊಂದಿಗೆ ಸಲ್ಮಾನ್ ಖಾನ್ ಭಾಗವಹಿಸಿದ್ದರು.
ಸಲ್ಮಾನ್ ಖಾನ್ ಹೇಳಿದ್ದೇನು?
“ಈಗ, ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ (ಸೌದಿ ಅರೇಬಿಯಾದಲ್ಲಿ) ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಸಿನಿಮಾ ಮಾಡಿದರೆ, ನೂರಾರು ಕೋಟಿ ವ್ಯವಹಾರ ಮಾಡುತ್ತದೆ ಏಕೆಂದರೆ ಇತರ ದೇಶಗಳಿಂದ ಇಲ್ಲಿಗೆ ಅನೇಕ ಜನರು ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ… ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ.” ಎಂದಿದ್ದರು.
ಸಲ್ಮಾನ್ ಖಾನ್ ನೀಡಿದ ಹೇಳಿಕೆಗೆ ಪಾಕಿಸ್ತಾನ ಸರ್ಕಾರದಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಅವರನ್ನು ʼಭಯೋತ್ಪಾದಕʼ ಎಂದು ಘೋಷಿಸಿದೆ.
ವರದಿಗಳ ಪ್ರಕಾರ, ನಟನನ್ನು ʼಭಯೋತ್ಪಾದಕʼ ಹಣೆಪಟ್ಟಿಗೆ ಸೇರಿಸಲಾಗಿದೆ. ಪಾಕಿಸ್ತಾನದ 1997 ರ ಭಯೋತ್ಪಾದನಾ ನಿಗ್ರಹ ಕಾಯ್ದೆಯ 4ನೇ ಶೆಡ್ಯೂಲ್ ಅಡಿಯಲ್ಲಿ ಹೆಸರನ್ನು ಸೇರಿಸಲಾಗಿದೆ.
