
ಚಾಮರಾಜನಗರ- ನಗರದ ರಸ್ತೆ ಬದಿಯ ಹೋಟೆಲ್ ಗಳು, ಗೋಬಿ,ಮಸಾಲೆ ಪಾನಿಪುರಿ ಇನ್ನಿತರ ಫಾಸ್ಟ್ ಫುಡ್ ಸೆಂಟರ್ಗಳ ಮೇಲೆ ನಗರಸಭಾ ಪೌರಾಯುಕ್ತ ರಾಮದಾಸ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ, ನಿಷೇಧಿಸಿದ ಪ್ಲಾಸ್ಟಿಕ್ ಬ್ಯಾಗ್, ತಟ್ಟೆಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ದಂಡ ಹಾಕಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಲಾಯಿತು.
ನಗರದ ತರಕಾರಿ ಮಾರುಕಟ್ಟೆ, ಹಳೆಯ ಖಾಸಗಿ ಬಸ್ ನಿಲ್ದಾಣ, ವೀರಭದ್ರಸ್ವಾಮಿ ದೇವಸ್ಥಾನ ಹತ್ತಿರ, ಹಾಗೂ ಬ.ರಾಚಯ್ಯ ಜೋಡಿರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ಹೋಟಲ್, ಗೋಬಿ, ಮಸಾಲೆ ಪಾನಿಪುರಿ, ಕಬಾಬ್ ಸೆಂಟರ್, ಮಾಲೀಕರಿಗೆ ಪೌರಾಯುಕ್ತರು ಗ್ರಾಹಕರಿಗೆ ಶುದ್ಧ ಕುಡಿಯುವ ನೀರು, ಬಿಸಿ ನೀರು, ಶುದ್ದ ಆಹಾರ, ಯಾವುದೇ ಆರೋಗ್ಯ ದ ಮೇಲೆ ಹಾನಿ ಉಂಟುಮಾಡುವ ಪುಡ್ ಕಲರ್, ಟೆಸ್ಟಿಂಗ್ ಪೌಡರ್ ಬಳಸಬೇಡಿ, ನಿಷೇಧಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿದರೆ ಅಂಗಡಿ ಅನುಮತಿ ರದ್ದುಪಡಿಸುವುದಾಗಿ ಎಚ್ಚರಿಸಿದರು.
ಜಿಲ್ಲಾಧಿಕಾರಿ ಆದೇಶದಂತೆ ನಗರಸಭೆ ಆರೋಗ್ಯ ಶಾಖೆ, ಕಲ್ಯಾಣ ಶಾಖೆ ಅಧಿಕಾರಿ ತಂಡ ರಚಿಸಿ ನಗರದ ಹೋಟೆಲ್, ಪಾಸ್ಟ್ ಪುಡ್ ಗೋಬಿ, ಮಸಾಲೆ ಪಾನಿಪುರಿ, ಕಬಾಬ್ ಸೆಂಟರ್, ಇನ್ನಿತರ ಕಡೆಗಳಲ್ಲಿ ದಾಳಿ ಮಾಡಿ ನಿಷೇಧಿಸಿದ ಪ್ಲಾಸ್ಟಿಕ್ ಬ್ಯಾಗ್, ತಟ್ಟೆಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ದಂಡ ಹಾಕಿ ಶುಚಿತ್ವ ಕಾಪಾಡುವಂತೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಮಂಜು, ನಾರಾಯಣಸ್ವಾಮಿ, ಸಿಬ್ಬಂದಿಗಳು ಸಿ.ಡಿ.ವೆಂಕಟೇಶ್, ಮಲ್ಲಿಕಾರ್ಜುನ ಸ್ವಾಮಿ ಹಾಜರಿದ್ದರು.
– ಶ್ರೀ ಸಾಯಿ ಎಸ್ ಮಂಜು