ಕೊರಟಗೆರೆ:- ತಾಲ್ಲೂಕಿನ ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕೊನೆಯ ಕಾರ್ತಿಕ ಮಾಸದ ಕಡೆ ಶುಕ್ರವಾರ, ನವಂಬರ್ 14ರಂದು, ದೀಪೋತ್ಸವ, ಬ್ರಹ್ಮರಥೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ,ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ. ವಾಸುದೇವ ತಿಳಿಸಿದ್ದಾರೆ.

ನವಂಬರ್ 14ರಂದು ಟ್ರಸ್ಟ್ ಆಡಳಿತ ಮಂಡಳಿಯಿಂದ ದೀಪೋತ್ಸವ ಅಂಗವಾಗಿ ಬೆಳಗೆ ಏಳರಿಂದ ಪಂಚಾಮೃತ ಅಭಿಷೇಕ. 8:30 ರಿಂದ ಮಧ್ಯಾಹ್ನ 12 ಗಂಟೆಗೆ ಗಣಪತಿ ಹೋಮ. ನವಗ್ರಹ ಹೋಮ. ಮಹಾಲಕ್ಷ್ಮಿ ಹೋಮ. ಗ್ರಾಮದೇವತೆ ದುರ್ಗಾ ಹೋಮ. ಮಧ್ಯಾಹ್ನ 12:35 ಕ್ಕೆ ರಥಾಂಗ ಹೋಮ ನಂತರ ದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ. ಅಭಿಜಿತ್ ಲಗ್ನನಲ್ಲಿ. ಸಾಂಸ್ಕೃತಿ ಕಲಾತಂಡದೊಂದಿಗೆ ಬ್ರಹ್ಮರಥೋತ್ಸವ. ಸಂಜೆ 5:30 ಕ್ಕೆ ದೀಪೋತ್ಸವ ಮತ್ತು ರಾತ್ರಿ 8 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಗೊರವನಹಳ್ಳಿ ನರಸಯ್ಯನಪಾಳ್ಯ ಗ್ರಾಮಸ್ಥರಿಂದ ಆರತಿ ಸೇವೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಹಾಗೂ ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯು ಕೂಡ ಅಚ್ಚುಕಟ್ಟಾಗಿ ಟ್ರಸ್ಟ್ ವತಿಯಿಂದ ಮಾಡಲಾಗುತ್ತದೆ ಎಂದು ಗೊರವನಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ರಂಗಸ್ವಾಮಿ. ವಿಶೇಷ ಅಧಿಕಾರಿ ಕೇಶವಮೂರ್ತಿ. ಲಕ್ಷ್ಮಣ್. ಮಂಜುನಾಥ್. ಶ್ರೀಪ್ರಸಾದ್. ರವಿ ರಾಜೇ ಅರಸ್. ಇದ್ದರು
ವರದಿ- ನರಸಿಂಹಯ್ಯ, ಹೊಸಕೋಟೆ.
