ಕೆ.ಆರ್.ಪೇಟೆ: ಭೂ ಅಭಿವೃದ್ಧಿ ಸಹಕಾರ ಗ್ರಾಮೀಣ (ಪಿ.ಎಲ್.ಡಿ) ಬ್ಯಾಂಕ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅರಳಕುಪ್ಪೆ ಮೋಹನ್ ಅವರು ಅಧಿಕಾರ ಸ್ವೀಕರಿಸಿದರು.
ಹಿಂದಿನ ಅಧ್ಯಕ್ಷರಾಗಿದ್ದ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿದ್ದರಿಂದ ಅದ್ಯಕ್ಷ ಸ್ಥಾನ ಬಯಸಿ ಎ ಸಿ ಮೋಹನ್ ಅರಳಕುಪ್ಪೆ ಅವರನ್ನು ಬಿಟ್ಟರೆ ಉಳಿದ ಯಾವ ಸದಸ್ಯರು ಉಮೇದುವಾರಿಕೆ ಸಲ್ಲಿಸದ ಕಾರಣ ಎ ಸಿ ಮೋಹನ್ ಬ್ಯಾಂಕ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಆನಂದ್ ಘೋಷಿಸಿದರು.
ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಮಾತನಾಡಿ ನಮ್ಮ ಬ್ಯಾಂಕ್ ನ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷ ಬಿಟ್ಟರೆ ಆಯ್ಕೆಯಾದ ನಂತರ ನಮ್ಮಲ್ಲಿ ಯಾವುದೇ ಪಕ್ಷ ಅಥವಾ ಗೊಂದಲವಿಲ್ಲ.ಎಲ್ಲರೂ ಬ್ಯಾಂಕ್ ಅಭಿವೃದ್ಧಿ ದೃಷ್ಟಿಯಿಂದ ಪ್ರತಿಯೊಬ್ಬ ನಿರ್ದೇಶಕರು ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಎಲ್ಲರಿಗೂ ಎಲ್ಲದರಲ್ಲೂ ವಿಶ್ವಾಸವಿದೆ.ಮುಂದೆ ಯಾರೇ ಅಧ್ಯಕ್ಷರಾಗಲಿ ಅವರಿಗೆ ನಾವೆಲ್ಲರೂ ಕೈಜೋಡಿಸುತ್ತೇವೆ.ಬ್ಯಾಂಕ್ ಸರ್ವಾಂಗೀಣ ಅಭಿವೃದ್ಧಿಗೆ ಅಧ್ಯಕ್ಷರು ಉಪಾಧ್ಯಕ್ಷರ ಕೈ ಬಲಪಡಿಸುತ್ತೇವೆ ಎಂದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾದ ಪೇಟೆ ಅರಳಕುಪ್ಪೆ ಮೋಹನ್ ಮಾತನಾಡಿ ನಾನು ಮೊದಲ ಬಾರಿಗೆ ಬ್ಯಾಂಕ್ ನಿರ್ದೇಶಕರಾಗಿ ಎಲ್ಲರ ಸಹಕಾರದಿಂದ ಅಧ್ಯಕ್ಷರನಾಗಿದ್ದೇನೆ. ನನ್ನೆಲ್ಲ ನಿರ್ದೇಶಕರಿಗೆ ಋಣಿಯಾಗಿ,ಸದಸ್ಯರಿಗೆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ.ರೈತರಿಗೆ, ನಿರುದ್ಯೋಗಿಗಳಿಗೆ ಉಪ ಕಸುಬು ಕೈಗೊಳ್ಳಲು ಕುರಿ, ಕೋಳಿ, ಮೇಕೆ, ಫಾರಂ ಆರಂಭಿಸಲು ಸಾಲ ಸೌಲಭ್ಯವನ್ನು ತ್ವರಿತಗತಿಯಲ್ಲಿ ಸಾಲ ಸೌಲಭ್ಯ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆ ಬ್ಯಾಂಕಿನ ನಿರ್ದೇಶಕರು ಮುಖಂಡರು,ಅಭಿಮಾನಿಗಳು, ಹಿತೈಷಿಗಳು ಪಟಾಕಿ ಸುಡುವ ಮೂಲಕ, ಹಾರ ತುರಾಯಿ ಹಾಕಿ,ಸಿಹಿ ವಿತರಣೆ ಮಾಡುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಉಪಾಧ್ಯಕ್ಷ ಮಾರ್ಗೋನಹಳ್ಳಿ ರಮೇಶ್, ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ,
ನಿರ್ದೇಶಕರಾದ ಅಣ್ಣೆಚಾಕನಹಳ್ಳಿ ನಾಗರಾಜೇಗೌಡ,
ರಾಜಾನಾಯಕ, ಮಾಳಗೂರು ಜಗದೀಶ್,ಬಣ್ಣೇನಹಳ್ಳಿ ಧನಂಜಯ,ಲಕ್ಷ್ಮೀಫುರ ಚಂದ್ರೇಗೌಡ,ಬಂಡಿಹೊಳೆ ನಾಗೇಶ್,ಶೀಳನೆರೆ ರಾಮೇಗೌಡ, ಮಂಜುಳಾ ಕೃಷ್ಣಗೌಡ,ಕವಿತ ಚಂದ್ರೇಗೌಡ,ಕೆ ಟಿ ಚಕ್ರಪಾಣಿ,ಅರೆನೊಪ್ಪನಹಳ್ಳಿ ಸುನಿಲ್, ಭಾರತೀಪುರ ಸುರೇಶ್, ಮುಖಂಡರಾದ ಸೋಮೇಗೌಡ, ರಾಜೇಶ್, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
