ಅಸ್ಪಶ್ಯತೆ, ಜಾತಿ ತಾರತಮ್ಯ,ಪ್ರತಿ ಕಾಲಘಟ್ಟದಲ್ಲೂ ದಾರ್ಶನಿಕರು ಹೋರಾಟ ನಡೆಸಿದ್ದು ಅದನ್ನು ಅರಿತು ಮುನ್ನಡೆಯಬೇಕಿದೆ- ಸಾಹಿತಿ ಡಾ. ಕಾಳೇಗೌಡ ನಾಗಾವರ

ಹಾಸನದ ಗಾಂಧಿ ಭವನದಲ್ಲಿ ನಡೆದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಡಾ. ಕಾಳೇಗೌಡ ನಾಗಾವರ ಅಸ್ಪಶ್ಯತೆ, ಜಾತಿ ತಾರತಮ್ಯ ಮತ್ತು ಸ್ತ್ರೀ ಅಸಮಾನತೆ ವಿರುದ್ಧ ನಡೆದ ಹೋರಾಟಗಳ ಇತಿಹಾಸವನ್ನು ಯುವಜನತೆ ಅರಿತುಕೊಳ್ಳಬೇಕೆಂದು ಕರೆ ನೀಡಿದರು. ಜಿಲ್ಲೆಯ ವೈಶಿಷ್ಟ್ಯ ಕುರಿತ ಕೃತಿ ಭವಿಷ್ಯ ಪೀಳಿಗೆಗೆ ಆಕರ ಗ್ರಂಥವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.