ಕೊರಟಗೆರೆ;- ದೇಶದಲ್ಲಿ ಧರ್ಮದ ಕಲೆ, ಸಂಸ್ಕೃತಿ, ಸಂಪ್ರದಾಯ ಉಳಿಯಬೇಕಾದರೆ ಗ್ರಾಮೀಣ ಭಾಗದಲ್ಲಿ ಇಂತಹ ಸತ್ಕಾರ್ಯಗಳು ನಡೆಯಬೇಕು. ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮಿಜೀಗಳು ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಿದಲೋಟಿ ಗ್ರಾಮದಲ್ಲಿ ನಡೆದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಳ್ಳಲಾಗಿದ್ದ ಚಾಮುಂಡೇಶ್ವರಿ ದೇವಿಯ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ತತ್ವಪದ ಮೇಳ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.
ನೀವೇಲ್ಲ ಶಿವನ ಆರಾಧಕರು ಧ್ಯಾನ ನಿಷ್ಠೆಯಿಂದ ಇರುವಲ್ಲೇ ದೇವರನ್ನು ಕಾಣುವ ಮಹಾನ್ ಯೋಗಿಗಗಳು ನೀವು. ಧರ್ಮದ ಸಂಸ್ಕೃತಿ ಸಂಸ್ಕಾರ ನಿಮ್ಮಿಂದ ಉಳಿಯುತ್ತಿದೆ. ತತ್ವ ಪದ ಸಂಸ್ಕೃತಿಯನ್ನು ಈ ಮಠ ಮುಂದುವರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ನಿಮ್ಮ ಜೊತೆ ನಾವು ಸದಾ ಇರುತ್ತವೆ ಎಂದರು.
ಸಾಹಿತಿ ಬಿದಲೋಟಿ ರಂಗನಾಥ್ ಮಾತನಾಡಿ, ಜಾತಿ ಮತ ಧರ್ಮವನ್ನು ಮೀರಿದ ಪ್ರಕಾರ ತತ್ವಪದ ಇವತ್ತಿಗೂ ಯಾರ ಮನೆಯಲ್ಲಾದರೂ ಸಾವಾದರೇ ನಿದ್ದೆ ಗೆಟ್ಟು ತತ್ವಪದಗಳನ್ನ ಹಾಡುತ್ತ ಆ ಮೂಲಕ ಶಿವನ ಧ್ಯಾನವನ್ನು ಮಾಡುತ್ತ ಶವವನ್ನ ಕಾಯುವ ಕಾಯಕ ಉಳಿಸಕೊಂಡು ಬಂದಿರುವುದು ತತ್ವಪದಕಾರರು ಮಾತ್ರ ಎಲ್ಲ ಜಾತಿ ಧರ್ಮದವರು ಹೀಗೆ ಒಂದು ಕಡೆ ಸೇರಿ ಹಾಡುವುದರಿಂದ ಭ್ರಾತೃತ್ವ ಬೆಳೆಯುತ್ತದೆ ಎಂದು ತಿಳಿಸಿದರು.
ತತ್ವಪದಗಳು ಇಂದಿಗೂ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿವೆ. ಅವು ನೆಲಮೂಲ ಸಂಸ್ಕೃತಿಯ ನೆನಪಿಸುತ್ತವೆ. ಸಾಹಿತ್ಯ ಮೂಲಬೇರು ಜನಪದಗಳು. ಅವುಗಳ ಆಶಯವನ್ನು ಮುಂದಿನ ತಲೆಮಾರುಗಳಿಗೂ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ ಆ ನಿಟ್ಟಿನಲ್ಲಿ ಈ ಟ್ರಸ್ಟ್ ತತ್ವಪದ ಮೇಳ ಸ್ಪರ್ಧೆಯಲ್ಲಿ ಗೆದ್ದವರಿಗೂ ಹಾಗೂ ಸಮಾಜ ಸೇವೆ ಮಾಡಿದವರಿಗೂ ಗೌರವಿಸಿ ಪ್ರೋತ್ಸಾಹಿಸುತ್ತಿರವುದು ಖುಷಿ ತಂದಿದೆ ಎಂದರು.
ಶ್ರೀ ಆದಿಶಕ್ತಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ತತ್ವಪದಕಾರ ಮರಿರಂಗಯ್ಯ ಸ್ವಾಮಿಗಳು ಮಾತನಾಡಿ, ಇಂದು ನಾವು ಮಾಡುವ ಕಾರ್ಯದಲ್ಲಿ ತೃಪ್ತರಾಗಬೇಕು. ತತ್ವಪದಗಳನ್ನು ಹಾಡುವ ಮೂಲಕ ಸತ್ಯದ ಶೋಧನೆಯನ್ನು ಜನರಿಗೆ ತಿಳಿಸಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರು ಒಗ್ಗೂಡಿ ಕೆಲಸ ಮಾಡಬೇಕಿದೆ. ಗುರು ಪರಂಪರೆಯನ್ನು ಗೌರವಿಸಬೇಕಿದೆ ಎಂದರು.
ಮಧುಗಿರಿ ತಾಲೂಕಿನ ಬಸವನಹಳ್ಳಿ ಶಿಕ್ಷಕ ರಮೇಶ್ ಅವರಿಗೆ, ಟ್ರಸ್ಟ್ ನವತಿಯಿಂದ ಅತ್ಯುತ್ತಮ ಶಾಲಾಭಿವೃದ್ಧಿ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತತ್ವಪದ ಮೇಳದಲ್ಲಿ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತ್ತು.
ಕಾರ್ಯಕ್ರಮದಲ್ಲಿ ತತ್ವಪದಕಾರರಾದ ತಿಪ್ಪೆಸ್ವಾಮಿ, ಸಿದ್ದಗಂಗಮ್ಮ, ಮಧುಸೂಧನ್, ಚನ್ನಮ್ಮ ಹನುಮಂತರಾಯಪ್ಪ. ತೋವಿನಕೆರೆ. ನಿವೃತ್ತ ಪೇದೆ. ಹನುಮಂತರಾಯಪ್ಪ, ನಿವೃತ್ತ ಶಿಕ್ಷಕ ಸಿದ್ದಗಂಗಯ್ಯ, ಎಲ್.ಐ.ಸಿ ಲಕ್ಷೀನರಸಯ್ಯ, ಸುಜಾತ, ಕಾರ್ತಿಕ್, ಮಂಜುನಾಥ್, ನರಸಿಂಹಮೂರ್ತಿ, ಪಾರ್ವತಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್ ಕೊರಟಗೆರೆ.
