
ದೆಹಲಿ ಪರೇಡ್-ಗಣರಾಜ್ಯೋತ್ಸವ ಮೆರವಣಿಗೆ ಆಯೋಜನೆ
- ಭಾರತದ ಸಂವಿಧಾನ ಜಾರಿಗೆ ಬಂದದ್ದು 1950ರ ಜನವರಿ 26ರಂದು. ಅಂದಿನಿಂದ ಪ್ರತಿವರ್ಷ ಜನವರಿ 26ನ್ನು “ಗಣರಾಜ್ಯ ದಿನ’ ಎಂದು ಆಚರಿಸಲಾಗುತ್ತದೆ.
- ಈ ದಿನ ನವದೆಹಲಿಯಲ್ಲಿ ವಿಶೇಷ ಉತ್ಸವ ನಡೆಯುತ್ತದೆ. ಇದೇ “ರಿಪಬ್ಲಿಕ್ ಡೇ ಪೆರೇಡ್’.
- “ರಿಪಬ್ಲಿಕ್ ಡೇ ಪೆರೇಡ್’ ಎಂದರೆ, ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಒಂದು ಭರ್ಜರಿ ಮೆರವಣಿಗೆ
- ರೈಸಿನಾ ಹಿಲ್ನಲ್ಲಿ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ತನಕದ ದಾರಿ ಇದು. ಈ ದಾರಿಯ ಇಕ್ಕೆಲಗಳಲ್ಲಿ ಆಹ್ವಾನಿತ ಪ್ರವಾಸಿಗರು ಕುಳಿತಿರುತ್ತಾರೆ. ಕರ್ತವ್ಯಪಥದಲ್ಲಿ ಒಟ್ಟು 77 ಸಾವಿರ ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆಗಳಿವೆ.
- ಭಾರತದ ಪ್ರತಿಯೊಂದು ರಾಜ್ಯ ಈ ಮೆರವಣಿಗೆಯಲ್ಲಿ ತನ್ನ ಸಾಂಸ್ಕೃತಿಕ ಪರಂಪರೆಯ ದೃಶ್ಯಚಿತ್ರ (ಟ್ಯಾಬ್ಲೋ)ಗಳನ್ನು ಪ್ರದರ್ಶಿಸುತ್ತವೆ.
- ಈ ಮೆರವಣಿಗೆಯ ಆಯೋಜನೆ ನಡೆಸುವುದು ಭಾರತ ರಕ್ಷಣಾ ಸಚಿವಾಲಯ. ಮೆರವಣಿಗೆಯ ಗುಣಮಟ್ಟ ಮತ್ತು ಮೌಲ್ಯಗಳನ್ನು ಕಾಪಾಡುವುದು ಇದರ ಹೊಣೆಗಾರಿಕೆ.
- 2025ರ ಗಣರಾಜ್ಯ ದಿನದ ಪರೇಡ್ಗೆ “ಸ್ವರ್ಣಿಮ್ ಭಾರತ್ : ವಿರಾಸತ್ ಔರ್ ವಿಕಾಸ್’ (ಸುವರ್ಣ ಭಾರತ : ಪರಂಪರೆ ಮತ್ತು ಅಭಿವೃದ್ದಿ) ಎಂಬ ವಿಷಯವನ್ನು ನಿಗದಿಪಡಿಸಲಾಗಿದೆ
- ಭಾರತದ ಭವ್ಯ ಪರಂಪರೆ ಮತ್ತು ಆಧುನಿಕ ಸಾಧನೆಗಳನ್ನು ಅಂತಾರಾಷ್ಟ್ರೀಯ ಹಂತದಲ್ಲಿ ಪ್ರದರ್ಶಿಸಲು ಈ ವಿಷಯವನ್ನು ಆರಿಸಲಾಗಿದೆ.