ಚನ್ನರಾಯಪಟ್ಟಣ: ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಒಳ ಮೀಸಲಾತಿ ಜಾರಿಗೆ ಸಮೀಕ್ಷೆದಾರರು ಮನೆಗೆ ಬಂದಾಗ ಹೊಲಯ ಜಾತಿ(44.1) ಎಂದು ಸ್ಪಷ್ಟವಾಗಿ, ಪ್ರಾಮಾಣಿಕವಾಗಿ ನಮೂದಿಸಬೇಕು.ಸರಿಯಾದ ಜಾತಿ ಮಾಹಿತಿ ನೀಡದಿದ್ದರೆ ನಮ್ಮ ಸಮಾಜಕ್ಕೆ ನಷ್ಟವಾಗುತ್ತದೆ ಎಂದು ದಲಿತ ಮುಖಂಡ ಎಚ್ ಕೆ ಸಂದೇಶ್ ತಿಳಿಸಿದರು.
ಚನ್ನರಾಯಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಈಗಾಗಲೇ ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿಗೆ ಕ್ರಮ ಕೈಗೊಂಡಿದ್ದು,
ಸರಿಯಾದ ಅಂಕಿ-ಅಂಶಗಳ ಕೊರತೆಯಿಂದ ಮೀಸಲಾತಿ ಹಂಚಿಕೆಯಲ್ಲಿ ಹಲವು ತೊಂದರೆಗಳು ಉಂಟಾಗಿವೆ. ಇದನ್ನು ಪ್ರತಿಯೊಬ್ಬ ವಿದ್ಯಾವಂತರು ಹಾಗೂ ನೌಕರರು ಮನಗೊಂಡು ಜಾತಿ ಜನಗಣತಿಯ ಮಾಡಿಸುವ ಸಂದರ್ಭದಲ್ಲಿ ಹೂಲಯ ಎಂದು ಕಡ್ಡಾಯವಾಗಿ ಬರಸಬೇಕು ಎಂದು ವಿನಂತಿ ಮಾಡಿದರು. ಇಂಟರ್ನೆಟ್ ಸಮಸ್ಯೆಯಿಂದ ಹಲವು ಗ್ರಾಮಗಳಲ್ಲಿ ಜಾತಿಗಣತಿಯು ಅಪೂರ್ಣಗೊಂಡಿರುತ್ತದೆ. ಆದ ಕಾರಣ ರಾಜ್ಯ ಸರ್ಕಾರವು ಈ ತಿಂಗಳ ಅಂತ್ಯದವರೆಗೆ ಜಾತಿ ಜನಗಣತಿಯ ಸಮೀಕ್ಷೆಯನ್ನು ವಿಸ್ತರಣೆ ಮಾಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಕೃಷ್ಣಕುಮಾರ್, ಹಿರಿಯ ದಲಿತ ಮುಖಂಡ ಎಚ್ ಕೆ ಸಂದೇಶ, ಡಿಎಸ್ಎಸ್ ಮುಖಂಡರುಗಳಾದ ಕುರುವಂಕ ಮಂಜುನಾಥ್, ಮಾದಿಹಳ್ಳಿ ಮಂಜು ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ ಐ.ಕೆ
