
ದೇಹ ಸಿಗುವುದಯ್ಯ
ದೇಹ ಸಿಗಬಹುದಯ್ಯ
ಮನಸ್ಸ ಮಾರಿಕೋಂಡು
ಬಿದಿಯಲ್ಲಿ ನಿಂತು
ಬೇರೆಯವರಿಗೆ ಸುಖ ನೀಡಿ
ತನ್ನ ನೋವ ಮರೆತು
ದೇಹದ ದಾಸೋಹ ಮಾಡಿ
ಕಾಮುಕನಿಗೆ ತೃಪ್ತಿ ನೀಡಿ
ದೇಹ ಸಿಗುವುದಯ್ಯ
ಹಣದ ಬರವಿಲ್ಲ
ಪ್ರೀತಿಯ ಬರವಿದೆಯಿಲ್ಲಿ
ಮೊದಲ ಮೈತುನದ
ಅನುಭವ ಕಂಡ
ಅಂಗಾಗಳಿಗೆ ಸಾವು
ಬಂದು ಹೋಗುವ ಕೊನೆಯ
ಉಸಿರು ನಿಂತು ಆತ್ಮ ದೇಹವ
ಮರೆವ ಯತ್ನ
ದೇಹ ಸಿಗುವುದಯ್ಯ..
ದಾಹ ತಿರಿಸಿಕೋಂಡವ
ದೊರೆಯಾದರು ಭಿಕ್ಷುಕನೆ
ತಬ್ಬಿಕೊಂಡ ಮೈಯಲ್ಲಿ
ರೊಮಾಚನವೆ ತಿಳಿಯದೆ
ಮಾಂಸಗಳ ಕುದ್ದಾಟದಲ್ಲಿ
ಲಿಂಗಗಳ ಆಟ ಮುಗಿದ್ದಿದ್ದರು
ಮತ್ತೋಮ್ಮೆ ಬಿದಿಯಲ್ಲಿ
ಬಿಕರಿಗೆ ಸಜ್ಜಾಗಿ ನಿಂತು
ವಿಧಿಯೆ ತಲೆಹಿಡುಕನಾಗಿ
ನೋಡಿ ಹೇಳತಿಹನು
ದೇಹ ಸಿಗುವುದಯ್ಯ
ಬಂದು ಕೋಳ್ಳಿರಿ ಎಂದು…
-ಸೂರಿ