
ಬೆಂಗಳೂರು– ಇತ್ತೀಚಿಗೆ ಎಲ್ಲೆಂದರಲ್ಲಿ ರೀಲ್ ಮಾಡುವ ಹುಚ್ಚಿನಿಂದ ಅನೇಕ ಅಪಾಯಗಳು ಸಂಭವಿಸುತ್ತಿದೆ. ಮೋಜು ಮಸ್ತಿ ಹೆಸರಲ್ಲಿ ಇಂಥ ಅಪಾಯಗಳು ದಿನನಿತ್ಯ ನಡೆಯುತ್ತಿದ್ದು, ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಮಚ್ಚು- ಲಾಂಗ್ ಹಿಡಿದು ವಿಲೀಂಗ್ ಮಾಡಿದ ಯುವಕರರನ್ನು ಪೊಲೀಸ್ ಸಿಬ್ಬಂದಿ ಎಡೆಬುರಿ ಕಟ್ಟಿದಂತ ಘಟನೆ, ಡಿ ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು… ಇತ್ತೀಚೆಗೆ ಡಿ ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಕೆ ಜಿ ಹಳ್ಳಿ, ಹೊರಮಾವು, ಕಸ್ತೂರಿನಗರದ ರಸ್ತೆಗಳಲ್ಲಿ ವೀಡಿಯೋದಲ್ಲಿ ಕಂಡು ಬರುವ ಅಸಾಮಿಗಳು, ಅತೀ ನಿರ್ಲಕ್ಷತನದಿಂದ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದಲ್ಲದೇ, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರ ಶಾಂತಿ ಹಾಗೂ ಪ್ರಾಣಕ್ಕೆ ಕುತ್ತು ಉಂಟು ಮಾಡುವ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡಿದ್ದರು.
ಈ ಸಂಬಂಧ, ಸಾರ್ವಜನಿಕರ ಶಾಂತಿಗೆ ಭಂಗ ತಂದ ಹಿನ್ನಲೆ ಅವರುಗಳ ವಿರುದ್ಧ ಸ್ವತಃ ಡಿ ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸ್ ರು, ಸದರಿ ಪ್ರಕರಣದಲ್ಲಿನ ಹನ್ನೊಂದು ಜನ ಆರೋಪಿಗಳನ್ನ ಬಂಧಿಸಿ, ಕೃತ್ಯಕ್ಕೆ ಬಳಸಿದ ಬೈಕ್ ಗಳಲ್ಲಿ 07 ಬೈಕ್ ಗಳನ್ನು ವರ ಪಡಿಪಿಕೊಂಡಿರುತ್ತದೆ. ಪ್ರಕರಣದ ತನಿಖೆಯನ್ನು ಕೈಗೊಂಡಿದ್ದು, ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಇನ್ನೂ ಪೋಲಿಸ್ರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಬಾರಿ ಪ್ರಶಂಸೆ ಕೇಳಿ ಬಂದಿದೆ.