ಹಾಸನ: ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ಎಸ್.ಐ.ಟಿ. ತಂಡಕ್ಕೆ ರಾಜ್ಯ ಸರ್ಕಾರ ಬಹುಮಾನ ನೀಡಿರುವ ಕ್ರಮದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, “ರೇವಣ್ಣ ನನ್ನ ಮನೆಯಲ್ಲಿದ್ದಾಗಲೇ ಎಸ್.ಐ.ಟಿ. ತನಿಖಾಧಿಕಾರಿಗಳು ಬಂದು ‘ನಿಮ್ಮನ್ನು ಬಂಧಿಸಲಾಗಿದೆ, ಬನ್ನಿ’ ಎಂದು ಕರೆದುಕೊಂಡು ಹೋದರು” ಎಂದು ಹೇಳಿದರು.
“ರೇವಣ್ಣನ ಕುಟುಂಬವನ್ನು ಮುಗಿಸಿದ್ದಕ್ಕಾಗಿ ನಮ್ಮ ಎದುರಾಳಿಗಳು, ಈಗ ಅಧಿಕಾರದಲ್ಲಿರುವವರು ತನಿಖಾಧಿಕಾರಿಗಳಿಗೆ ಪುರಸ್ಕಾರ ನೀಡಿ ಸಂಭ್ರಮಿಸುತ್ತಿದ್ದಾರೆ,” ಎಂದು ಕಿಡಿಕಾರಿದರು.
“ಕಾಲ ಬರುತ್ತದೆ. ನಾನು ದೈವವನ್ನು ನಂಬುತ್ತೇನೆ. ಕಾಲ ಬಂದಾಗ ಎಲ್ಲವೂ ಗೊತ್ತಾಗುತ್ತದೆ,” ಎಂದು ಮಾರ್ಮಿಕವಾಗಿ ನುಡಿದ ಅವರು, ಈ ಪ್ರಕರಣದ ಕುರಿತು ಭವಿಷ್ಯದಲ್ಲಿ ಸತ್ಯ ಬಹಿರಂಗವಾಗಲಿದೆ ಎಂಬ ಸೂಚನೆ ನೀಡಿದರು.
