ಬೆಂಗಳೂರು : ಕನ್ನಡ ಬೆಳವಣಿಗೆಗೆ ಯುವಕರನ್ನು ಸನ್ನದ್ಧ ಗೊಳಿಸುವುದು ಇವತ್ತಿನ ತುರ್ತು ಕೆಲಸವಾಗಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್. ಎನ್, ಮುಕುಂದರಾಜ್ ಅಭಿಪ್ರಾಯಪಟ್ಟರು.
ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಹಾಗೂ ಸುಮಂಗಲಿ ಸೇವಾಶ್ರಮದ ಸಹಕಾರದೊಂದಿಗೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 10 ನೇ ಯುವಜನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಸಂದರ್ಭದಲ್ಲಿ ಸಾಹಿತ್ಯ, ಭಾಷೆ, ಸಂಸ್ಕೃತಿ ಅಷ್ಟೇ ಅಲ್ಲ ಕನ್ನಡದ ಬೆಳವಣಿಗೆಗೆ ಯುವ ಮನಸ್ಸುಗಳನ್ನು ಬೆಸೆಯುವ ಸಂಘಸಂಸ್ಥೆಗಳು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಮತ್ತು ಅದರ ಅಧ್ಯಕ್ಷರಾದ ಪ್ರೊ.ಸಿಸಿರಾ ಮತ್ತು ಗೆಳೆಯರು ಕಳೆದ 25 ವರ್ಷಗಳಿಂದ ಕಾವ್ಯ,ಕಥಾ ಕಮ್ಮಟ, ಯುವಜನ ಮೇಳ, ಮಹಿಳಾ ಸಂಸ್ಕೃತಿ ಸಮಾವೇಶಗಳ ಮೂಲಕ ಕನ್ನಡದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ, ಇದು ಶ್ಲಾಘನೀಯ ಸೇವೆ ಎಂದರು.
ಸರ್ಕಾರೇತರ ಸಂಸ್ಥೆಯೊಂದು ಸರ್ಕಾರದ ಯಾವುದೇ ನೆರವಿಲ್ಲದೆ ದತ್ತಿ ದಾನಿಗಳ ನೆರವಿನಿಂದ ಹಾಗೂ ತಮ್ಮ ಸ್ವಂತ ದುಡಿಮೆಯಿಂದ ಹೀಗೆ ಗೌರವಿಸಿ ಪ್ರೋತ್ಸಾಹ ನೀಡುವ ಮೂಲಕ ಯುವಜನಾಂಗಕ್ಕೆ ಗಾಂಧೀಜಿ ಮತ್ತು ವಿವೇಕಾನಂದ ತತ್ವ ಸಿದ್ಧಾಂತಗಳನ್ನು ಪ್ರಚಾರದಲ್ಲಿ ತೊಡಗಿರುವುದು ಮೆಚ್ಚುವಂಥದ್ದು ಎಂದರು.
ಸಮ್ಮೇಳನ ಅಧ್ಯಕ್ಷರಾದ ಡಾ.ಎಂ.ಆರ್.ಉಪೇಂದ್ರ ಕುಮಾರ್ ಮಾತನಾಡಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ದತ್ತಿ ನೀಡುವೆ, ಆ ಹಣದಿಂದ ಸಾಹಿತ್ಯವನ್ನು, ಕನ್ನಡವನ್ನು ಗ್ರಾಮೀಣ ಪ್ರದೇಶದಲ್ಲಿಯೂ ಪರಿಚಯ ಮಾಡಲು ಇದರಿಂದ ಪ್ರೇರಣೆ ಆಗುತ್ತವೆ ಎಂದರು.
ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ನ ವ್ಯವಸ್ಥಾಪನಾ ಟ್ರಸ್ಟಿ ಇಂದಿರಾ ಕೃಷ್ಣಪ್ಪ ಅವರು ರಂಗಭೂಮಿ ಕಲಾವಿದ , ಕವಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರ *ಕಾಲದ ಜೊತೆ ನಾನೂ* ಅನುವಾದ ಕೃತಿಯನ್ನು ಬಿಡುಗಡೆ ಮಾಡಿ ಕನ್ನಡಕ್ಕೆ ಹೊರಗಿನ ಸಾಹಿತ್ಯ ಮತ್ತು ಒಳಗಿನ ಸಾಹಿತ್ಯವನ್ನು ಅನುವಾದಿಸು ಕೆಲಸ ಕಾರ್ಯಗಳು ಹೆಚ್ಚಾಗಬೇಕು. ಆವಾಗ ನಮ್ಮ ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕೃತಿ, ಲೇಖಕರ ಪರಿಚಯ ಆಗಲು ಸಾಧ್ಯ ಎಂದರು.

ಕಸಾಪ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ.ಮನುಬಳಿಗಾರ್ ಸಮಾಜ ಸೇವಕರಾದ ಶಶಿಕಾಂತ್ ರಾವ್ ಅವರು ನೀಡಿರುವ ಪುನೀತ್ ರಾಜಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ ಮತ್ತು ಕುವೆಂಪು ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಇವತ್ತು ಪ್ರಶಸ್ತಿ, ಮಾನ, ಸನ್ಮಾನಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಕಾಲದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಡಾ.ಸಿಸಿರಾ ದಾನಿಗಳ ಸಹಕಾರದಿಂದ ವಿವಿಧ ದತ್ತಿ ಸ್ಥಾಪಿಸಿ ಸಾಧಕರಿಗೆ ಇವರೇ ಹಣ ಕೊಟ್ಟು ಪ್ರಶಸ್ತಿ ನೀಡುವ ಕೆಲಸ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ, ಸಮಾಜ ಸೇವಕರಾದ ದತ್ತಿ ದಾನಿ ಶಶಿಕಾಂತ್ ರಾವ್ ದಾನ ದತ್ತಿ ಮೌಲ್ಯಗಳನ್ನು ಹೆಚ್ಚಿಸುತ್ತವೆ. ಅರ್ಜಿ ಹಾಕಿಸಿಕೊಂಡು ಪ್ರಶಸ್ತಿ ಕೊಡುವ ಕೆಲಸ ಆಗಬಾರದು, ಜನರೇ ಸೇವೆಯನ್ನು ಗುರುತಿಸುವಂತಾಗಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾಯಕಕ್ಕೆ ಸಹಾಯ ಸಹಕಾರ ಪ್ರೋತ್ಸಾಹ ಇರುತ್ತದೆ ಎಂದರು .
ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಕಾರ್ಯದರ್ಶಿ ಸಿ.ಹೇಮಾವತಿ, ಲೇಖಕ ಚಿನ್ನು ಪ್ರಕಾಶ್, ಅಧ್ಯಾಪಕಿ ಜಯಶ್ರೀ ರಾಜು, ಕವಿ ಡಾ.ಕೃಷ್ಣಹಾನ್ಬಾಳ್ , ಪ್ರೊ ವೀಣಾ ಎನ್ ವಿನೋದ್ ಇದ್ದರು.ಪುನೀತ್ ರಾಜ್ ದತ್ತಿ ಪ್ರಶಸ್ತಿಗೆ ಪ್ರಗತಿಪರ ಲೇಖಕಿ ವಿ.ನಿಶಾ ಗೋಪಿನಾಥ್ ಮತ್ತು ಉಪನ್ಯಾಸಕ ಡಾ.ಆರ್.ಸಿದ್ಧಲಿಂಗಸ್ವಾಮಿ ಅವರು ಭಾಜನರಾದರು.
ಮಾಧ್ಯಮ ಸೇವೆಗಾಗಿ ಎಂ.ಎಸ್.ಮಂಜುನಾಥ್, ಎಸ್.ರಾಧಾಕೃಷ್ಣ , ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಪಿ.ಪಾರ್ಶ್ವನಾಥ್, ಹಾಸನದ ವಿಚಾರ ವಿಸ್ತಾರ ಸುದ್ದಿ ವಾಹಿನಿ ಸಂಪಾದಕಿ ಶ್ರೀಮತಿ ಮಾಲಾ ಹಾಸನ., ಶೇಷಾದ್ರಿಪುರಂ ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ನವೀನ್ ಕುಮಾರ್ , ಮಹಿಳಾ ಹೋರಾಟಗಾರ್ತಿ ರೂಪಾಗೌಡ ಅವರುಗಳಿಗೆ ಪ್ರದಾನ ಮಾಡಲಾಯಿತು.



************

ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಉದ್ಘಾಟಿಸಿದರು, ಚಿತ್ರದಲ್ಲಿ: ಲೇಖಕಿ ಇಂದಿರಾ ಕೃಷ್ಣಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಮನುಬಳಿಗಾರ್, ಅನುವಾದಕ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಸಮಾಜ ಸೇವಕ ಶಶಿಕಾಂತ್ ರಾವ್, ಯುವಜನ ಸಮ್ಮೇಳನ ಅಧ್ಯಕ್ಷರಾದ ಡಾ.ಎಂ.ಆರ್.ಉಪೇಂದ್ರ ಕುಮಾರ್, ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ರಾಮಲಿಂಗೇಶ್ವರ್ , ಕವಿ ಕೃಷ್ಣ ಹಾನ್ ಬಾಳ್, ಕವಯಿತ್ರಿ ಜಯಶ್ರೀ ರಾಜು ಇದ್ದಾರೆ.

2.ಸನ್ಮಾನ ಫೋಟೋ, ಸಮ್ಮೇಳನ ಅಧ್ಯಕ್ಷರಾದ ಡಾ.ಎಂ.ಆರ್.ಉಪೇಂದ್ರ ಕುಮಾರ್, ಉಪನ್ಯಾಸಕ ಡಾ.ಆರ್.ಸಿದ್ಧಲಿಂಗೇಶ್ವರ್, ಸಾಮಾಜಿಕ ಕಾರ್ಯಕರ್ತೆ ವಿ.ನಿಶಾ ಗೋಪಿನಾಥ್ ಅವರುಗಳಿಗೆ ಪುನೀತ್ ರಾಜಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

3.ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾದ ಡಾ.ಎಂ.ಆರ್. ಉಪೇಂದ್ರ ಕುಮಾರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಪ್ರಶಸ್ತಿ ನೀಡಿ ಅಭಿನಂದಿಸಿದರು.ಅಕಾಡೆಮಿ ಅಧ್ಯಕ್ಷರಾದ ಎಲ್ ಎನ್ ಮುಕುಂದರಾಜ್, ಲೇಖಕಿ ಇಂದಿರಾ ಕೃಷ್ಣಪ್ಪ, ರಂಗಭೂಮಿ ಕಲಾವಿದ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ್, ಕಾರ್ಯದರ್ಶಿ ಸಿ.ಹೇಮಾವತಿ, ಯುವಕವಿ ಕೃಷ್ಣ ಹಾನ್ ಬಾಳ್, ಅಧ್ಯಾಪಕಿ ಜಯಶ್ರೀ ರಾಜು ಇದ್ದಾರೆ.
