ಹಾಸನ, ಏಪ್ರಿಲ್ 11: ನಗರದ ವೀರಭದ್ರೇಶ್ವರ ದೇವಸ್ಥಾನದ ಅರ್ಚಕರಾದ ದರ್ಶನ (31) ಅವರು (ಏಪ್ರಿಲ್ 11)ಇಂದು ನಿಧನರಾಗಿದ್ದು, ಧಾರ್ಮಿಕ ವಲಯದಲ್ಲಿ ಶೋಕಮಡುಗಟ್ಟಿದೆ.
ದೊಡ್ಡ ಗದ್ದವಳ್ಳಿಯ ಪುರೋಹಿತರಾದ ದೇವರಾಜಶಾಸ್ತ್ರಿ ಅವರ ಪುತ್ರರಾಗಿದ್ದ ದರ್ಶನ ಅವರು ಯುವ ವಯಸ್ಸಿನಲ್ಲೇ ಅಗಲಿರುವುದು ಕುಟುಂಬಸ್ಥರು ಹಾಗೂ ಭಕ್ತರಲ್ಲಿ ಆಳವಾದ ದುಃಖವನ್ನುಂಟುಮಾಡಿದೆ.
ದರ್ಶನ ಅವರ ನಿಧನಕ್ಕೆ ಹಾಸನ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಸಂತಾಪ ಸೂಚಿಸಿದೆ. ಮಹಾಸಭೆಯ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಅವರು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ, ಕುಟುಂಬದವರಿಗೆ ಧೈರ್ಯವನ್ನು ಕೋರಿ ಶೋಕ ಸಂದೇಶ ಹೊರಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಹಾಸನ ತಾಲ್ಲೂಕಿನ ದೊಡ್ಡ ಗದ್ದವಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
- – ಶಿವಕುಮಾರ್ ಕಟ್ಟಾಯ
