
ಉಪರಾಷ್ಟ್ರಪತಿ ಸ್ವಾಗತಿಸುವ ದಾರಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ
ದೆಹಲಿ: ಭಾರತ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಿಸಿದೆ. ದೆಹಲಿಯ ಕರ್ತವ್ಯಪಥದಲ್ಲಿ ಭಾರತ ಗಣತಂತ್ರ ದಿನಾಚರಣೆ ಮಾಡಿತ್ತು. ಸೇನೆಗಳ ಶಕ್ತಿ ಪ್ರದರ್ಶನ, ಪಥಸಂಚಲನ, ಸ್ತಬ್ಧ ಚಿತ್ರಗಳ ಪ್ರದರ್ಶನ, ಕಲಾ ತಂಡಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳುು ಮನಸೂರೆಗೊಂಡಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳನ್ನು ಪ್ರಧಾನಿ ಬರ ಮಾಡಿಕೊಳ್ಳುತ್ತಾರೆ. ಇದರಂತೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸ್ವಾಗತಿಸಲ ಬಂದ ಪ್ರಧಾನಿ ಮೋದಿ ಅಲ್ಲೆ ಬಿದ್ದಿದ್ದ ಕಸವನ್ನು ಗಮನಿಸಿದ್ದಾರೆ. ಬಳಿಕ ಈ ಕಸ ಹೆಕ್ಕಿದ ಮೋದಿ, ಭದ್ರತಾ ಪಡೆ ಕೈಗೆ ನೀಡಿದ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಗಣರಾಜ್ಯೋತ್ಸವ ದಿನಾಚರಣೆಗೆ ಮೋದಿ ಹಳದಿ ಹಾಗೂ ಕೆಂಪು ಬಣ್ಣದ ಟರ್ಬನ್ ಧರಿಸಿ ಆಗಮಿಸಿದ್ದರು. ಮೋದಿ ಆಗಮಿಸಿದ ಬಳಿಕ ಉಪರಾಷ್ಟ್ರಪತಿ ಜಗದೀಪ್ ದನ್ಕರ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಉಪರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಪ್ರಧಾನಿ ಮೋದಿ ಕರ್ತವ್ಯಪಥಕ್ಕೆ ಆಗಮಿಸಿದ್ದಾರೆ.
ಒಂದೆಡೆಯಿಂದ ಜಗದೀಪ್ ಧನ್ಕರ್ ಕಾರಿನ ಮೂಲಕ ಆಗಮಿಸುತ್ತಿದ್ದಂತೆ ಬರಮಾಡಿಕೊಳ್ಳಲು ಮೋದಿ ಕರ್ತ್ಯವ್ಯ ಪಥಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಸ ಬಿದ್ದಿರುವುದನ್ನು ನೋಡಿದ ಮೋದಿ ತಕ್ಷಣೇ ಸ್ವಚ್ಚಗೊಳಿಸಿದ್ದಾರೆ. ಬಿದ್ದಿರುವ ಕಸವನ್ನು ಹೆಕ್ಕಿ ಭದ್ರತಾ ಸಿಬ್ಬಂಧಿಯಲ್ಲಿ ಕೈಯಲ್ಲಿ ನೀಡಿದ್ದಾರೆ. ಬಳಿಕ ಮೋದಿ ಜಗದೀಪ್ ಧನ್ಕರ್ ಸ್ವಾಗಸಲು ತೆರಳಿದ್ದಾರೆ. ಕೆಲವೇ ಸೆಕೆಂಡ್ನಲ್ಲಿ ಜಗದೀಪ್ ಧನ್ಕರ್ ಆಗಮಿಸಿದ್ದಾರೆ. ಉಪರಾಷ್ಟ್ರಪತಿಗಳ ಸ್ವಾಗತಿಸಿದ ಮೋದಿ, ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದಾರೆ. ಇತ್ತ ಮೋದಿ ನೀಡಿದ ಕಸವನ್ನು ಭದ್ರತಾ ಸಿಬ್ಬಂದಿ ತನ್ನ ಜೇಬಿಗೆ ಹಾಕಿದ್ದಾರೆ.