“ಎಸ್. ವಿ.ಪರಮೇಶ್ವರ ಭಟ್ಟ”
~~~~~~~~~~~~~~~~~~
1. ಎಸ್. ವಿ.ಪರಮೇಶ್ವರ ಭಟ್ಟ ಅವರ ಹುಟ್ಟೂರು ಯಾವುದು?
1)ಸಾಗರ. 2)ತೀರ್ಥಹಳ್ಳಿ. 3)ಮಾಳೂರು
2. ಎಸ್. ವಿ.ಪರಮೇಶ್ವರ ಭಟ್ಟ ಅವರ ತಾಯಿಯ ಹೆಸರೇನು?
1)ಲಕ್ಕಮ್ಮ. 2)ಲಕ್ಷ್ಮಮ್ಮ. 3)ತಾಯಮ್ಮ
3. ಎಸ್. ವಿ.ಪರಮೇಶ್ವರ ಭಟ್ಟ ಅವರ ತಂದೆಯ ಹೆಸರೇನು?
1)ಶಿವರಾಮಯ್ಯ. 2)ಸದಾಶಿವರಾಯ. 3)ಸದಾನಂದ
4. ಎಸ್. ವಿ.ಪರಮೇಶ್ವರ ಭಟ್ಟ ಅವರ ಜನ್ಮ ದಿನಾಂಕ ಯಾವುದು?
1)18 ಫೆಬ್ರವರಿ 1914 2)18 ಜನವರಿ 1914 3)18 ಮಾರ್ಚ್ 1914
5. ಎಸ್.ವಿ.ಪರಮೇಶ್ವರ ಭಟ್ಟ ಅವರು ಪ್ರಾಥಮಿಕ ಶಿಕ್ಷಣವನ್ನು ಪಡೆದ ಸ್ಥಳ ಯಾವುದು?
1)ತೀರ್ಥಹಳ್ಳಿ. 2)ಶಿವಮೊಗ್ಗ. 3)ಭದ್ರಾವತಿ
6. ಎಸ್.ವಿ.ಪರಮೇಶ್ವರ ಭಟ್ಟ ಅವರು ಆರಂಭದಲ್ಲಿ ಬಳಸುತ್ತಿದ್ದ ಕಾವ್ಯನಾಮ ಯಾವುದು?
1)ಸಿರಿಗನ್ನಡದ ಶಿಷ್ಯ. 2)ಸಿರಿಗನ್ನಡಿಗ. 3)ಸಿರಿಗನ್ನಡಿಗರ ಡಿಂಗರಿಗ
7. ಇವುಗಳಲ್ಲಿ ಎಸ್.ವಿ.ಪರಮೇಶ್ವರ ಭಟ್ಟ ಅವರ ವಚನ ಸಂಕಲನ ಕೃತಿ ಯಾವುದು?
1)ತುಂಬೆ ಹೂ. 2)ಉಪ್ಪುಕಡಲು. 3)ಇಂದ್ರಚಾಪ
8. ಇವುಗಳಲ್ಲಿ ಎಸ್.ವಿ.ಪರಮೇಶ್ವರ ಭಟ್ಟ ಅವರ ಕವನ ಸಂಕಲನ ಯಾವುದು?
1)ಸಂಜೆ ಮಲ್ಲಿಗೆ. 2)ಪಾಮರ. 3)ಚಂದ್ರವೀಧಿ
9. ಎಸ್.ವಿ.ಪರಮೇಶ್ವರ ಭಟ್ಟ ಅವರ “ತಿಳಿಮುಗಿಲ ತೊಟ್ಟಿಲಲಿ, ಮಲಗಿದ್ದ ______ ಗಾಳಿ ಜೋಗುಳ…..” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಚಂದಿರನ. 2)ಸೂರ್ಯನ. 3)ಮಗುವಿನ
10. ಏಳುನೂರು ತ್ರಿಪದಿಗಳನ್ನು ಒಳಗೊಂಡ ಎಸ್.ವಿ.ಪರಮೇಶ್ವರ ಭಟ್ಟ ಅವರ ಕೃತಿ ಯಾವುದು?
1)ತಿಳಿಮುಗಿಲ ತೊಟ್ಟಿಲು. 2)ಸುರಗಿನ ಸುರಹೊನ್ನೆ. 3)ಉಂಬರ
11. ಎಸ್.ವಿ.ಪರಮೇಶ್ವರ ಭಟ್ಟ ಅವರ ಹೆಸರಿನಲ್ಲಿ ಎಸ್.ವಿ. ಎಂಬುದರ ವಿಸ್ತೃತ ರೂಪವೇನು?
1)ಶೃಂಗೇರಿ ವಿದ್ಯಾರಣ್ಯಪುರ. 2)ಶಿಕಾರಿಪುರ ವಿಶ್ವೇಶ್ವರಯ್ಯ. 3)ಶಾಮನೂರು ವಿಶ್ವನಾಥ
12. ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಡೆದ ಎಸ್.ವಿ.ಪರಮೇಶ್ವರ ಭಟ್ಟ ಅವರ ಕೃತಿ ಯಾವುದು?
1)ಕನ್ನಡ ಕವಿಕೌಮುದಿ. 2)ಕನ್ನಡ ಗೀತಗೋವಿಂದ. 3)ಕನ್ನಡ ಕಾಳಿದಾಸ ಮಹಾಸಂಪುಟ
13. ಎಸ್.ವಿ.ಪರಮೇಶ್ವರ ಭಟ್ಟ ಅವರ ವಿಮರ್ಶಾ ಕೃತಿ ಯಾವುದು?
1)ಮಾಸ್ತಿ ಕನ್ನಡದ ಆಸ್ತಿ. 2)ರಸ ಋಷಿ ಕುವೆಂಪು. 3)ವರಕವಿ ದ.ರಾ.ಬೇಂದ್ರೆ
14. ಎಸ್.ವಿ.ಪರಮೇಶ್ವರ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಯಾವುದು?
1)ಶಿವಮೊಗ್ಗ. 2)ಕೋಲಾರ. 3)ಚಿಕ್ಕಮಗಳೂರು
15. ಎಸ್.ವಿ.ಪರಮೇಶ್ವರ ಭಟ್ಟ ಅವರು ದೈವಾಧೀನರಾದ ದಿನಾಂಕ ಯಾವುದು?
1)27 ಅಕ್ಟೋಬರ್ 2000 2)27 ಅಕ್ಟೋಬರ್ 2001 3)27 ಅಕ್ಟೋಬರ್ 1999
~~~~~~~~~~~~~~~~~~~~~~~~
★ಉತ್ತರಗಳು:-
1)ಮಾಳೂರು 2)ಲಕ್ಷ್ಮಮ್ಮ 3)ಸದಾಶಿವರಾಯ 4)18 ಫೆಬ್ರವರಿ 1914 5)ತೀರ್ಥಹಳ್ಳಿ 6)ಕನ್ನಡಿಗರ ಡಿಂಗರಿಗ 7)ಉಪ್ಪು ಕಡಲು 8)ಸಂಜೆ ಮಲ್ಲಿಗೆ 9)ಚಂದಿರನ 10)ಸುರಗಿನ ಸುರಹೊನ್ನೆ 11)ಶೃಂಗೇರಿ ವಿದ್ಯಾರಣ್ಯಪುರ 12)ಕನ್ನಡ ಕಾಳಿದಾಸ ಮಹಾಸಂಪುಟ 13)ರಸ ಋಷಿ ಕುವೆಂಪು 14)ಚಿಕ್ಕಮಗಳೂರು 15)27 ಅಕ್ಟೋಬರ್ 2000
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
