“ಚನ್ನವೀರ ಕಣವಿ”
~~~~~~~~~~~~~~~
1. ಚನ್ನವೀರ ಕಣವಿ ಅವರ ಹುಟ್ಟೂರು ಯಾವುದು?
1)ಧಾರವಾಡ. 2)ಗದಗ. 3)ಹೊಂಬಳ
2. ಚನ್ನವೀರ ಕಣವಿ ಅವರ ತಂದೆಯ ಹೆಸರೇನು?
1)ಪರಸಪ್ಪ. 2)ನರಸಪ್ಪ. 3)ಸಕ್ಕರೆಪ್ಪ
3. ಚನ್ನವೀರ ಕಣವಿ ಅವರ ತಾಯಿಯ ಹೆಸರೇನು?
1)ಪಾರ್ವತವ್ವ. 2)ಕಾಮಾಕ್ಷವ್ವ. 3)ಸರೋಜವ್ವ
4. ಚನ್ನವೀರ ಕಣವಿ ಅವರ ಜನ್ಮದಿನಾಂಕ ಯಾವುದು?
1)26 ಜೂನ್ 1928 2)28 ಜೂನ್ 1928 3)30 ಜೂನ್ 1928
5. ಚನ್ನವೀರ ಕಣವಿ ಅವರು ಕರ್ನಾಟಕ ವಿ.ವಿ.ಯಿಂದ ಎಂ.ಎ.ಪದವಿ ಪಡೆದ ವರ್ಷ ಯಾವುದು?
1)1956 2)1948 3)1952
6. ಚನ್ನವೀರ ಕಣವಿ ಅವರ ಧರ್ಮಪತ್ನಿಯ ಹೆಸರೇನು?
1)ಶಾಂತಾದೇವಿ. 2)ರಮಾದೇವಿ. 3)ಶಾರದಾದೇವಿ
7. ರಾಜಕೀಯ ಭ್ರಷ್ಟಾಚಾರದ ಕಠೋರ ವಿಡಂಬನೆ ಬಿಂಬಿಸುವ ಚನ್ನವೀರ ಕಣವಿ ಅವರ ಕವಿತೆ ಯಾವುದು?
1)ಅಪರಾವತಾರ. 2)ಇಂದೇ ಸೀಮೋಲ್ಲಂಘನ. 3)ಕಾಲ ನಿಲ್ಲುವುದಿಲ್ಲ
8. ಚನ್ನವೀರ ಕಣವಿ ಅವರ ಮೊದಲ ಕವನ ಸಂಕಲನ ಯಾವುದು?
1)ಆಕಾಶಬುಟ್ಟಿ. 2)ಕಾವ್ಯಾಕ್ಷಿ. 3)ಭಾವಜೀವಿ
9. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಚನ್ನವೀರ ಕಣವಿ ಅವರ ಕೃತಿ ಯಾವುದು?
1)ಮಧುರಚೆನ್ನ. 2)ಜೀವಧ್ವನಿ. 3)ಮೆರವಣಿಗೆ
10. ಚನ್ನವೀರ ಕಣವಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ನಡೆದ ಸ್ಥಳ ಯಾವುದು?
1)ಹಾವೇರಿ. 2)ಧಾರವಾಡ. 3)ಹಾಸನ
11. ಚನ್ನವೀರ ಕಣವಿ ಅವರಿಗೆ ಲಭಿಸಿರುವ ಪ್ರಶಸ್ತಿ ಯಾವುದು?
1)ಎರಡೂ ಸರಿ. 2)ನಾಡೋಜ ಪ್ರಶಸ್ತಿ. 3)ಪಂಪ ಪ್ರಶಸ್ತಿ
12. ಚನ್ನವೀರ ಕಣವಿ ಅವರಿಗೆ ದೊರಕಿರುವ ಬಿರುದು ಯಾವುದು?
1)ಸಮನ್ವಯ ಕವಿ. 2)ನವೋದಯ ಕವಿ. 3)ಬಂಡಾಯ ಕವಿ
13. ಧಾರವಾಡದ ಕಲ್ಯಾಣ ನಗದಲ್ಲಿದ್ದ ಚನ್ನವೀರ ಕಣವಿ ಅವರ ನಿವಾಸದ ಹೆಸರೇನು?
1)ಹೊಂಬೆಳಕು. 2)ಚೆಂಬೆಳಕು. 3)ಕವಿ ಬೆಳಕು
14. ಚನ್ನವೀರ ಕಣವಿ ಅವರ “ಹೆಸರಾಯಿತು ಕರ್ನಾಟಕ ________ ಕನ್ನಡ” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಚಿರಾಯುವಾಗಲಿ. 2)ಹಸಿರಾಗಲಿ. 3)ಉಸಿರಾಗಲಿ
15. ಚನ್ನವೀರ ಕಣವಿ ಅವರು ವಿಧಿವಶರಾದ ದಿನಾಂಕ ಯಾವುದು?
1)16 ಜನವರಿ 2022 2)16 ಮಾರ್ಚ್ 2022 3)16 ಫೆಬ್ರವರಿ 2022
~~~~~~~~~~~~~~~~~~~~~~~~~~
★ಉತ್ತರಗಳು:-
1)ಹೊಂಬಳ 2)ಸಕ್ಕರೆಪ್ಪ 3)ಪಾರ್ವತವ್ವ 4)28 ಜೂನ್ 1928 5)1952 6)ಶಾಂತಾದೇವಿ 7)ಅಪರಾವತಾರ 8)ಕಾವ್ಯಾಕ್ಷಿ 9)ಜೀವಧ್ವನಿ 10)ಹಾಸನ 11)ಎರಡೂ ಸರಿ 12)ಸಮನ್ವಯ ಕವಿ 13)ಚೆಂಬೆಳಕು 14)ಉಸಿರಾಗಲಿ 15) 16 ಫೆಬ್ರವರಿ 2022
*************
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
