“ಸಾರಾ ಅಬೂಬಕ್ಕರ್ “
~~~~~~~~~~~~~~~~~~
1. ಸಾರಾ ಅಬೂಬಕ್ಕರ್ ಅವರ ಜನ್ಮದಿನಾಂಕ ಯಾವುದು?
1) 30 ಜೂನ್ 1934 2)30 ಜೂನ್ 1938 3)30 ಜೂನ್ 1936
2. ಸಾರಾ ಅಬೂಬಕ್ಕರ್ ಅವರ ತಂದೆಯ ಹೆಸರೇನು?
1)ಪಿ.ಅಹಮದ್. 2)ಮೊಯಿನುದ್ದೀನ್. 3)ಅಲಿಖಾನ್
3. ಸಾರಾ ಅಬೂಬಕ್ಕರ್ ಅವರ ತಾಯಿಯ ಹೆಸರೇನು?
1)ಚೈನಾಬಿ. 2)ಮಮತಾಬಿ. 3)ಚಾಂದ್ ಬಿ
4. ಸಾರಾ ಅಬೂಬಕ್ಕರ್ ಅವರ ಹುಟ್ಟೂರು ಯಾವುದು?
1)ಪುತ್ತೂರು. 2)ಮಂಗಳೂರು. 3)ಕಾಸರಗೋಡು
5. ಸಾರಾ ಅಬೂಬಕ್ಕರ್ ಅವರ ಮೊದಲ ಕಾದಂಬರಿ ಯಾವುದು?
1)ಚಂದ್ರಗಿರಿಯ ತೀರದಲ್ಲಿ. 2)ಕದನ ವಿರಾಮ. 3)ಸುಳಿಯಲ್ಲಿ ಸಿಕ್ಕವರು
6. ಇವುಗಳಲ್ಲಿ ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನ ಯಾವುದು?
1)ಸಹನಾ. 2)ವಜ್ರಗಳು. 3)ಚಪ್ಪಲಿಗಳು
7. ಇವುಗಳಲ್ಲಿ ಸಾರಾ ಅಬೂಬಕ್ಕರ್ ಅವರ ಬಾನುಲಿ ನಾಟಕ ಯಾವುದು?
1)ತಳ ಒಡೆದ ದೋಣಿ. 2)ಖೆಡ್ಡಾ. 3)ಕಮರಿದ ಕನಸು
8. ಸಾರಾ ಅಬೂಬಕ್ಕರ್ ಅವರ ಪ್ರವಾಸ ಕಥನ ಯಾವುದು?
1)ತೇಲಾಡುವ ಮೋಡಗಳು. 2)ಐಷಾರಾಮದಲ್ಲಿ. 3)ನಾನಿನ್ನು ನಿದ್ರಿಸುವೆ
9. ಸಾರಾ ಅಬೂಬಕ್ಕರ್ ಅವರಿಗೆ ವರ್ಧಮಾನ ಪ್ರಶಸ್ತಿ ತಂದುಕೊಟ್ಟ ಕಾದಂಬರಿ ಯಾವುದು?
1)ಸಹನಾ. 2)ಪಂಜರ. 3)ಪ್ರವಾಹ -ಸುಳಿ
10. ಪಿ.ಲಂಕೇಶ್ ಅವರ ಸಲಹೆಯಂತೆ ಸಾರಾ ಅಬೂಬಕ್ಕರ್ ಅವರು ಬರೆದ ಆತ್ಮ ವೃತ್ತಾಂತ ಯಾವುದು?
1)ಮುಸ್ಲಿಂ ಹುಡುಗಿ ಬರೆಯಲು ಕಲಿತದ್ದು
2)ಮುಸ್ಲಿಂ ಹುಡುಗಿ ಹಾಡಲು ಕಲಿತದ್ದು
3)ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು
11. ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ ಚಿತ್ರ ಯಾವುದು?
1)ಸಾರಾ ಪ್ಲಾಟಿನಮ್. 2)ಸಾರಾ ವಜ್ರ. 3)ಸಾರಾ ಸಾಹಿತ್ಯ
12. ಸಾರಾ ಅಬೂಬಕ್ಕರ್ ಅವರ , ಹತ್ತನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿನ ‘ಯುದ್ಧ’ ಗದ್ಯದ ಆಕರ ಕೃತಿ ಯಾವುದು?
1)ಸಹನಾ. 2)ಕದನ ವಿರಾಮ. 3)ಚಪ್ಪಲಿಗಳು
13. ಸಾರಾ ಅಬೂಬಕ್ಕರ್ ಅವರ ಪತಿಯ ವೃತ್ತಿ ಯಾವುದಾಗಿತ್ತು?
1)ಡಾಕ್ಟರ್. 2)ಇಂಜಿನಿಯರ್. 3)ಲಾಯರ್
14. ಸಾರಾ ಅಬೂಬಕ್ಕರ್ ಅವರು ಮಲಯಾಳಂ ಭಾಷೆಯಿಂದ ಅನುವಾದಿಸಿದ ಕೃತಿ ಯಾವುದು?
1)ಇನ್ನೂ ನಿದ್ರಿಸುವೆ. 3)ಪಯಣ ಮತ್ತು ಇತರ ಕಥೆಗಳು. 3)ಅರ್ಧ ರಾತ್ರಿಯ ಕನಸುಗಳು
15. ಸಾರಾ ಅಬೂಬಕ್ಕರ್ ಅವರಿಗೆ ‘ದಾನ ಚಿಂತಾಮಣಿ’ ಪ್ರಶಸ್ತಿ ದೊರಕಿದ ವರ್ಷ ಯಾವುದು?
1)2003 2)1999 3)2001
~~~~~~~~~~~~~~~~~~~~~~~~~
★ಉತ್ತರಗಳು:-
1)30 ಜೂನ್ 1936 2)ಪಿ.ಅಹಮದ್ 3)ಚೈನಾಬಿ 4)ಕಾಸರಗೋಡು 5)ಚಂದ್ರಗಿರಿಯ ತೀರದಲ್ಲಿ 6)ಚಪ್ಪಲಿಗಳು 7)ಕಮರಿದ ಕನಸು 8)ಐಷಾರಾಮದಲ್ಲಿ 9)ಸಹನಾ 10)ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು 11)ಸಾರಾ ವಜ್ರ 12)ಚಪ್ಪಲಿಗಳು 13)ಇಂಜಿನಿಯರ್ 14)ಇನ್ನೂ ನಿದ್ರಿಸುವೆ 15)2001
******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]
[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]