“ಪಂಜೆ ಮಂಗೇಶರಾಯರು”
~~~~~~~~~~~~~~~~~~
1. ಪಂಜೆ ಮಂಗೇಶರಾಯರು ಜನಿಸಿದ ದಿನಾಂಕ ಯಾವುದು?
1)12 ಫೆಬ್ರವರಿ 1874 2)22 ಫೆಬ್ರವರಿ 1874 3)28 ಫೆಬ್ರವರಿ 1874
2. ಪಂಜೆ ಮಂಗೇಶರಾಯರು ಜನಿಸಿದ ಊರು ಯಾವುದು?
1)ಸುಳ್ಯ. 2)ಪುತ್ತೂರು. 3)ಬಂಟ್ವಾಳ
3. ಪಂಜೆ ಮಂಗೇಶರಾಯರ ಕಾವ್ಯನಾಮ ಯಾವುದು?
1)ಕವಿಶಿಷ್ಯ. 2)ಆನಂದ ಕಂದ. 3)ಕಾವ್ಯಾನಂದ
4. ಪಂಜೆ ಮಂಗೇಶರಾಯರ ತಂದೆಯ ಹೆಸರೇನು?
1)ರಾಮಪ್ಪಯ್ಯ 2)ಸೋಮಪ್ಪಯ್ಯ. 3)ದಾಸಪ್ಪಯ್ಯ
5. ಪಂಜೆ ಮಂಗೇಶರಾಯರ ತಾಯಿಯ ಹೆಸರೇನು?
1)ಶಾಂತಮಲ್ಲಮ್ಮ. 2)ದುರ್ಗಾದೇವಿ. 3)ಶಾಂತಾದುರ್ಗ
6. ಪಂಜೆ ಮಂಗೇಶರಾಯರ ಧರ್ಮಪತ್ನಿ ಗಿರಿಜಾಬಾಯಿಯವರು ಯಾವ ಖ್ಯಾತನಾಮರ ತಂಗಿ?
1)ಭೀಮಸೇನ ಜೋಶಿ. 2)ಅ.ನ.ಕೃಷ್ಣರಾವ್. 3)ಬೆನಗಲ್ ರಾಮರಾವ್
7. ‘ಕನ್ನಡದ ಮೊದಲ ಸಣ್ಣಕತೆ’ ಎಂದು ಪರಿಗಣಿತವಾದ ಪಂಜೆ ಮಂಗೇಶರಾಯರ ಕೃತಿ ಯಾವುದು?
1)ಅಣ್ಣನ ವಿಲಾಪ. 2)ನನ್ನ ಚಿಕ್ಕ ತಾಯಿ. 3)ಪಂಚ ಕಜ್ಜಾಯ
8. ಇದು ಪಂಜೆ ಮಂಗೇಶರಾಯರ ಕಾದಂಬರಿ ಯಾವುದು?
1)ಕೋಟಿ ಚೆನ್ನಯ್ಯ. 2)ನಾಗರ ಹಾವು. 3)ತೆಂಕಣ ಗಾಳಿ
9. ಪಂಜೆ ಮಂಗೇಶರಾಯರ ನಿರ್ವಹಿಸುತ್ತದ್ದ ವೃತ್ತಿ ಯಾವುದು?
1)ನ್ಯಾಯಾಧೀಶರು. 2)ಅಭಿಯಂತರರು. 3)ಮುಖ್ಯೋಪಾಧ್ಯಾಯರು
10. ‘ಸುವಾಸಿನಿ’ ಪತ್ರಿಕೆಯಲ್ಲಿ ತಮ್ಮ ಬರಹಗಳಿಗೆ ಪಂಜೆ ಮಂಗೇಶರಾಯರು ಬಳಸುತ್ತಿದ್ದ ಗುಪ್ತನಾಮ ಯಾವುದು?
1)ಹರಟೆ ಮಲ್ಲ. 2)ಪಂಜಾಮೃತ. 3)ಮಂಗೇಶ
11. ಪಂಜೆ ಮಂಗೇಶರಾಯರ “ಎಲ್ಲಿ ಭೂರಮೆ ______ ಬಯಸಿ ಬಿಮ್ಮನೆ ಬಂದಳೊ…” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಕೊಡವಸನ್ನಿಧಿ. 2)ಭೂತಸನ್ನಿಧಿ. 3)ದೇವಸನ್ನಿಧಿ
12. ಪಂಜೆ ಮಂಗೇಶರಾಯರ “ನಾಗರ ಹಾವೇ… ಹಾವೊಳು ಹೂವೇ…” ಕವನವನ್ನು ಒಳಗೊಂಡ ಚಲನಚಿತ್ರ ಯಾವುದು?
1)ಗರುಡ ರೇಖೆ. 2)ಪೂಜಾಫಲ. 3)ಶಿವನಾಗ
13. ಇವುಗಳಲ್ಲಿ ಪಂಜೆ ಮಂಗೇಶರಾಯರ ಜನಪ್ರಿಯ ಕತೆ ಯಾವುದು?
1)ಚಂದ್ರೋದಯ. 2)ನಾಗಣ್ಣನ ಕನ್ನಡಕಗಳು. 3)ಗುಡು ಗುಡು ಗುಮ್ಮಟ ದೇವರು
14. ಪಂಜೆ ಮಂಗೇಶರಾಯರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ನಗರ ಯಾವುದು?
1)ರಾಯಚೂರು. 2)ಬಳ್ಳಾರಿ. 3)ಮಂಗಳೂರು
15. ಪಂಜೆ ಮಂಗೇಶರಾಯರು ದೈವಾಧೀನರಾದ ದಿನಾಂಕ ಯಾವುದು?
1)24 ಅಕ್ಟೋಬರ್ 1939 2)24 ಅಕ್ಟೋಬರ್ 1937 3)24 ಅಕ್ಟೋಬರ್ 1935
~~~~~~~~~~~~~~~~~~~~~~~~~~
★ಉತ್ತರಗಳು:-
1)22 ಫೆಬ್ರವರಿ 1874
2)ಬಂಟ್ವಾಳ
3)ಕವಿಶಿಷ್ಯ
4)ರಾಮಪ್ಪಯ್ಯ
5)ಶಾಂತಾದುರ್ಗ
6)ಬೆನಗಲ್ ರಾಮರಾವ್
7)ನನ್ನ ಚಿಕ್ಕ ತಾಯಿ
8)ಕೋಟಿ ಚೆನ್ನಯ್ಯ
9)ಮುಖ್ಯೋಪಾಧ್ಯಾಯರು
10)ಹರಟೆ ಮಲ್ಲ
11)ದೇವಸನ್ನಿಧಿ
12)ಪೂಜಾಫಲ
13)ಗುಡು ಗುಡು ಗುಮ್ಮಟ ದೇವರು
14)ರಾಯಚೂರು
15)24 ಅಕ್ಟೋಬರ್ 1924
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
