ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಪ್ರಖ್ಯಾತ ಕನ್ನಡ ಕವಿ ಹಾಗೂ ಲೇಖಕರಾದ ಡಿ.ಎಸ್. ಕರ್ಕಿಯವರು ತಮ್ಮ ಶಿಶು ಸಾಹಿತ್ಯ, ಛಂದಸ್ಸು ಕುರಿತ ಸಂಶೋಧನೆ ಹಾಗೂ ಜನಪ್ರಿಯ ಗೀತೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಅಮಿತ ಸಾಧನೆ ಮಾಡಿದ್ದಾರೆ. ಇವರ ‘ಬಣ್ಣದ ಚೆಂಡು’, ‘ಗಿಲ್ ಗಿಲ್ ಗಿಲಕಿ’, ‘ಗೀತ ಗೌರವ’ ಹಾಗೂ ‘ತನನ ತೋಂ’ ಮುಂತಾದ ಕೃತಿಗಳು ವಿಶಿಷ್ಟ ಸ್ಥಾನ ಪಡೆದಿವೆ.