“ಚಂದ್ರಶೇಖರ ಪಾಟೀಲ”
~~~~~~~~~~~~~~~~~~
1. ಚಂದ್ರಶೇಖರ ಪಾಟೀಲ ಅವರ ಜನ್ಮಸ್ಥಳ ಯಾವುದು?
1)ಸವಣೂರು. 2)ಹತ್ತಿಮತ್ತೂರು. 3)ಹಾವೇರಿ
2. ಚಂದ್ರಶೇಖರ ಪಾಟೀಲ ಅವರ ಜನ್ಮದಿನಾಂಕ ಯಾವುದು?
1)18 ಜುಲೈ 1939 2)18 ಮೇ 1939 3)18 ಜೂನ್ 1939
3. ಚಂದ್ರಶೇಖರ ಪಾಟೀಲ ಅವರ ತಾಯಿಯ ಹೆಸರೇನು?
1)ಮುರಿಗೆವ್ವ. 2)ನೀಲವ್ವ. 3)ತಾಯವ್ವ
4. ಚಂದ್ರಶೇಖರ ಪಾಟೀಲ ಅವರ ತಂದೆಯ ಹೆಸರೇನು?
1)ಬಸವರಾಜ ಹಿರೇಗೌಡರ್. 2)ದೇವರಾಜ ಹಿರೇಗೌಡರ್. 3)ಲಿಂಗರಾಜ ಹಿರೇಗೌಡರ್
5. ಚಂದ್ರಶೇಖರ ಪಾಟೀಲ ಅವರು ಸಮಾನ ಮನಸ್ಕರೊಂದಿಗೆ ಪ್ರಕಟಿಸುತ್ತಿದ್ದ ಪತ್ರಿಕೆ ಯಾವುದು?
1)ಸಂಕ್ರಾಂತಿ. 2)ಸಾಹಿತ್ಯ ಪರ್ವ. 3)ಸಂಕ್ರಮಣ
6. ಚಂದ್ರಶೇಖರ ಪಾಟೀಲ ಅವರ ಮೊದಲ ಕವನ ಸಂಕಲನ ಯಾವುದು?
1)ಗಾಂಧಿ ಸ್ಮರಣೆ. 2)ಬಾನುಲಿ. 3)ಮಧ್ಯಬಿಂದು
7. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಚಂದ್ರಶೇಖರ ಪಾಟೀಲ ಅವರ ಕೃತಿ ಯಾವುದು?
1)ಅರ್ಧ ಸತ್ಯದ ಹುಡುಗಿ. 2)ಶಾಲ್ಮಲಾ ನನ್ನ ಶಾಲ್ಮಲಾ. 3)ಹೂವು ಹೆಣ್ಣು ತಾರೆ
8. ಇವುಗಳಲ್ಲಿ ಚಂದ್ರಶೇಖರ ಪಾಟೀಲ ಅವರ ನಾಟಕ ಕೃತಿ ಯಾವುದು?
1)ಗುಂಡಮ್ಮನ ಗಜಲ್. 2)ಗಾಂಧಿ ಸ್ಮರಣೆ. 3)ಟಿಂಗರ ಬುಡ್ಡಣ್ಣ
9. ಚಂದ್ರಶೇಖರ ಪಾಟೀಲ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿ ಯಾವುದು??
1)2010-2014 2)2004-2008 3)1998-2002
10. ಪ್ರಕಾಶಕರನ್ನು ಉತ್ತೆಜಿಸಲು ಚಂದ್ರಶೇಖರ ಪಾಟೀಲ ಅವರು ನಡೆಸುತ್ತಿದ್ದ ಕಾರ್ಯಕ್ರಮ ಯಾವುದು?
1)ಪುಸ್ತಕ ಸಂತೆ. 2)ಪ್ರಕಾಶಕರ ಮೇಳ. 3)ಲೇಖಕ ಪ್ರಕಾಶಕರ ಸಮ್ಮೇಳನ
11. ಚಂದ್ರಶೇಖರ ಪಾಟೀಲ ಅವರ ಕಾವ್ಯನಾಮ ಯಾವುದು?
1)ಚಂಪಾ. 2)ಪಾಪು. 3)ಪಾಟೀಲ
12. ಚಂದ್ರಶೇಖರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಹಾವೇರಿ. 2)ಧಾರವಾಡ. 3)ಮೈಸೂರು
13. ಚಂದ್ರಶೇಖರ ಪಾಟೀಲ ಅವರ “ಕನ್ನಡ ಕನ್ನಡ ಬರ್ರೀ ನಮ್ ______” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಜೊತೆ 2)ಸಂಗಡ. 3)ಕೂಡಾ
14. ಸಿ. ಅಶ್ವತ್ಥ್ ಅವರ ಗಾಯನದಲ್ಲಿ ಜನಪ್ರಿಯವಾದ ಚಂದ್ರಶೇಖರ ಪಾಟೀಲ ಅವರ ಕವಿತೆ ಯಾವುದು?
1)ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ….
2)ಅಮೃತ ವಾಹಿನಿಯೊಂದು ಹರಿಯುತಿದೆ….
3)ಗುಪ್ತಗಾಮಿನಿ ನನ್ನ ಶಾಲ್ಮಲಾ…..
15. ಚಂದ್ರಶೇಖರ ಪಾಟೀಲ ಅವರು ಇಹಲೋಕದ ಯಾತ್ರೆ ಮುಗಿಸಿದ ದಿನಾಂಕ ಯಾವುದು?
1)15 ಜನವರಿ 2022 2)10 ಜನವರಿ 2022 3)5 ಜನವರಿ 2022
~~~~~~~~~~~~~~~~~~~~~~~~~~
★ಉತ್ತರಗಳು:-
1)ಹತ್ತಿಮತ್ತೂರು 2)18 ಜೂನ್ 1939 3)ಮುರಿಗೆವ್ವ 4)ಬಸವರಾಜ ಹಿರೇಗೌಡರ್ 5)ಸಂಕ್ರಮಣ 6)ಬಾನುಲಿ 7)ಅರ್ಧ ಸತ್ಯದ ಹುಡುಗಿ 8)ಟಿಂಗರ ಬುಡ್ಡಣ್ಣ 9)2004-2008 10)ಪುಸ್ತಕ ಸಂತೆ 11)ಚಂಪಾ 12)ಮೈಸೂರು 13)ಸಂಗಡ 14)ಗುಪ್ತಗಾಮಿನಿ ನನ್ನ ಶಾಲ್ಮಲಾ 15) 10 ಜನವರಿ 2022
*****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
