1.ಶ್ರೀಕೃಷ್ಣ ಆಲನಹಳ್ಳಿ ಅವರು ಜನಿಸಿದ ದಿನಾಂಕ
1)ಏಪ್ರಿಲ್-3, 1947 2)ಏಪ್ರಿಲ್-1, 1947 3)ಏಪ್ರಿಲ್-5, 1947
2.ಶ್ರೀಕೃಷ್ಣ ಆಲನಹಳ್ಳಿ ಅವರ ಹುಟ್ಟೂರು ಮೈಸೂರು ಜಿಲ್ಲೆಯ ಈ ತಾಲ್ಲೂಕಿಗೆ ಸೇರಿದೆ.
1)ಹೆಚ್. ಡಿ.ಕೋಟೆ. 2)ಗುಂಡ್ಲುಪೇಟೆ. 3)ಹೆಗ್ಗಡದೇವನ ಕೋಟೆ
3.ವಿದ್ಯಾರ್ಥಿ ದಿಸೆಯಲ್ಲಿಯೇ ಶ್ರೀಕೃಷ್ಣ ಆಲನಹಳ್ಳಿ ಅವರು ಆರಂಭಿಸಿದ ಸಾಹಿತ್ಯ ಪತ್ರಿಕೆ
1)ಪರಿವೀಕ್ಷಕ. 2)ಸಮೀಕ್ಷಕ. 3)ವೀಕ್ಷಕ
4.ಪಿ.ಲಂಕೇಶ್ ಅವರ ‘ಪತ್ರಿಕೆಗೆ ಬರೆಯಿರಿ’ ಎಂಬ ಒತ್ತಾಯವನ್ನು ಆಧರಿಸಿ ಶ್ರೀಕೃಷ್ಣ ಆಲನಹಳ್ಳಿ ಅವರು ಬರೆದ ಕವನ
1)ನನ್ನ ಸುತ್ತಾ. 2)ಸುತ್ತ ಮುತ್ತ. 3) ಅತ್ತ ಇತ್ತ
5.ಶ್ರೀಕೃಷ್ಣ ಆಲನಹಳ್ಳಿ ಅವರು ಅಧ್ಯಾಪಕ ವೃತ್ತಿಯನ್ನು ನಿರ್ವಹಿಸಿದ ವಿಶ್ವ ವಿದ್ಯಾಲಯ
1)ಬೆಂಗಳೂರು ವಿ.ವಿ 2)ಮೈಸೂರು ವಿ.ವಿ. 3)ಧಾರವಾಡ ವಿ.ವಿ.
6.ಶ್ರೀಕೃಷ್ಣ ಆಲನಹಳ್ಳಿ ಅವರ ‘ಮಣ್ಣಿನ ಹಾಡು’ ಕೃತಿಗೆ ಮುನ್ನುಡಿ ಬರೆದ ಕವಿ
1)ಕುವೆಂಪು. 2)ಶಿವರಾಮ ಕಾರಂತ. 3)ಎಂ.ಗೋಪಾಲಕೃಷ್ಣ ಅಡಿಗ
7.ಶ್ರೀಕೃಷ್ಣ ಆಲನಹಳ್ಳಿ ಅವರ ‘ಕಾಡು’ ಕಾದಂಬರಿ ಆಧಾರಿತ ಚಲನಚಿತ್ರದ ನಿರ್ದೇಶಕರು
1)ಗಿರೀಶ್ ಕಾರ್ನಾಡ್. 2)ಗಿರೀಶ್ ಕಾಸರವಳ್ಳಿ. 3)ಸುರೇಶ್ ಹೆಬ್ಳೀಕರ್
8.ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತ ‘ಪರಸಂಗದ ಗೆಂಡೆತಿಮ್ಮ’ ಸಿನಿಮಾ ನಿರ್ದೇಶಕಕರು
1)ಡಿ.ರಾಜೇಂದ್ರ ಬಾಬು. 2)ಮಾರುತಿ ಶಿವರಾಮ್. 3)ಎಸ್. ವಿ.ರಾಜೇಂದ್ರ ಸಿಂಗ್ ಬಾಬು
9.ಶ್ರೀಕೃಷ್ಣ ಆಲನಹಳ್ಳಿ ಅವರು ಮರಣಿಸಿದ ನಂತರ ಚಲನಚಿತ್ರವಾದ ಕಾದಂಬರಿ
1)ಗೀಜಗನ ಗೂಡು. 2)ಫೀನಿಕ್ಸ್. 3)ಭುಜಂಗಯ್ಯನ ದಶಾವತಾರಗಳು
10.ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತ ಚಿತ್ರ ‘ಕಾಡು’ ವಿನಲ್ಲಿ ನಟಿಸಿದ ಹಿಂದಿಯ ಖ್ಯಾತ ನಟ
1)ಅಮರೀಶ್ ಪುರಿ. 2)ಪೃಥ್ವಿರಾಜ್ ಕಪೂರ್. 3)ರಾಜೇಶ್ ಖನ್ನಾ
11.ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಪಡೆದ ಶ್ರೀಕೃಷ್ಣ ಆಲನಹಳ್ಳಿ ಅವರ ಕೃತಿ
1) ಮಣ್ಣಿನ ಹಾಡು. 2)ಕಾಡು ಗಿಡದ ಹಾಡು ಪಾಡು. 3)ತಪ್ತ
12.ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತ ಭುಜಂಗಯ್ಯನ ದಶಾವತಾರಗಳು ಚಿತ್ರದ ನಾಯಕ ನಟ
1)ಲೋಕನಾಥ್. 2)ಲೋಕೇಶ್. 3)ಎಂ.ವಿ.ವಾಸುದೇವರಾವ್
13.ಶ್ರೀಕೃಷ್ಣ ಆಲನಹಳ್ಳಿ ಅವರಿಗೆ ಸಹೃದಯರು ಅರ್ಪಿಸಿದ ಅಭಿನಂದನಾ ಗ್ರಂಥ
1)ಮಣ್ಣಿನ ಹಾಡಿನ ಕೃಷ್ಣ. 2)ಆಲನಹಳ್ಳಿ ಕೃಷ್ಣ. 3)ಕಾಡಿನ ಹುಡುಗ ಕೃಷ್ಣ
14.ಶ್ರೀಕೃಷ್ಣ ಆಲನಹಳ್ಳಿ ಅವರ ಕೊನೆಯ ಕೃತಿಗಳಲ್ಲೊಂದು
1)ತಿಕ ಸುಟ್ಟ ದೇವರು. 2)ದೇವರ ಮುಖ. 3)ಅಂತಃಕರಣ
15.ಶ್ರೀಕೃಷ್ಣ ಆಲನಹಳ್ಳಿ ಅವರು ದೈವಾಧೀನರಾದ ದಿನಾಂಕ
1)ಡಿಸೆಂಬರ್-4, 1989 2)ಜನವರಿ-4, 1989 3)ಫೆಬ್ರವರಿ-4, 1989
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಏಪ್ರಿಲ್-3, 1947 2)ಹೆಗ್ಗಡದೇವನ ಕೋಟೆ 3)ಸಮೀಕ್ಷಕ 4)ನನ್ನ ಸುತ್ತಾ 5)ಮೈಸೂರು ವಿ.ವಿ. 6)ಎಂ.ಗೋಪಾಲಕೃಷ್ಣ ಅಡಿಗ 7)ಗಿರೀಶ್ ಕಾರ್ನಾಡ್ 8)ಮಾರುತಿ ಶಿವರಾಮ್ 9)ಭುಜಂಗಯ್ಯನ ದಶಾವತಾರಗಳು 10)ಅಮರೀಶ್ ಪುರಿ 11)ಮಣ್ಣಿನ ಹಾಡು 12)ಲೋಕೇಶ್ 13)ಕಾಡಿನ ಹುಡುಗ ಕೃಷ್ಣ 14)ತಿಕ ಸುಟ್ಟ ದೇವರು 15) ಜನವರಿ-4, 1989
*********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
