ಹಾಸನ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅರಸೀಕೆರೆ ತಾಲ್ಲೂಕಿನ ಸಿಡಿಪಿಒ ಶಂಕರಮೂರ್ತಿ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನೆಡೆಸಿ ಮನವಿ ಸಲ್ಲಿಸಿದರು.
ಇದೆ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, ಅರಸೀಕೆರೆಯಲ್ಲಿ ಸಿಡಿಪಿಓ ಆಗಿ ಕರ್ತವ್ಯ ನಿರ್ವಹಿಸು ತ್ತಿರುವ ಶಂಕರಮೂರ್ತಿ ಅಂಗನ ವಾಡಿ ಮಹಿಳಾ ನೌಕರರ ಪೀಡಕ ನಾಗಿ ವರ್ತನೆ ಮಾಡುತ್ತಿದ್ದಾರೆ. ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಬರುವ ಪ್ರತಿ ಹಣದಲ್ಲಿಯೂ ಪಾಲು ಕೊಡಲೇಬೇಕು .ಬಾಡಿಗೆ ಹಣ ಹೊಸ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಕೊಡುವ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು .
ಅಂಗನವಾಡಿ ಕೇಂದ್ರಗಳಿಗೆ ವಿತರಣೆಯಾಗುವ ಮೊಟ್ಟೆ, ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಣೆ ಮಾಡದೆ ಅಂಗನವಾಡಿ ಕಾರ್ಯಕರ್ತೆಯರಿಂದ ಸಹಿ ಪಡೆದು ಹಣ ಕಬಳಿಸುತ್ತಿದ್ದಾರೆ ಮತ್ತು ಕಸಬಾದಲ್ಲಿ ಅಸ್ತಿತ್ವದಲ್ಲಿ ಇರದ ಏಳು ಅಂಗನವಾಡಿ ಕೇಂದ್ರಗ ಳಿಗೆ ನಿರಂತರ ಬಾಡಿಗೆ ಹಣ ಬರುವುದನ್ನು ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಲೈಂಗಿಕ ಸ್ವರೂಪದ ಕಿರುಕುಳ :
ವಿಧವೆಯಾದ ವಯಸ್ಸಿನಲ್ಲಿರುವ ಸುಂದರವಾದ ಹೆಣ್ಣು ಮಕ್ಕಳ ಬಳಿ ನೀನು ಇಷ್ಟ ಸುಂದರವಾಗಿದ್ದೀಯಾ, ಗಂಡ ಇಲ್ಲವಂತೆ, ಮತ್ತೊಂದು ಮದುವೆ ಮಾಡಿಕೊಳ್ಳುವ ಯೋಚನೆ ಮಾಡು ಎಂದು ಒತ್ತಾಯ ಮಾಡಲಾಗುತ್ತಿದೆ. ಸುಂದರವಾದ ವಯಸ್ಸಿನಲ್ಲಿರುವ ಮಹಿಳೆಯರಿಗೆ ರಾತ್ರಿ 10 ಗಂಟೆಗೆ ಗುಡ್ ನೈಟ್ ಅಂತಾ ಮಸೇಜ್ ಹಾಕುವುದು, ನಾನು ನಿಮ್ಮ ಮನೆಗೆ ಬರುವೆ ಮುದ್ದೆ ಊಟಾ ಹಾಕ್ತೀಯಾ ಅಂತಾ ಕೇಳುವುದು. ನೀನು ಇಷ್ಟು ಚೆನ್ನಾಗಿದ್ದೀಯಾ ಅಂತಾ ಹೇಳುವುದು, ನೀನು ಇವತ್ತು ಈ ಡ್ರಸ್ ನಲ್ಲಿ ಚೆನ್ನಾಗಿ ಕಾಣ್ತಾ ಇದ್ದೀಯಾ ಅಂತಾ ಹೇಳುವುದು. ಹೀಗೆ ವಿವಿಧ ಸ್ವರೂಪದ ಮಾತುಗಳು ಯಾವ ಮುಲಾಜುಗಳು ಇಲ್ಲದೇ ಸರಾಗವಾಗಿ ಬರುತ್ತದೆ. ಕೆಲವು ಅಸಾಹಯಕ ಮಹಿಳೆಯರನ್ನು ಉಪಯೋಗಿಸಲಾಗುತ್ತಿದೆ.
ಅಂತಹ ಮಹಿಳೆಯರು ಹೆಸರು ಹೊರಗಡೆ ಬರುತ್ತದೆ ಎಂದು ಹೆದರಿ ದೂರು ಕೊಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಕೋಲಾರಿನಲ್ಲಿದ್ದಾಗ ತನ್ನ ಮನೆಯ ಗೃಹಪ್ರವೇಶಕ್ಕೆ ಪ್ರತಿ ಅಂಗನವಾಡಿ ಕಾರ್ಯಕರ್ತೆಯಿಂದ 100ಕೊಡಬೇಕು ಎಂಬ ದೂರು ಈಗಗಾಲೇ ಕೇಂದ್ರ ಕಛೇರಿಯಲ್ಲಿದೆ. ಇಂತಹ ವ್ಯಕ್ತಿ ಇಲಾಖೆಗೆ ಕೆಟ್ಟಹೆಸರು ತರುವುದಲ್ಲದೇ ಐಸಿಡೊಎಸ್ನ ಕಣೋಟಕ್ಕೆ ಧಕ್ಕೆ ತರುತ್ತಿದ್ದಾರೆ ಆದ್ದರಿಂದ ಇವರನ್ನು ಮೊದಲು ವಜಾಗೊಳಿಸಬೇಕು ಎಂದು ವಿನಂತಿಸುತ್ತೇವೆ ಎಂದು ಮನವಿ ಮಾಡಿದರು.

[…] ಸಿಡಿಪಿಒ ಶಂಕರಮೂರ್ತಿ ರನ್ನು ಕೆಲಸದಿಂದ ವಜ… […]