Oplus_16908288
ಸಾಮಾನ್ಯವಾಗಿ ಶುಗರ್ ಕಾಯಿಲೆ ಅಥವಾ ಮಧುಮೇಹ (Diabetes) ಬಂದ್ರೆ ಡಾಕ್ಟರ್ಸ್ ಅನ್ನ ತಿನ್ನೋದು ಕಮ್ಮಿ ಮಾಡಿ ಅಂತಾರೆ. ಆದ್ರೆ ಇಲ್ಲೊಬ್ರು ಲೇಡಿ ಡಾಕ್ಟರ್ ಬರೋಬ್ಬರಿ 10 ವರ್ಷದಿಂದ ಅನ್ನ, ಚಪಾತಿನೇ ಮುಟ್ಟಿಲ್ಲ ಅಂದ್ರೆ ನಂಬ್ತೀರಾ? ಹೌದು, ಎಂಬಿಬಿಎಸ್ ಓದುತ್ತಿರುವ ಮತ್ತು ಆರೋಗ್ಯ ತಜ್ಞೆಯಾಗಿರುವ ಆಕೃತಿ ಗೋಯಲ್, ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ತಮ್ಮ ಫಿಟ್ನೆಸ್ ಸೀಕ್ರೆಟ್ (Fitness Secret) ಬಿಚ್ಚಿಟ್ಟಿದ್ದಾರೆ.
ಅನ್ನ, ರೊಟ್ಟಿ ಬಿಟ್ಟು ಅವರು ತಿಂದಿದ್ದೇನು? ಅವರ ಎನರ್ಜಿ (Energy) ಡಬಲ್ ಆಗಿದ್ದು ಹೇಗೆ? ಅನ್ನೋ ರೋಚಕ ವಿಷ್ಯ ಇಲ್ಲಿದೆ ನೋಡಿ.
ದೋಸೆ ಅಲ್ಲ, ಇದು ಬೇಳೆ ಚಿಲಾ!
ಕಳೆದ 10 ವರ್ಷಗಳಿಂದ ಇವರು ಅನ್ನ ಮತ್ತು ರೊಟ್ಟಿಯಿಂದ ದೂರವೇ ಇದ್ದಾರೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಇವರು ಗೋಧಿ ಮತ್ತು ಅಕ್ಕಿಯ ಬದಲಿಗೆ ‘ಹೆಸರು ಬೇಳೆ ಚಿಲಾ’ (Moong Dal Chilla) ತಿನ್ನೋಕೆ ಶುರು ಮಾಡಿದ್ದಾರೆ. ಇದೊಂದು ಪ್ರೋಟೀನ್ ಬಾಂಬ್ ಇದ್ದ ಹಾಗೆ. ಯಾವುದೇ ತರಕಾರಿ ಜೊತೆ ಈ ಬೇಳೆ ದೋಸೆ ಅಥವಾ ಚಿಲಾ ತಿನ್ನೋದ್ರಿಂದ ಹೊಟ್ಟೆಯೂ ತುಂಬುತ್ತೆ, ಆರೋಗ್ಯಕ್ಕೂ ಒಳ್ಳೇದು.
ಶುಗರ್ ಕಾಯಿಲೆ ಬರೋದೇ ಬೇಡ!
ಆಕೃತಿ ಅವರು ಇಂಥಾ ಕಠಿಣ ನಿರ್ಧಾರ ತಗೊಳ್ಳೋಕೆ ಒಂದು ಬಲವಾದ ಕಾರಣ ಇದೆ. ಅದೇನೆಂದ್ರೆ ಅವರ ಇಡೀ ಕುಟುಂಬಕ್ಕೆ ಮಧುಮೇಹದ ಹಿಸ್ಟರಿ ಇದೆ. “ನನ್ನ ಫ್ಯಾಮಿಲಿಯಲ್ಲಿ ಎಲ್ಲರಿಗೂ ಶುಗರ್ ಇದೆ, ನನಗೂ ಆ ಕಾಯಿಲೆ ಬರೋದು ಇಷ್ಟ ಇಲ್ಲ” ಅಂತ ಅವರು ನೇರವಾಗಿಯೇ ಹೇಳ್ತಾರೆ. ಕಾಯಿಲೆ ಬಂದ ಮೇಲೆ ಒದ್ದಾಡೋದಕ್ಕಿಂತ, ಬರೋ ಮುಂಚೆನೇ ಎಚ್ಚರ ವಹಿಸೋದು ಬುದ್ಧಿವಂತಿಕೆ ಅಲ್ವಾ?
ಕುದುರೆಯಷ್ಟು ಬಲ ಬಂತು!
ಅನ್ನ, ಚಪಾತಿ ತಿಂದಿಲ್ಲ ಅಂದ್ರೆ ಸುಸ್ತು ಆಗಲ್ವಾ? ಅಂತ ನೀವು ಕೇಳಬಹುದು. ಆದ್ರೆ ಆಕೃತಿ ಅವರ ಪ್ರಕಾರ, ಅವರಿಗೆ ಈಗ ಮೊದಲಿಗಿಂತ ಡಬಲ್ ಎನರ್ಜಿ ಇದೆ. 34 ವರ್ಷ ವಯಸ್ಸಿನಲ್ಲೂ ತಮ್ಮ ಬ್ಯಾಚ್ನ ಇತರೆಲ್ಲಾ ವಿದ್ಯಾರ್ಥಿಗಳಿಗಿಂತ ತಾವೇ ಹೆಚ್ಚು ಆಕ್ಟಿವ್ ಅಂತ ಅವರು ಹೆಮ್ಮೆಯಿಂದ ಹೇಳ್ಕೋತಾರೆ. ಕಾರ್ಬೋಹೈಡ್ರೇಟ್ಸ್ ಬಿಟ್ಟರೆ ವೀಕ್ ಆಗ್ತೀವಿ ಅನ್ನೋದು ಸುಳ್ಳು ಅಂತ ಇವರು ಪ್ರೂವ್ ಮಾಡಿದ್ದಾರೆ.
ಜಿಮ್ ವರ್ಕೌಟ್ ಮಿಸ್ಸೇ ಇಲ್ಲ!
ಬರೀ ಊಟ ಕಂಟ್ರೋಲ್ ಮಾಡಿದ್ರೆ ಸಾಲದು, ದೇಹಕ್ಕೆ ಕೆಲಸ ಕೂಡ ಕೊಡಬೇಕು. ಆಕೃತಿ ಅವರು ವಾರಕ್ಕೆ 5 ದಿನ ತಪ್ಪದೇ ‘ಸ್ಟ್ರೆಂತ್ ಟ್ರೈನಿಂಗ್’ (Strength Training) ಮಾಡ್ತಾರೆ. ಜಿಮ್ ಮತ್ತು ಸರಿಯಾದ ಡಯಟ್, ಇವೆರಡೂ ಸೇರಿದ್ರೆ ರಿಸಲ್ಟ್ ಪಕ್ಕಾ ಇರುತ್ತೆ. ಅನ್ನ ಬಿಟ್ಟ ಮಾತ್ರಕ್ಕೆ ಶಕ್ತಿ ಕುಂದಿಲ್ಲ, ಬದಲಿಗೆ ಹೆಚ್ಚಾಗಿದೆ ಅನ್ನೋದಕ್ಕೆ ಇವರೇ ಸಾಕ್ಷಿ.
ಗೋಧಿಗಿಂತ ಬೇಳೆಯೇ ಬೆಸ್ಟ್!
ಗೋಧಿ ರೊಟ್ಟಿ ಜೀರ್ಣ ಆಗೋಕೆ ಟೈಮ್ ತಗೊಳ್ಳುತ್ತೆ, ಕೆಲವೊಮ್ಮೆ ತಿಂದ ಮೇಲೆ ನಿದ್ದೆ ಬಂದ ಹಾಗೆ ಅಥವಾ ಆಲಸ್ಯ ಆಗುತ್ತೆ. ಆದ್ರೆ ಹೆಸರು ಬೇಳೆ ಅಥವಾ ಬೇರೆ ಕಾಳುಗಳ ಚಿಲಾ ತಿಂದ್ರೆ ಆ ಸಮಸ್ಯೆ ಇಲ್ಲ. ಇದು ಜೀರ್ಣಿಸಿಕೊಳ್ಳಲು ತುಂಬಾ ಈಜಿ ಮತ್ತು ಗೋಧಿಗಿಂತ ಹೆಚ್ಚು ಫೈಬರ್ ಇದರಲ್ಲಿರುತ್ತೆ. ರಕ್ತದಲ್ಲಿ ಸಕ್ಕರೆ ಮಟ್ಟ ಏರುಪೇರಾಗಲ್ಲ.
ಯಂಗ್ ಏಜ್ನಲ್ಲೇ ಎಚ್ಚರ ವಹಿಸಿ!
ನಾವು 30 ಅಥವಾ 40ರ ವಯಸ್ಸಲ್ಲಿ ಇದ್ದಾಗ ಆರೋಗ್ಯದ ಕಡೆ ಗಮನ ಕೊಡಲ್ಲ, ಮಜಾ ಮಾಡ್ತೀವಿ. ಆದ್ರೆ 50 ದಾಟಿದ ಮೇಲೆ ಕಾಯಿಲೆಗಳು ದಾಳಿ ಇಡ್ತವೆ. “ಮಾತ್ರೆ ನುಂಗಿ ಬದುಕೋದಕ್ಕಿಂತ, ಜೀವನಶೈಲಿ ಬದಲಿಸಿಕೊಂಡು ಆರೋಗ್ಯವಾಗಿರೋದು ಮುಖ್ಯ” ಅಂತ ಆಕೃತಿ ಎಲ್ಲರಿಗೂ ವಾರ್ನಿಂಗ್ ಕೊಡ್ತಿದ್ದಾರೆ.
ಮನಸ್ಸು ಮಾಡಿದ್ರೆ ಏನೂ ಕಷ್ಟ ಅಲ್ಲ!
ಒಬ್ಬರು 10 ವರ್ಷ ಇಷ್ಟೆಲ್ಲಾ ಕಂಟ್ರೋಲ್ ಮಾಡ್ತಾರೆ ಅಂದ್ರೆ ಅವರ ವಿಲ್ ಪವರ್ಗೆ ಒಂದು ಸಲಾಂ ಹೇಳ್ಲೇಬೇಕು. ಎಲ್ಲರಿಗೂ ಅನ್ನ ಬಿಡೋಕೆ ಆಗಲ್ಲ ನಿಜ, ಆದ್ರೆ ಕನಿಷ್ಠ ಪಕ್ಷ ವಾರದಲ್ಲಿ ಕೆಲವೊಂದು ದಿನವಾದ್ರೂ ಅನ್ನ, ರೊಟ್ಟಿ ಬದಲು ಈ ರೀತಿ ಬೇಳೆ ಕಾಳುಗಳ ಆಹಾರ ಸೇವಿಸಿದ್ರೆ ಮಧುಮೇಹದಿಂದ ದೂರ ಇರಬಹುದು.
