ಕೊರಟಗೆರೆ:- ಗ್ಯಾರಂಟಿ ಯೋಜನೆಗೆ ಮಾತ್ರ ದುಡ್ಡು ಕೋಡ್ತಾರೇ, ಅಭಿವೃದ್ದಿ ಕಾಮಗಾರಿಗಳಿಗೆ ಅನುಧಾನ ನೀಡುತ್ತಿಲ್ಲ ಎಂಬುದು ವಿರೋಧ ಪಕ್ಷದ ಆರೋಪ. ಟಿಕೆ ಟಿಪ್ಪಣಿಗಳು ಸರ್ವೆ ಸಾಮಾನ್ಯ ಅದಕ್ಕೆ ನನ್ನ ಅಭಿವೃದ್ದಿ ಕಾಮಗಾರಿಗಳೇ ಉತ್ತರ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಟಾಂಗ್ ನೀಡಿದರು.
ಕೊರಟಗೆರೆ ಪಟ್ಟಣ ಮತ್ತು ತಾಲೂಕಿನಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಭಾನುವಾರ ಏರ್ಪಡಿಸಲಾಗಿದ್ದ 14ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇರವೇರಿಸಿ ಮಾತನಾಡಿದರು.
ಕೇಂದ್ರ ಸರಕಾರ 53ಲಕ್ಷ ಕೋಟಿ ಬಜೇಟ್ ಮಂಡಿಸಿದೆ ಅದರಲ್ಲಿ 14ಲಕ್ಷ ಕೋಟಿ ಸಾಲ ಮಾಡಿದೆ. ನಮ್ಮ ರಾಜ್ಯ ಸರಕಾರ 4ಲಕ್ಷ 48ಸಾವಿರ ಬಜೇಟ್ ಮಂಡಿಸಿದೆ. ಬಜೇಟ್ ಗಾತ್ರದಲ್ಲಿ ಶೇ.25ರಷ್ಟು ಒಳಗೆ ಸಾಲ ಮಾಡಲು ನಮ್ಮ ಸರಕಾರಕ್ಕೂ ಅವಕಾಶವಿದೆ. ನಮ್ಮ ದೇಶ ಸೇರಿ ಎಲ್ಲಾ ರಾಜ್ಯಗಳು ಇದನ್ನೇ ಮಾಡುತ್ತವೆ ಇದರ ಮಾಹಿತಿ ವಿರೋಧ ಪಕ್ಷಗಳಿಗೆ ಸರಿಯಾಗಿ ಇಲ್ಲ ಎಂದು ಹೇಳಿದರು.
ನಮ್ಮ ರಾಜ್ಯದ ಸಿಎಂ ನನ್ನ ಕ್ಷೇತ್ರದ ಅಭಿವೃದ್ದಿಗೆ 50ಕೋಟಿ ಅನುಧಾನ ನೀಡಿದ್ದಾರೆ. ಗ್ರಾಮೀಣ ರಸ್ತೆ ಮತ್ತು ಮೂಲ ಸೌಲಭ್ಯ ಅಭಿವೃದ್ದಿಗೆ ವಿಶೇಷ ಆಧ್ಯತೆ ನೀಡಲಾಗಿದೆ. ಗ್ಯಾರಂಟಿ ಯೋಜನೆಯ ಜೊತೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತೀವೆ. ಶಂಕುಸ್ಥಾಪನೆ ಆದ ಕಾಮಗಾರಿಗಳನ್ನು ಗುತ್ತಿಗೆದಾರರು ತ್ವರಿತವಾಗಿ ಮುಗಿಸಿ ಅಭಿವೃದ್ದಿಗೆ ಸಹಕಾರ ನೀಡಬೇಕಿದೆ ಎಂದರು.

ಬೆಂಗಳೂರು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಮಾತನಾಡಿ ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಗೃಹಸಚಿವ ಡಾ.ಜಿ.ಪರಮೇಶ್ವರ ಕನಸಿನ ಕೂಸು ಒಳಾಂಗಣ ಮತ್ತು ಹೊರಂಗಣ ಕ್ರೀಡಾಂಗಣಕ್ಕೆ 7ಕೋಟಿ ಕೊರಟಗೆರೆಗೆ ಬಂದಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳು ಕ್ರಿಡಾಂಗಣದ ಅನುಕೂಲ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಅಶ್ವಿಜಾ, ಎಸ್ಪಿ ಅಶೋಕ್, ಮಧುಗಿರಿ ಎಸಿ ಗೋಟುರು ಶಿವಪ್ಪ, ತಹಶೀಲ್ದಾರ್ ಮಂಜುನಾಥ, ತಾಪಂ ಇಓ ಅಪೂರ್ವ, ಎಇಇ ಕೆಆರ್ಐಡಿಎಲ್ ನಾಗಯ್ಯ, ಎಇಇ ಸಿಂಧು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆಶಂಕರ್, ಮಹಿಳಾಧ್ಯಕ್ಷೆ ಜಯಮ್ಮ ಮುಖಂಡರುಗಳಾದ ವಾಲೆ ಚಂದ್ರಯ್ಯ, ದಿನೇಶ್, ಕೆ ಆರ್ ಓಬಳರಾಜ್, ರಾಜಣ್ಣ, ವೆಂಕಟೇಶ್ ,ರಂಗರಾಜು, ಗೋಪಿ ಯುವಧ್ಯಕ್ಷ ಬೈರೇಶ್ , ಸೇರಿದಂತೆ ಇತರರು ಹಾಜರಿದ್ದರು.
14ಕೋಟಿ ಕಾಮಗಾರಿಗೆ ಚಾಲನೆ..
4ಕೋಟಿ 23ಲಕ್ಷದ ರಾಜೀವ್ಗಾಂಧಿ ಒಳಾಂಗಣ ಕ್ರೀಡಾಂಗಣ ಮತ್ತು 21ಲಕ್ಷದ ವನಧನ ವಿಕಾಸಕೇಂದ್ರ ಉದ್ಘಾಟನೆ, 3ಕೋಟಿಯ ಹೊರಂಗಣ ಗ್ಯಾಲರಿ, 1ಕೋಟಿ 50ಲಕ್ಷದ ತಾಲೂಕು ಆಡಳಿತ ಕಚೇರಿ ರಸ್ತೆ, 2ಕೋಟಿಯ ತಾಪಂ ನೂತನ ಕಟ್ಟಡ, ,60ಲಕ್ಷ ಬಯಲು ಆಂಜನೇಯ ರಸ್ತೆ, 1ಕೋಟಿಯ ಸೋಂಪುರ ರಸ್ತೆಗೆ ಶಂಕುಸ್ಥಾಪನೆ ಸೇರಿ ವಿವಿಧ ಕಾಮಗಾರಿಗಳಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ನೇರವೇರಿಸಿದರು.
ಏಪ್ರಿಲ್ನಲ್ಲಿ ಕಬ್ಬಡಿ ಮತ್ತು ಕ್ರಿಕೇಟ್..
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಯುವ ಸ್ನೇಹಿತರಿಂದ ಜಿಲ್ಲಾಮಟ್ಟದ ಕಬ್ಬಡಿ ಮತ್ತು ಕ್ರಿಕೇಟ್ ಪಂಧ್ಯಾವಳಿಗೆ ಅನುಮತಿ ನೀಡಿದ್ದೇನೆ. ಏಪ್ರೀಲ್ ಮಾಹೆಯೇ ಕ್ರೀಡಾಪಟುಗಳಿಗೆ ಕ್ರೀಡಾಸ್ಪೂರ್ತಿ ತುಂಬಿ ಯುವಕರಿಗೆ ಉತ್ತೇಜನ ನೀಡಲಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಶುಭಹಾರೈಸಿದರು.
ಕರ್ನಾಟಕ ರಾಜ್ಯದ ಅನೇಕ ಕ್ಷೇತ್ರಗಳ ಅಭಿವೃದ್ದಿಯಲ್ಲಿ ನಮ್ಮ ತುಮಕೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲಾಧಿಕಾರಿ, ಜಿಪಂ ಸಿಇಓ, ಎಸ್ಪಿ ಸೇರಿ ತುಮಕೂರು ಜಿಲ್ಲಾಡಳಿತ ಶ್ರಮವಿದೆ. ಟೀಕೆಟಿಪ್ಪಣಿ ರಾಜಕಾರಣಿಗೆ ಮಾತ್ರವಲ್ಲ ಅಧಿಕಾರಿಗಳಿಗೂ ಸರ್ವೇಸಾಮಾನ್ಯ ಅಭಿವೃದ್ದಿಯೇ ಅದಕ್ಕೆ ಉತ್ತರ.
– ಡಾ.ಜಿ.ಪರಮೇಶ್ವರ. ಗೃಹಸಚಿವ. ಕರ್ನಾಟಕ
ವರದಿ- ಶ್ರೀನಿವಾಸ್ ಕೊರಟಗೆರೆ.
